ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.
ನಾ ಕಂಡಂತೆ ಕವಿ ಸಾಹಿತಿ.:- ಅನುಪಮಾ ಸುಲಾಖೆ.
ಇವರು ಶ್ರೀಮತಿ ಅನುಪಮ ಸುಲಾಖೆ ಗೃಹಿಣಿ.ಅನಿಲ್ ಕುಮಾರ್ ಸುಲಾಖೆ ಇವರ ಧರ್ಮಪತ್ನಿ
ಶಿವಮೊಗ್ಗ ನಗರದ ಬಾಲಚಂದ್ರ ರಾವ್ ನಾಜರೆ ಮತ್ತುಗಾಯತ್ರಿ ನಾಜರೆ ದಂಪತಿಯ ಪುತ್ರಿ. ಶಿವಮೊಗ್ಗದ ಮಕ್ಕಳ ವಿದ್ಯಾ ಸಂಸ್ಥೆ ಮತ್ತು ಕಸ್ತೂರಿ ಬಾ ಕಾಲೇಜಿನಲ್ಲಿ ಪಿಯುಸಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ.
ವೃತ್ತಿ ಯಿಂದ ಗೃಹೋದ್ಯಮಿಯೂ ಆಗಿರುವ ಇವರು ಓದು, ಬರೆಹ, ಗಾಯನ, ಯೋಗ, ಕರಕುಶಲತೆಯನ್ನು ಪ್ರವೃತ್ತಿಯಾಗಿ ಉಳಿಸಿಕೊಂಡಿದ್ದಾರೆ. ಇವರು ದೈನಂದಿನ ಸುಭಾಷಿತ ರಚನೆಯಲ್ಲಿ ಸಿದ್ಧಹಸ್ತರು
ಈವರೆಗೆ ಸುಮಾರು ೧೩೪೦ ಸುಭಾಷಿತ ರಚನೆ ಮಾಡಿದ್ದಾರೆ. ಜೊತೆಗೆ ಅಂತರ್ಜಾಲದ ಇನ್ನಿತರ ಸಾಹಿತ್ಯಿಕ ಬಳಗಗಳಲ್ಲಿ ಪ್ರತಿದಿನ ಹಂಚಿಕೊಳ್ಳುತ್ತಿದ್ದಾರೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ದಿನಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸಪತ್ರಿಕೆಗಳಲ್ಲಿ ಹಾಗೂ ಪ್ರಜಾವಾಣಿ, ಬೆಂಗಳೂರು ವಾಯ್ಸ್, ಪಿಸುಮಾತು, ಜನನಾಡಿ, ಜನ ಮಿಡಿತ, ಸ್ತ್ರೀ ಜಾಗೃತಿ, ದಿ ಜರ್ನಿ ಆಫ್ ಸೊಸೈಟಿ, ಹಂಪಿ ಟೈಮ್ಸ್ ,ಬಳ್ಳಾರಿ ಬೆಳಗಾಯಿತು, ಕಸ್ತೂರಿ ಪ್ರಭೆ, ಇಂದು ಸಂಜೆ ,ನಾಡಿನ ಸಮಾಚಾರ ,ಪ್ರತಿನಿಧಿ, ಮಾಳವಿ ಪತ್ರಿಕೆ, ಟೈಮ್ಸ್ ಆಫ್ ಕರ್ನಾಟಕ. ಮಾನಿನಿ ಪತ್ರಿಕೆಗಳಲ್ಲಿ ಇವರ ಲೇಖನ ಕವಿತೆಗಳು ಪ್ರಕಟವಾಗಿವೆ.
ಇವರು ರಚಿಸಿದ "ಚಿತ್ರ ಚೈತ್ರ" ಕವನ ಸಂಕಲನವು ೨೦೨೩ ರಲ್ಲಿ ಲೋಕಾರ್ಪಣೆಯಾಗಿದೆ. ೧) ಲೇಖನಗಳು ಸಂಗ್ರಹ ೨) ೧೦೦೦ : ಸುಭಾಷಿತ ಮಾಲಿಕೆ ೩) ಕವನ ಸಂಕಲನ ಎಂಬ ಮೂರು ಕೃತಿಗಳು ಅಚ್ಚಿನ ಮನೆಯಲ್ಲಿ ಇವೆ. ಇವರು ಮೈಸೂರು ದಸರಾ-೨೦೨೩, ಹಂಪಿ ಉತ್ಸವ ೨೦೨೩, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಮಟ್ಟ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಮಟ್ಟ, ಚುಟುಕು ಹನಿಗವನ ತಾಲೂಕು ಮತ್ತು ಜಿಲ್ಲಾ ಮಟ್ಟ, ಗೋವಿಂದ ಪೈ ಕಾವ್ಯ ಸ್ಪರ್ಧೆ, ಕರ್ನಾಟಕ ಸಂಘ ಶಿವಮೊಗ್ಗ ಕಾವ್ಯ ಸ್ಪರ್ಧೆ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮತದಾನ ಜಾಗೃತಿ ಅಭಿಯಾನದಲ್ಲಿ ಆಯ್ಕೆಯಾಗಿ ಮತ್ತು ಕವನ ವಾಚನ ಮಾಡಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕ್ರಮದಲ್ಲಿ ಉಪನ್ಯಾಸ, ವೃದ್ಧಾಶ್ರಮದಲ್ಲಿ ಚಿಂತನೆ ಉಪನ್ಯಾಸ. ಮಕ್ಕಳ ಸಾಹಿತ್ಯ ಪರಿಷತ್ತಿನಲ್ಲಿ ಜಾಗೃತಿ ಉಪನ್ಯಾಸ ಕಾಲೇಜು ವಿದ್ಯಾರ್ಥಿನಿಯರಿಗೆ ಜಾಗೃತಿ ಉಪನ್ಯಾಸ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿರುತ್ತಾರೆ. ಇವರು "ಮಲೆನಾಡ ಮಾತೆ" ರಾಜ್ಯ ಪ್ರಶಸ್ತಿ ರಚಿತ ಮಹಿಳಾ ಸಮಾಜ ಚಿಕ್ಕಮಗಳೂರು, "ಕರವೇ ರಾಜ್ಯೋತ್ಸವ ಪ್ರಶಸ್ತಿ" ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು. "ಗಾನಸಿರಿ ಕೋಗಿಲೆ ಪ್ರಶಸ್ತಿ" ರಾಜ್ಯ ಸಿರಿಗನ್ನಡ ಮಹಿಳಾ ವೇದಿಕೆ, ಪ್ರಜಾವಾಣಿ ಜಿಲ್ಲಾ ಮಟ್ಟದ ಅಮೃತ ಮಹೋತ್ಸವ ಆಯ್ಕೆ ಮತ್ತು ಸನ್ಮಾನ, "ಮಿಸಸ್ ಹಂಪಿ" ಪ್ರಶಸ್ತಿ ರೋಟರಿ ಸಂಸ್ಥೆ ಹೊಸಪೇಟೆ, ಕವಿ ವಿಭೂಷಣ ಪ್ರಶಸ್ತಿ ರಾಜ್ಯ ಮತ್ತು ಜಿಲ್ಲಾ ಮಟ್ಟ ಬೆಳಗಾವಿ. ಇನ್ನಿತರ ಸಂಘ, ಸಂಸ್ಥೆ, ಪ್ರತಿಷ್ಠಾನಗಳಿಂದ ಗೌರವಗಳಿಗೆ ಭಾಜನರಾಗಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವಿಜಯನಗರ ಉಪಾಧ್ಯಕ್ಷೆಯಾಗಿ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತು ಹೊಸಪೇಟೆಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಇಂದಿನ ಸಾಹಿತ್ಯಾಸಕ್ತರಿಗೆ "ಇಂದಿರುವ ಅಂತರ್ಜಾಲ ವ್ಯವಸ್ಥೆಯಿಂದಾಗಿ ಸಾಹಿತ್ಯದ ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಹೆಚ್ಚು ಕಡಿಮೆ ಅಂತರ್ಜಾಲ ಕವಿಗಳು ಹೆಚ್ಚಾಗಿದ್ದು ಪುಸ್ತಕ ರೂಪದಲ್ಲಿ ಬರವಣಿಗೆಯನ್ನು ಸಂಗ್ರಹಿಸಿಡುವ ವ್ಯವಸ್ಥೆ ಮರೆಯಾಗುತ್ತಾ ಬರುತ್ತಿದೆ. ಆದ್ದರಿಂದ ಪುಸ್ತಕ ಎನ್ನುವ ಆತ್ಮೀಯ ಸ್ನೇಹಿತನನ್ನು ಕೈಯಲ್ಲಿ ಹಿಡಿದು ಓದುವ, ಬಗಲಲ್ಲಿ ಹಿಡಿದು ಓಡಾಡುವ ಸಂಸ್ಕೃತಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ" ಎಂದು ಕಿವಿಮಾತು ಹೇಳುತ್ತಾರೆ.
ಉದ್ಯಮಿ ಅನಿಲ್ ಕುಮಾರ್ ಸುಲಾಖೆ (ಪತಿ), ಹಿರಿಯ ಪುತ್ರ ಅಮಿತ್ ಸುಲಾಖೆ ಬಿಇ (ವಿವಾಹಿತ) ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿ. ದ್ವಿತೀಯ ಪುತ್ರ ಅಕ್ಷಯ್ ಸುಲಾಖೆ ಬಿಇ ,ಬಿಬಿಎ (ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ.) ಇವರೊಡನೆ ಹೊಸಪೇಟೆ ವಿಜಯನಗರ ಜಿಲ್ಲೆಯಲ್ಲಿ ಪ್ರಸ್ತುತ ವಾಸವಾಗಿದ್ದಾರೆ. ಇವರ ಮುಂದಿನ ಬದುಕು ಬರೆಹಗಳು ಇನ್ನಷ್ಟೂ ಉನ್ನತಿಗೇರಿ ಜನಜನಿತರಾಗಲಿ ಎಂದು ಹಾರೈಸೋಣ.ಲೇಖಕರು
ಎಂದೆಂದಿಗೂ ಸಾಹಿತ್ಯ ಸೇವಾಕಾಂಕ್ಷಿ
ವೈಲೇಶ. ಪಿ.ಎಸ್.ಬೋಯಿಕೇರಿ.
ವಿರಾಜಪೇಟೆ. ಕೊಡಗು.
೮೮೬೧೪೦೫೭೩೮
ಬಹಳ ಸೊಗಸಾಗಿ ಬರೆದಿದ್ದೀರ.
ReplyDeleteಸುಂದರವಾದ ಸಾಹಿತಿಯ ಸೊಗಸಾದ ಪರಿಚಯ.
ಬಹಳ ಸೊಗಸಾಗಿ ಪರಿಚಯಿಸಿದ್ದೀರಿ ಸರ್
ReplyDelete👏👏👏 ಸೊಗಸಾಗಿದೆ
ReplyDelete