ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಮಾಲಿಕೆ:- ೪ ಅಮೃತ ಗೌಡ ಪಾಟೀಲ

ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಮಾಲಿಕೆ:- ೩ ಅಮೃತ ಗೌಡ ಪಾಟೀಲ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಡಲಗೇರಿಯ ನಾಗನಗೌಡ ಪಾಟೀಲರ ಪುತ್ರ ಅಮೃತಗೌಡ ಪಾಟೀಲರು. ರಾಯಚೂರು ಜಿಲ್ಲೆಯ ಮಾನ್ವಿ ಜಿಲ್ಲೆ ಕಸಬಾ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ. ಸೃಜನಶೀಲ ವ್ಯಕ್ತಿತ್ವದ ಇವರು ಸದಾ ಏನಾದರೊಂದು ಕೆಲಸವನ್ನು ಮಾಡುತ್ತಿರುತ್ತಾರೆ ಎನ್ನುವುದಕ್ಕಿಂತ ಎಲ್ಲ ರಂಗಗಳಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಇವರು ಕಲಿತ ವಿಚಾರ ವಿದ್ಯೆಗಳು ಈ ರೀತಿಯಲ್ಲಿ ಇವೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಗಾಯನ (ವಿದ್ವತ್) ಹಾಗೂ ಹಾರ್ಮೋನಿಯಂ ಸಾಥ್ ಜೊತೆಗೆ ತಮ್ಮ ಶಾಲಾ ಮಕ್ಕಳಿಗೆ ಸಂಗೀತದ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಬೈಕು ದುರಸ್ತಿ, ಕಾರು ದುರಸ್ತಿ, ಬಡಗಿ ಕೆಲಸ,ನೀರೆತ್ತುವ ಯಂತ್ರದ ರೀವೈಡಿಂಗ್ ನಂತಹ ಕೆಲಸದ ಜೊತೆಗೆ ಬೇಸಾಯ, ಪುರಾಣ ಹೇಳುವುದು, ಕನ್ನಡ ಛಂದಸ್ಸು ಸಂಸ್ಕೃತ ಛಂದಸ್ಸು ಹಾಗೂ ಕಾವ್ಯ ರಚನೆಯ ಕುರಿತು ಉಪನ್ಯಾಸ ನೀಡುವುದು. ನಾಟೀ ವೈದ್ಯ (ಆಯುರ್ವೇದ) , ಯಂತ್ರ ಮಂತ್ರ ತಂತ್ರ ವಿದ್ಯೆ, ಹೋಮ ಹವನ, ಮೂರ್ತಿ ಪ್ರತಿಷ್ಟಾಪನಾ ಕಾರ್ಯ ಮುಂತಾದವುಗಳನ್ನು ಕರಗತಗೊಳಿಸಿಕೊಂಡಿದ್ದಾರೆ. ಪ್ರವೃತ್ತಿಯಲ್ಲಿ ಕಥೆ,ಕವನ, ವಚನ, ನಾಟಕ, ಕಾವ್ಯ ಮತ್ತು ಶಬ್ದಕೋಶ ರಚನೆಯಂತಹ ಮಹತ್ವದ ಕೆಲಸವನ್ನೂ ಸಹ ಮಾಡುತ್ತಿರುತ್ತಾರೆ. ಇವರು ಶ್ರೀ ಶ್ರೀ ಷ...