ನಾ ಕಂಡ ನಾಡ ಸಾಹಿತಿಗಳ ಪರಿಚಯ ಮಾಲಿಕೆ :-೧. ಎ.ಎಸ್. ಪ್ರಭಾವತಿ ಪಿರಿಯಾಪಟ್ಟಣ
ರಾಜ್ಯ ಮಟ್ಟದ ಎಲೆಮರೆಯ ಸಾಹಿತಿಗಳ ಪರಿಚಯ ಮಾಲಿಕೆ:- ೧
ಎ ಎಸ್ ಪ್ರಭಾವತಿ ಎಂಬ ಇವರ ಕಾವ್ಯನಾಮ ಪ್ರಭಾರಾವ್
ಮೈಸೂರಿನ ಎ ಎನ್ ಸುಬ್ಬರಾವ್ ಮತ್ತು ಅನಂತಲಕ್ಷಮ್ಮ
ದಂಪತಿಗಳ ಪುತ್ರಿಯಾಗಿ 25-1-1953 ರಲ್ಲಿ ಜನಿಸಿದವರು
ಪ್ರವೃತ್ತಿಯಲ್ಲಿ ಸಂಗೀತ ಗಾಯನ ಮತ್ತು ಆಲಿಸುವುದು
ಒಳ್ಳೆಯ ಸಾಹಿತ್ಯ ವನ್ನು ಓದುವುದು ಹೂವಿನ ಗಿಡಗಳನ್ನು ಬೆಳೆಸುವುದು,ಭಜನೆ ದೇವರನಾಮಗಳನ್ನುಕಲಿಸುವುದು
ರಂಗೋಲಿ ಬಿಡಿಸುವುದು
ಸಾಹಿತ್ಯ ಸೇವೆಯ ವಿವರ
ಪಿರಿಯಾಪಟ್ಟಣ ದಲ್ಲಿ ಶ್ರೀಯುತ ಕಂಪಲಾಪುರ ಮೋಹನ್‌ರವರು ನಡೆಸುತ್ತಿದ್ದ ಮನೆ ಮನೆ ಕವಿಗೋಷ್ಠಿ ಯಲ್ಲಿ
ತಪ್ಪದೆ ಭಾಗವಹಿಸುತ್ತಿದ್ದವರು ಸ್ವತಃ ಇವರ ಮನೆಯಲ್ಲಿಯೂ
ಎರಡು ಬಾರಿ ಕವಿ ಗೋಷ್ಠಿಯನ್ನು ಪ್ರಾಯೋಜಿಸಿದ್ದಾರೆ
ಮೈಸೂರಿನ ಮುಕ್ತಕ ಅಕಾಡಮಿಯ ವತಿಯಿಂದ ನಡೆಸುವ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ
ಮುಕ್ತಕ ರಚನಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಇವರು1998ರಲ್ಲಿ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯ ಪ್ರಪಂಚ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ
2010ರಲ್ಲಿ ಮೈಸೂರು ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಪಿರಿಯಾಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ ಕವಿ ಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿರುವ ಇವರು ಕಂಪಲಾಪುರ ಮೋಹನ್‌ರವರು ಶಾಲೆ ಕಾಲೇಜುಗಳಲ್ಲಿ ನಡೆಸುತ್ತಿದ್ದ ಕವಿಗೋಷ್ಠಿಗಳಲ್ಲಿ ಮುಖ್ಯ ಅತಿಥಿಯಾಗಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.ದಾರಿ ದೀಪ, ಸಂಕೇತಿ ಸಂಗಮ, ಕಸ್ತೂರಿ, ಹೊಸ ದಿಗಂತ ಪತ್ರಿಕೆಗಳಲ್ಲಿ ಇವರ ಕವನ ಚುಟುಕುಗಳು ಪ್ರಕಟವಾಗಿವೆ. ದಾವಣಗೆರೆಯ ರಾಜಶೇಖರ್‌ರವರು ಪ್ರತಿವರ್ಷ ಹೊರತರುವ ಕವನ ಚುಟುಕು ಸಂಕಲನಗಳಲ್ಲಿಯೂ ಕವನ ಚುಟುಕಗಳು ಪ್ರಕಟವಾಗಿವೆ.
ನಿಜ ಹೇಳಬೇಕೆಂದರೆ ಇವರಿಗೆ ಅವಕಾಶಗಳು ಸಾಕಷ್ಟು ದೊರಕಿದ್ದರೂ ಸಹ ಇತಿಮಿತಿಯಲ್ಲಿ ಸಾಧ್ಯವಾದಷ್ಟು ಮಾತ್ರ
ಬಳಸಿಕೊಂಡಿರುತ್ತೇನೆ ಎಂದು ನುಡಿಯುತ್ತಾರೆ. ಓದುಗರು ಮೆಚ್ಚಿಕೊಂಡರೆ ಅದೇ ದೊಡ್ಡ ಪ್ರಶಸ್ತಿ ಎನ್ನುವ ಇವರಿಗೆ 2006 ರಲ್ಲಿ ಪಿರಿಯಾಪಟ್ಟಣದ ವಿಪ್ರ ಮಹಿಳಾ ವೇದಿಕೆಯ
ವತಿಯಿಂದ ಕಾವ್ಯ ರತ್ನ ಬಿರುದು ನೀಡಿ ಸನ್ಮಾನಿಸಿದ್ದಾರೆ ದಾರಿದೀಪ ಪತ್ರಿಕೆಯ ವತಿಯಿಂದ 2009 ರಲ್ಲಿ ಕಾವ್ಯ ಕ್ಷೇತ್ರದಲ್ಲಿ ಸನ್ಮಾನಿಸಿರುತ್ತಾರೆ
"ಶ್ರೀಯುತ ಕಂಪಲಾಪುರ ಮೋಹನ್‌ರವರು ಹಾಗೂ ನಮ್ಮ ಊರಿನವರೇ ಆದ ಎಸ್ ಟಿ ದಕ್ಷಿಣಾಮೂರ್ತಿಯವರು ನನ್ನ ಅಳಿಯಂದಿರಾದ ಬಿ ಎಸ್ ಸುಬ್ರಹ್ಮಣ್ಯರವರು
ನನ್ನ ಕುಟುಂಬದ ಸದಸ್ಯರು ಬಂಧುಮಿತ್ರರೆಲ್ಲರೂ ನನ್ನ ಕಾವ್ಯಾಸಕ್ತಿಯನ್ನು ಪ್ರೋತ್ಸಾಹಿಸಿದ್ದಾರೆ. ನನ್ನವರ ಸಂಪೂರ್ಣ
ಸಹಕಾರ ದೊರೆತಿರುವುದು ನನ್ನ ಪುಣ್ಯವೇ ಸರಿ. ಆಗತಾನೆ ಸಾಹಿತ್ಯ ಲೋಕದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ನನ್ನನ್ನು ಗೃಹಕೃತ್ಯದಲ್ಲೇ ಕಳೆದು ಹೋಗದೆ ಸಮಾಜಮುಖಿಯಾಗುವಂತೆ
ಹುರಿದುಂಬಿಸಿ ನಾಲ್ಕಾರು ಜನ ಗುರುತಿಸುವಂತೆ ಮಾಡಿದವರು ಕಂಪಲಾಪುರ ಮೋಹನ್‌ರವರು ಮನೆ ಮನೆ ಕವಿಗೋಷ್ಠಿ
ಎಂಬ ವೇದಿಕೆಯಲ್ಲಿ ಅರಳಿದ ಕುಸುಮ ಗಳುನೂರಾರು
ಅದರಲೊಂದು ಸುಮ ನಾನೆಂದು ಹೇಳಲು ಹೆಮ್ಮೆ ಎನಿಸುತ್ತದೆ" ಎನ್ನುತ್ತಾರೆ
1969 ರಲ್ಲಿ ಪಿರಿಯಾಪಟ್ಟಣದ ಪಿ ವಿ
ನಾಗೇಶರಾವ್ ಅವರೊಡನೆ ದಾಂಪತ್ಯ ಜೀವನ ನಡೆಸಿದ ಇವರಿಗೆ ಇಬ್ಬರು ಮಕ್ಕಳು ನಾಲ್ಕು ಜನ ಮೊಮ್ಮಕ್ಕಳು ಇದ್ದಾರೆ
ಪ್ರೀತಿಸುವ ಪತಿ ಆದರಿಸುವ ಮಕ್ಕಳು ಅಕ್ಕರೆ ತೋರುವ ಮೊಮ್ಮಕ್ಕಳಿಂದ ನಾನು ಸಂತೃಪ್ತಳಾಗಿದ್ದೇನೆ ಮನಕ್ಕೆ ಮುದ ನೀಡುವ ಹವ್ಯಾಸಗಳು ಪ್ರೀತಿ ಗೌರವದಿಂದ ನೋಡುವ ಊರಿನ ಜನತೆಯಿಂದ ನಮ್ಮ ಜೀವನ ಸಂಧ್ಯೆಯು ನೆಮ್ಮದಿಯಲ್ಲಿ ಸಾಗುತ್ತಿದೆ ಎನ್ನುವ ಇವರು ಮೊಮ್ಮಕ್ಕಳ ಒಡನಾಟವೇ ಸ್ಪೂರ್ತಿಯಾಗಿ ರೂಪುಗೊಂಡ ಕವನ ಸಂಕಲನ "ಮಡಿಲ ಮಲ್ಲಿಗೆ" 2004 ರಲ್ಲಿ ವಿಪ್ರ ಮಹಿಳಾ ವೇದಿಕೆಯ ವಾರ್ಷಿಕೋತ್ಸವದಲ್ಲಿ ಬಿಡುಗಡೆ ಮಾಡಿದ್ದಾರೆ
2006 ರಲ್ಲಿ ಅಂತರಂಗ ಎಂಬ ಎರಡನೆಯ ಕವನ ಸಂಕಲನ ,2014 ರಲ್ಲಿ ಮೂರನೇ ಕವನ ಸಂಕಲನವಾಗಿ ಮಂದಾರ ಮತ್ತು ಮಗಳ ಸಹಾಯದೊಂದಿಗೆ ಖಾದ್ಯ ವೈವಿಧ್ಯ ಎಂಬ ಅಡುಗೆಯ ಪುಸ್ತಕಮೈಸೂರಿನ ಇಂಜಿನಿಯರ್ ಸಭಾಂಗಣದಲ್ಲಿ ಬಿಡುಗಡೆ ಮಾಡಿದ್ದಾರೆ. ಖಾದ್ಯ ವೈವಿಧ್ಯ ಅಡುಗೆ ಪುಸ್ತಕವು 2015 ರಲ್ಲಿ ಎರಡನೇ ಮುದ್ರಣ ಕಂಡಿದೆ ಹೆಚ್ಚಿನ ಪ್ರಚಾರ ವಿಲ್ಲದೆ ಬಂಧು ಮಿತ್ರರಲ್ಲಿ ಒಂದು ಸಾವಿರ ಪ್ರತಿ ಗಳು ಮಾರಾಟವಾಗಿ ಒಳ್ಳೆಯ ಪ್ರತಿಕ್ರಿಯೆ ಬಂದಿರುತ್ತದೆ, ಪಿರಿಯಾಪಟ್ಟಣದ ವಿಪ್ರ ಮಹಿಳಾ ವೇದಿಕೆಯ
ಅಧ್ಯಕ್ಷಳಾಗಿ ಮೂರು ವರ್ಷ ಕೆಲಸ ಮಾಡಿದ್ದಾರೆ "ನಾವು ಬರಹದಲ್ಲಿ ತೊಡಗುವ ಮೊದಲು ಹೆಚ್ಚು ಅಧ್ಯಯನ ಶೀಲರಾಗಬೇಕು ನಮ್ಮ ಬರಹ ಸರಳವಾಗಿ ಸಹಜವಾಗಿ ಓದುಗರಮನ ಮುಟ್ಟುವಂತಿರಬೇಕು" ಎನ್ನುವ ಇವರ ಮುಂದಿನ ಬದುಕು ಉನ್ನತವಾಗಿರಲಿ ಎಂದು ಹಾರೈಸೋಣ.
ತಮ್ಮವ
ವೈಲೇಶ್ ಪಿ ಎಸ್
ತುಂಬು ಮನದ ಅಭಿನಂದನೆಗಳು
ReplyDeleteವೈಲೇಶ್ ಸರ್, ಸೂಪರ್.... ತಮ್ಮ ಕಾರ್ಯ ಶ್ಲಾಘನೀಯ....
ReplyDeleteಅಭಿನಂದನೆಗಳು 🌹
ReplyDeleteಅಭಿನಂದನೆಗಳು ಅಮ್ಮ....
ReplyDeleteಅಭಿನಂದನೆಗಳು ಮೇಡಂ 🙏🙏🙏
ReplyDeleteಅತ್ಯುತ್ತಮವಾದ ಸಾಹಿತ್ಯ ಸೇವೆ ವ್ಯಲೇಶ್ ಸರ್