ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಮಾಲಿಕೆ:- ೪ ಅಮೃತ ಗೌಡ ಪಾಟೀಲ
ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಮಾಲಿಕೆ:- ೩ ಅಮೃತ ಗೌಡ ಪಾಟೀಲ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಡಲಗೇರಿಯ ನಾಗನಗೌಡ ಪಾಟೀಲರ ಪುತ್ರ ಅಮೃತಗೌಡ ಪಾಟೀಲರು. ರಾಯಚೂರು ಜಿಲ್ಲೆಯ ಮಾನ್ವಿ ಜಿಲ್ಲೆ ಕಸಬಾ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ. ಸೃಜನಶೀಲ ವ್ಯಕ್ತಿತ್ವದ ಇವರು ಸದಾ ಏನಾದರೊಂದು ಕೆಲಸವನ್ನು ಮಾಡುತ್ತಿರುತ್ತಾರೆ ಎನ್ನುವುದಕ್ಕಿಂತ ಎಲ್ಲ ರಂಗಗಳಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಇವರು ಕಲಿತ ವಿಚಾರ ವಿದ್ಯೆಗಳು ಈ ರೀತಿಯಲ್ಲಿ ಇವೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಗಾಯನ (ವಿದ್ವತ್) ಹಾಗೂ ಹಾರ್ಮೋನಿಯಂ ಸಾಥ್ ಜೊತೆಗೆ ತಮ್ಮ ಶಾಲಾ ಮಕ್ಕಳಿಗೆ ಸಂಗೀತದ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಬೈಕು ದುರಸ್ತಿ, ಕಾರು ದುರಸ್ತಿ, ಬಡಗಿ ಕೆಲಸ,ನೀರೆತ್ತುವ ಯಂತ್ರದ ರೀವೈಡಿಂಗ್ ನಂತಹ ಕೆಲಸದ ಜೊತೆಗೆ ಬೇಸಾಯ, ಪುರಾಣ ಹೇಳುವುದು, ಕನ್ನಡ ಛಂದಸ್ಸು ಸಂಸ್ಕೃತ ಛಂದಸ್ಸು ಹಾಗೂ ಕಾವ್ಯ ರಚನೆಯ ಕುರಿತು ಉಪನ್ಯಾಸ ನೀಡುವುದು. ನಾಟೀ ವೈದ್ಯ (ಆಯುರ್ವೇದ) , ಯಂತ್ರ ಮಂತ್ರ ತಂತ್ರ ವಿದ್ಯೆ, ಹೋಮ ಹವನ, ಮೂರ್ತಿ ಪ್ರತಿಷ್ಟಾಪನಾ ಕಾರ್ಯ ಮುಂತಾದವುಗಳನ್ನು ಕರಗತಗೊಳಿಸಿಕೊಂಡಿದ್ದಾರೆ.
ಪ್ರವೃತ್ತಿಯಲ್ಲಿ ಕಥೆ,ಕವನ, ವಚನ, ನಾಟಕ, ಕಾವ್ಯ ಮತ್ತು ಶಬ್ದಕೋಶ ರಚನೆಯಂತಹ ಮಹತ್ವದ ಕೆಲಸವನ್ನೂ ಸಹ ಮಾಡುತ್ತಿರುತ್ತಾರೆ. ಇವರು ಶ್ರೀ ಶ್ರೀ ಷ ಬ್ರ ಶ್ರೀ ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿ ಪುರಾಣಂ ಎಂಬ ಕೃತಿಯಲ್ಲಿ ಕನ್ನಡದ ಎಲ್ಲ ಮಟ್ಟುಗಳು ಹಾಗೂ ಸಂಸ್ಕೃತ ಭಾಷೆಯ ಎಲ್ಲ ಛಂದಸ್ಸುಗಳ ಪ್ರಕಾರಗಳನ್ನು ಬಳಸಿಕೊಂಡು ಬರೆದು ಲೋಕಾರ್ಪಣೆ ಮಾಡಿದ್ದಾರೆ. ಹಾಗೂ ಪರಿಭ್ರಮಣೆ ಎಂಬ ಕವನ ಸಂಕಲನವನ್ನು ಸಹ ಲೋಕಾರ್ಪಣೆ ಮಾಡಿದ್ದಾರೆ. ಇದೀಗ ಛಂದೋಬದ್ಧ ಕಾವ್ಯ ರಚನಕಾರರಿಗೆ ಬಹಳ ಉಪಯುಕ್ತವಾದ ಕನ್ನಡ ಕನ್ನಡ ಪ್ರಾಸಗಳ ಶಬ್ದ ಕೋಶದ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಮಹಾ ಸಂಗಮ ಎಂಬ ಒಂದು ನಾಟಕದ ಕೃತಿಯೂ ಸಹ ಪ್ರಕಟಣೆಯ ಹಂತದಲ್ಲಿ ಇವೆ. "ನಾನೊಬ್ಬ ಸಾಹಿತ್ಯದ ಭಿಕ್ಷುಕ ನನ್ನ ಗುರು ಹಿರಿಯರಿಂದ ಪಡೆದ ಅಲ್ಪ ಜ್ಞಾನವನ್ನು ಯಾರೇ ಕೇಳಿದರೂ ಹಂಚಿಕೊಳ್ಳುತ್ತಿರುವೆ" ಎನ್ನುವ ಇವರು ನುಡಿದಂತೆ ನಡೆದುಕೊಂಡಿರುತ್ತಾರೆ. ಇವರ ಮುಂದಿನ ಬದುಕು ಬರಹಗಳು ನಾಡಿನ ಜನತೆಗೆ ದಾರಿ ದೀಪವಾಗಲಿ ಎಂದು ಹಾರೈಸೋಣ.
ತಮ್ಮವ ವೈಲೇಶ್ ಪಿ ಎಸ್ ಕೊಡಗು
೭/೫/೨೦೨೧
ಅದ್ಭುತ ಪ್ರತಿಭೆಯ ಪರಿಚಯ.. ಧನ್ಯವಾದಗಳು 🙏🙏
ReplyDeleteಅದ್ಭುತ ಪ್ರತಿಭಾವಂತರ ಪರಿಚಯ ತುಂಬಾ ಸಂತೋಷದಾಯಕವಾಗಿದೆ🙏🙏🙏
ReplyDeleteಅರ್ಥಪೂರ್ಣವಾದ ಬರಹ. ಪರಿಚಾಯಾತ್ಮಕವಾಗಿದೆ.ಧನ್ಯವಾದಗಳು
ReplyDelete🙏ಉತ್ತಮವಾದ ಕಾರ್ಯಕೊಂದು ನನ್ನ ನಮನಗಳು 🙏🙏🌹
ReplyDeleteನಮ್ಮ ಗುರುಗಳ ಕುರಿತು ಮತ್ತಷ್ಟು ಪರಿಚಯ ಮಾಡಿಕೊಟ್ಟ ವೈಲೇಶ್ ಗುರುಗಳಿಗೆ ಧನ್ಯವಾದಗಳು 🙏🙏🙏🙏🙏🙏🙏🙏🙏🙏 ಅದ್ಭುತ ಪ್ರತಿಭೆ ಪರಿಚಯ
ReplyDelete