ಜಿ. ಎನ್. ಶ್ಯಾಮಸುಂದರ್
ನಾ ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:-೩ ಜಿ.ಎನ್.ಶಾಮಸುಂದರ್
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಶಾನುಭೋಗ್ ಜಿ.ಎಸ್. ನರಸಿಂಹ ಮೂರ್ತಿ ಹಾಗೂ ಜಿ.ಎನ್. ಕಮಲಮ್ಮ ಅವರ ದ್ವಿತೀಯ ಪುತ್ರರಾಗಿ ದಿನಾಂಕ 27-07-1956 ರಂದು ಜನಿಸಿದವರು. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಚಿಂತಾಮಣಿ ಮುನ್ಸಿಪಾಲ್ ಪ್ರೌಢಶಾಲೆಯಲ್ಲಿ ಮುಗಿಸಿದ ಇವರು ಟಿಸಿಹೆಚ್ ಪೂರೈಸಿ ಶಿಕ್ಷಕರಾಗಿ ಶಿಡ್ಲಘಟ್ಟದ ಅನುದಾನಿತ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಕರಾಗಿ 31 ವರ್ಷಗಳ ಸುದೀರ್ಘ ಸೇವೆ ಮಾಡಿ 2016 ರಲ್ಲಿ ವಯೋ ನಿವೃತ್ತಿಯನ್ನು ಪಡೆದಿರುವರು.
ತಮ್ಮ ವಂಶಪಾರಂಪರ್ಯವಾಗಿ ಬಂದ ಸಂಗೀತವನ್ನು ಅಭ್ಯಸಿಸಿ ಕರ್ನಾಟಕ ಕಲಾಶ್ರೀ ಹೆಚ್. ಬಿ. ನಾರಾಯಣಾಚಾರ್ ಅವರಲ್ಲಿ ಪಿಟೀಲು ಅಭ್ಯಾಸ ಮಾಡಿದ್ದಾರೆ ಪ್ರವೃತ್ತಿಯಾಗಿ ನಾನ್ನೂರಕ್ಕೂ ಹೆಚ್ಚು ಹರಿಕಥೆಗಳಲ್ಲಿ, ನೂರಾರು ಸಂಗೀತ ಕಚೇರಿಗಳಲ್ಲಿ,ಹಲವಾರು ತ್ಯಾಗರಾಜರ ಆರಾಧನಾ ಕಾರ್ಯಕ್ರಮಗಳಲ್ಲಿ ತಮ್ಮ ಅಮೂಲ್ಯವಾದ ಪಿಟೀಲು ವಾದನದ ಸಹಕಾರ ನೀಡಿರುತ್ತಾರೆ.
ಮೈಸೂರಿನ ದಸರಾ ಉತ್ಸವದಲ್ಲೂ ಸಹ ಎರಡುಬಾರಿ ಸಂಗೀತ ಕಾರ್ಯಕ್ರಮದಲ್ಲಿ ವಾದ್ಯ ಸಹಕಾರ ನೀಡಿರುತ್ತಾರೆ. ಇವರ ಸಂಗೀತ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ-ಸಂಸ್ಥೆಗಳು ಇವರಿಗೆ
ನಾದಚಿಂತಾಮಣಿ,
ನಾದ ಚೂಡಾಮಣಿ,
ಸಂಗೀತ ಕಲಾ ತಪಸ್ವಿ,
ಚಿಂತಲಪಲ್ಲಿ ಪರಂಪರಾ ನಿಧಿ,
ಪಿಟೀಲು ಕಲಾ ಭೂಷಣ ಇತ್ಯಾದಿ ಬಿರುದುಗಳನ್ನು ಕೊಟ್ಟು ಗೌರವಿಸಿರುತ್ತಾರೆ.
ಇವರು ಅನೇಕ ಶಿಷ್ಯರಿಗೆ ಪಿಟೀಲು ಕಲಿಸಿ ಕೊಡುತ್ತಿರುತ್ತಾರೆ.
ಇವರ ಮತ್ತೊಂದು ಪ್ರವೃತ್ತಿ ಸಾಹಿತ್ಯದ ಓದು ಮತ್ತು ರಚನೆ. ನಿವೃತ್ತಿಯ ನಂತರ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ಷಟ್ಪದಿಗಳು, ಕಂದಪದ್ಯಗಳು, ರಗಳೆ, ಸಾಂಗತ್ಯ, ಮುಕ್ತಕಗಳು, ಬಂಧಗಳು, ರೂಬಾಯಿ, ಟಂಕಾ, ಹನಿಗವನಗಳು ಮುಂತಾದ ಪ್ರಕಾರಗಳಲ್ಲಿ ಬರೆಯುತ್ತಾ ಬಂದಿದ್ದಾರೆ.
ತಾಲ್ಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್,
ವಚನ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ನ ಮನೆ ಮನೆ ಕವಿಗೋಷ್ಠಿಗಳಲ್ಲಿ ಸಕ್ರಿಯವಾಗಿದ್ದು ಸ್ವರಚಿತ ಕವನ, ಚುಟುಕು, ವಾಚನ ಮಾಡಿರುತ್ತಾರೆ. ಸನ್ಮಾನಗಳನ್ನು ಪಡೆದಿರುತ್ತಾರೆ.
ಹನಿ ಹನಿ ಇಬ್ಬನಿ ವಾಟ್ಸಾಪ್ ಬಳಗದಿಂದ "ಬಳಗದ ಷಟ್ಪದಿ ಬ್ರಹ್ಮ" ಎಂಬ ಬಿರುದಿನೊಂದಿಗೆ ೨೦೧೭ ರಲ್ಲಿ "ಪ್ರಶಸ್ತಿ"ನೀಡಿ ಗೌರವಿಸಿದೆ.
ಸ್ನೇಹ ಸಂಗಮ ಸಾಹಿತ್ಯ ಬಳಗದಿಂದ
೨೦೧೮ ರಲ್ಲಿ "ಕಾವ್ಯ ವಿಭೂಷಣ ಪ್ರಶಸ್ತಿ" ಇವರ ಮುಡಿಗೇರಿದೆ.
ಮತ್ತು ಇದೇ ಬಳಗ ತನ್ನ ಎರಡನೇ ವರ್ಷದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಸರ್ವಾಧ್ಯಕ್ಷ ರನ್ನಾಗಿಸಿ ಗೌರವಿಸಿದೆ.
2019ರಲ್ಲಿ ಇವರ ಮೊದಲ ಕವನ ಸಂಕಲನ
"ಶಾಮಗಾನ" ಲೋಕಾರ್ಪಣೆಗೊಂಡಿದೆ.
ಇವರ ಮತ್ತೊಂದು ಕೃತಿ "ಮುಕ್ತಕ ಮಂದಾರ"2024 ಜನವರಿಯಲ್ಲಿ ಲೋಕಾರ್ಪಣೆಯಾಗಿದೆ.
ಇದನ್ನು ತಂಬಿಹಳ್ಳಿ ಶ್ರೀಶ್ರೀಶ್ರೀ ವಿದ್ಯಾಸಾಗರ ಮಾದವ ತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆ ಮಾಡಿದರಲ್ಲದೆ "ಸಂಗೀತ ಸಾಹಿತ್ಯ ಕಲಾವಿಶಾರದ"ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿ ಹಾರೈಸಿದ್ದಾರೆ.
ಎಂದೆಂದಿಗೂ ಸಾಹಿತ್ಯ ಸೇವಾಕಾಂಕ್ಷಿ
ವೈಲೇಶ. ಪಿ.ಎಸ್ ಕೊಡಗು
8861405738
Great personslity
ReplyDeleteಅಭಿನಂದನೆಗಳು ಸರ್ 🙏🌹
ReplyDeleteಅಭಿನಂದನೆಗಳು ಸರ್..
ReplyDeleteನಿಜವಾಗಿಯೂ ಅನರ್ಘ್ಯ ರತ್ನ. . ಪರಿಚಯ ಓದಿ ಸಂತಸವಾಯಿತು
ReplyDeleteಅಭಿನಂದನೆಗಳು ಸರ್ 🌹🌹
ReplyDelete