ಶರಣರ ಹಿರಿಮೆಯನ್ನು ಮರಣದಲ್ಲಿ ಕಾಣು ಎನ್ನುವುದು ವಾಡಿಕೆಯ ನುಡಿಗಟ್ಟು. ಒಬ್ಬ ವ್ಯಕ್ತಿ ಬದುಕಿರುವಾಗ ಮತ್ತೊಬ್ಬರನ್ನು ಹೊಗಳಿ ಅಥವಾ ಪ್ರಭಾವ ಬೀರುವ ಮೂಲಕ ತನ್ನನ್ನು ಹೊಗಳಿಸಿಕೊಳ್ಳಬಹುದು. ಅಥವಾ ಅವರಿಂದ ಪ್ರಯೋಜನ ಪಡೆಯಲೆಂದು ಹೊಗಳುವವರು ಇರಬಹುದು. ಅಂತಹ ಹೊಗಳಿಕೆಗಳಿಂದ ಬದುಕಿರುವ ಅವರಿಗೆ ಮುಜುಗರವೂ ಉಂಟಾಗಬಹುದು. ಇಂದಿನವರೆಗೆ ಅದೆಷ್ಟೋ ಪ್ರಾಧ್ಯಾಪಕರು ತಮ್ಮ ಶಿಷ್ಯ ಕೋಟಿಗಳನ್ನು ಹೊಂದಿರಬಹುದು ಆದರೆ ಕಿ.ರಂ. ನಾಗರಾಜ್‌ರವರಿಗೆ ದೊರಕಿದಂತಹ ಶಿಷ್ಯರು ದೊರಕದೆ ಇರಬಹುದೇ. ಅಥವಾ ಗುರುಶಿಷ್ಯರ ಅವಿನಾವ ಸಂಬಂಧಗಳೆಂದರೆ ಕಿ.ರಂ ಹಾಗೂ ಅವರ ಶಿಷ್ಯರುಗಳಂತೆ ಇರಬೇಕೆಂಬುದನ್ನು  ಇಂದಿನ ದಿನಮಾನಗಳಲ್ಲಿ ನಾವೆಲ್ಲರೂ ಅರಿಯಬೇಕಿದೆ. ಅಂತಹ ಕಿ.ರಂ ಕುರಿತು ಇಂದು ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡಿಕೊಳ್ಳುವ ಬನ್ನಿ.

ಹಾಸನ ಜಿಲ್ಲೆ ಸಾಹಿತ್ಯದ ಸಾಹಿತಿಗಳ ತವರು ಎಂದರೆ ಅತಿಶಯೋಕ್ತಿಯಲ್ಲ ಅಂತಹ ಹಾಸನ ಜಿಲ್ಲೆಯ ಕಿತ್ತಾ‌ನೆ  ಗ್ರಾಮದಲ್ಲಿ ರಂಗಣ್ಣ ನಾಗರಾಜ್‌ರವರು ಡಿಸೆಂಬರ್ ೫ ೧೯೪೨ ರಂದು ಜನಿಸಿದರು. ತಮ್ಮ ಬಿ.ಎ. ಪದವಿಯನ್ನು  ಮೈಸೂರು ವಿಶ್ವವಿದ್ಯಾನಿಲಯದಲ್ಲಿ  ಮುಗಿಸಿ ಮುಂದಿನ ಎಂ.ಎ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಳಿಸಿದ್ದ ಇವರು ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಮೂವತ್ತು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಪ್ರಾಧಾಪಕರಾಗಿ ಸೇವೆ ಸಲ್ಲಿಸಿ ಎರಡು ವರ್ಷ ಹ೦ಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧಾಪಕರಾಗಿ ಬೆಂಗಳೂರಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಬೆಂಗಳೂರಿನಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ವತಿಯಿಂದ ಎಂ.ಫಿಲ್. ಪಿ ಎಚ್ ಡಿ ಪದವಿಗಾಗಿ ಸಂಶೋಧನಾ ಅವಕಾಶ ಕಲ್ಪಿಸುವ ಕಾವ್ಯಮಂಡಲ ಸಂಸ್ಥೆಯ ನಿರ್ದೇಶಕ ಹುದ್ದೆ ನ್ಯಾಷನಲ್ ಕಾಲೇಜು ಹಾಗೂ ಜೈನ್ ವಿಶ್ವವಿದ್ಯಾಲಯಗಳ ಕನ್ನಡ ಸಾತಕೋತ್ತರ ಕೇಂದ್ರಗಳ ಸಂದರ್ಶಕ ಪ್ರಾಧಾಪಕ ಹುದ್ದೆ  ಹಾಗೂ ಹಲವು ವಿಶ್ವವಿದ್ಯಾಲಯಗಳ ಸಾತಕೋತ್ತರ, ಸ್ನಾತಕ ಪದವಿಗಳ ಪಠ್ಯಕ್ರಮ ರಚನೆಯಲ್ಲಿ ಭಾಗಿಯಾಗಿದ್ದರು.

 ಕನ್ನಡ ಸಾರಸ್ವತ ಲೋಕದ ಹಿರಿಯ ವಿಮರ್ಶಕ, ಚಿಂತಕ ಕಿರಂ ನಾಗರಾಜ್‌ರವರು ಹಲವಾರು ಪಠ್ಯಪುಸ್ತಕಗಳ ಸಂಪಾದನೆ, ನೂರಕ್ಕೂ ಹೆಚ್ಚು ಲೇಖನಗಳು, ಹಾಗೂ  ನಾಡಿನಾದ್ಯಂತ ಸಾವಿರಾರು ಉಪನ್ಯಾಸಗಳು, ಹತ್ತಾರು ಸಾಹಿತ್ಯ ಶಿಬಿರಗಳ ಸಂಯೋಜನೆ ನಡೆಸುವುದರೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಸದಸ್ಯತ್ವವನ್ನು ಹೊಂದಿದ್ದರು. 

ಕಿ. ರಂ. ನಾನೊಬ್ಬನೇ ಬರೆಯಬೇಕು ಎಂದು ಬರೆದಿದ್ದರೆ ಹಲವು ಸಂಪುಟಗಳೇ ಆಗಿರುತಿದ್ದವು ಆದರೆ ತಮ್ಮ ಪ್ರಾಮಾಣಿಕ ಅನಿಸಿಕೆಗಳನ್ನು ತಮ್ಮ ಉಪನ್ಯಾಸಗಳಲ್ಲಿ ಕೇಳುಗರ ಮನಮುಟ್ಟುವಂತೆ ಹೇಳುತ್ತಾ ಹೋದರು . ಕಾವ್ಯ ಅವರ ಆಸಕ್ತಿಯಷ್ಟೇ ಅಲ್ಲದೆ ಬದುಕನ್ನೂ ಕಾವ್ಯವನ್ನು ಒಂದೇ ಎಂದು ಕಂಡವರು ಕಾವ್ಯ ರಚನೆ ಅಥವಾ ಉಪನ್ಯಾಸದ ಹೊರತಾಗಿಯೂ ನಾಡಿನ ಹಲವು ಬಗೆಯ ಚಳುವಳಿಗಳ ಸಂಗಾತಿ ಕೂಡ ಆದವರು.
ಹಲವಾರು ನಾಟಕಗಳು, ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ, ವಿಮರ್ಶೆಗಳ ಜೊತೆಗೆ ಮತ್ತೆ ಮತ್ತೆ ಬೇಂದ್ರೆ ಕೃತಿ, ಸಂಪಾದಿತ ಕೃತಿಗಳು,ವಚನ ಕಮ್ಮಟ, ಆಪತ್ಕಾಲೀನ ಕವಿತೆಗಳು, ಕುವೆಂಪು ನುಡಿಚಿತ್ರ , ಬಹುರೂಪಿ ಹೀಗೆ ಅವರ ಕೃತಿಗಳು ಸಾಗುತ್ತವೆ.

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಎಸ್. ವಿ. ಪರಮೇಶ್ವರಭಟ್ಟ ಪ್ರಶಸ್ತಿ, ಡಾ.ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ, ಡಾ.ಎಲ್.ಬಸವರಾಜು ಪ್ರಶಸ್ತಿ
ಕರ್ನಾಟಕ ಅಕಾಡೆಮಿ ಫೆಲೋಶಿಪ್, ಕನ್ನಡ ಪುಸ್ತಕ ಪ್ರಾಧಿಕಾರದ ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ,ವಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ,ಮಾನು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳು ಒಲಿದು ಬಂದಿರುತ್ತವೆ , 

ಕನ್ನಡ ಸಾಹಿತ್ಯ ಪರಿಷತ್ತು  ಬೆಂಗಳೂರು ಜಿಲ್ಲೆಯ ೨೦೦೭ರ ಜಿಲ್ಲಾ  ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು

ಶ್ರೀಯುತರ ಪತ್ನಿ ವಿಜಯಲಕ್ಷ್ಮಿ ಮತ್ತು ಮೂವರು ಹೆಣ್ಣು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಇವರು ೨೦೧೦ ರ ಆಗಸ್ಟ್, ೭ ನೇ ತಾರೀಖಿನ ಶನಿವಾರ ರಾತ್ರಿ ತಮ್ಮ ೬೬ನೆಯ ವಯಸ್ಸಿನಲ್ಲಿ  ಹೃದಯಾಘಾತದಿಂದ ಮರಣಿಸಿದರು. ವಿಶೇಷವೆಂದರೆ ಅಂದೆ ಸಂಜೆ ಸುಚಿತ್ರಾ ಫಿಲಂ ಸೊಸೈಟಿ ಸಭಾಂಗಣದಲ್ಲಿ ಬೇಂದ್ರೆ ಕಾವ್ಯದ ಬಗ್ಗೆ ಸುಮಾರು ಎರಡು ಗಂಟೆ ಕಾಲ ಉಪನ್ಯಾಸ ನೀಡಿ ನಿವಾಸಕ್ಕೆ ತೆರಳಿದವರು ಎದೆ ನೋವು ಎಂಬ ನೆಪದೊಂದಿಗೆ ಆಸ್ಪತ್ರೆ ಸೇರಿದವರು ಬಾರದ ಲೋಕಕ್ಕೆ ನಡೆದುಬಿಟ್ಟರು.

ಇವೆಲ್ಲವೂ ಸಹಜವಾಗಿ ಒಬ್ಬ ಪ್ರಾಧ್ಯಾಪಕರು ಅಥವಾ ಬರಹಗಾರರಿಗೆ ಒಲಿಯುವಂತಹ ವಿಚಾರಗಳು. ಆದರೆ ತಮ್ಮ ನೇರ ನಡೆನುಡಿಯ ಸದ್ಗುಣಗಳಿಂದ ತಮ್ಮ ಶಿಷ್ಯ ಪರಂಪರೆಯ ಮೇಲೆ ಬೀರಿದ ಪರಿಣಾಮದ ಫಲವಾಗಿ ಶ್ರೀಯುತರ ಕಾಲಾ ನಂತರದ ಹತ್ತು ವರ್ಷಗಳ ಬಳಿಕವೂ ಅವರು ಹಾಕಿಕೊಟ್ಟ ಪಥದಲ್ಲಿ ನಡೆಯುತ್ತಿರುವ ಶಿಷ್ಯ ಪರಂಪರೆ ನಡೆಸಿಕೊಂಡು ಬರುತ್ತಿರುವ "ಕಾಡುವ ಕಿ.ರಂ ಅಹೋರಾತ್ರಿ ಕಾವ್ಯಗೋಷ್ಠಿ, ಜಾನಪದ ಗೋಷ್ಠಿ, ಕಲೆ, ಸಾಹಿತ್ಯ ಸಂಬಂಧಿತ ಕಾರ್ಯಕ್ರಮದ ಮೂಲಕ ಈ ನಾಡಿನ ಸಾಹಿತ್ಯ ಪ್ರಿಯರಿಗೆ ಉಣಬಡಿಸುತ್ತಿರುವ ಪರಿಯ ಜೊತೆಗೆ ತಮ್ಮ ಗುರುಗಳು ಸದಾಶಯವಾದ ಹಿರಿಯರಿಗೂ ಕಿರಿಯರಿಗೂ ಕೂಡ ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವ ರೀತಿ ನಿಜಕ್ಕೂ ಮೆಚ್ಚಬೇಕಾದಂತಹ ವಿಚಾರವಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಎನ್ನಬಹುದು

ತಮ್ಮವ
ವೈಲೇಶ್ ಪಿ ಎಸ್ ಕೊಡಗು
೦೯/೦೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು