ಲೇಖನ ವಿಜ್ಞಾನ
ಉನ್ನತ ಸಂಸ್ಥೆಗಳಲ್ಲಿ ಅನುಭವಿಗಳ, ಜ್ಞಾನಿಗಳ ಅಗತ್ಯ ಬಹಳಷ್ಟಿದೆ. ಆದರೆ ಅದಕ್ಕಾಗಿ ನಿವೃತ್ತಿಯ ವಯೋಮಿತಿ ಏರಿಕೆ ಮಾಡುವುದು ಸರಿಯೇ ನಿಜವಾಗಿಯೂ ನನಗೂ ಒಮ್ಮೊಮ್ಮೆ ಅನಿಸಿದ್ದುಂಟು ಅನುಭವ ಮೀರಿದ ಅರ್ಹತೆಯಿಲ್ಲ ಆದ ಕಾರಣ ಅನುಭವದ ಆಧಾರದ ಮೇಲೆ ಸೇವಾ ಅವಧಿಯನ್ನು ಹೆಚ್ಚಿಸಬೇಕೆಂದು ಯಾಕೆಂದರೆ ಅನುಭವಕ್ಕಿಂತ ಗುರುವಿಲ್ಲ ಆದರೆ ವಯೋಸಹಜ ಅನಾರೋಗ್ಯ, ನಿಶ್ಯಕ್ತಿ, ದೃಷ್ಟಿ ದೋಷ, ಇರುವವರು ಅಧಿಕ. ಅದೆಷ್ಟೋ ಮಂದಿ ಉತ್ತಮ ಆರೋಗ್ಯ ಹೊಂದಿರುವ ವ್ಯಕ್ತಿಗಳು ಇದ್ದಾರೆ. ಆದರೆ ಮಾನವನ ಸರಾಸರಿ ಆಯಸ್ಸನ್ನಪ್ರಹೊರತಾಗಿಹಾಗೂ ಮಾನವರ ದೈಹಿಕ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮತ್ತು ಜೀವಮಾನದ ದುಡಿಮೆಯಿಂದ ತಾನು ಗಳಿಸಿದ ಸಂಪತ್ತನ್ನು ಅನುಭವಿಸುವ ಸಾಧ್ಯತೆಗಾಗಿಯಾದರೂ, ಅಥವಾ ತನ್ನ ಮುಂದೆ ನಿಂತಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ವಿರಾಮ ಜೀವನ ನಡೆಸಲು ೫೮ ಸೂಕ್ತ ನಿವೃತ್ತಿ ವಯಸ್ಸು ಎನ್ನಬಹುದು. ಇದರಿಂದಾಗಿ ನವ ಪೀಳಿಗೆಗೆ ನೌಕರಿ ಹೆಚ್ಚು ದೊರಕುವ ಸಾಧ್ಯತೆ ಕೂಡ ಇದೆ ಹಾಗೆಯೇ ಹೊಸ ಅನನುಭವಿ ವ್ಯಕ್ತಿಗಳಿಗೆ ಕೆಲಸ ನೀಡುವುದು ಸೂಕ್ತವಾಗಿದೆ ಎನಿಸುತ್ತದೆ. ನಿವೃತ್ತಿ ವಯಸ್ಸು ಏರಿದಷ್ಟು ಅನುಭವಕ್ಕೆ ತಕ್ಕಂತೆ ಪಗಾರದ ಹೆಚ್ಚಳವನ್ನು ಗಮನಿಸಿದಾಗ ಅದೇ ಒಬ್ಬರ ಪಗಾರಕ್ಕೆ ಹೊಸದಾಗಿ ಇಬ್ಬರು ಅಥವಾ ...