ಡಾ|| ಪುನೀತ್ ರಾಘವೇಂದ್ರ ಕುಂಟುಕಾಡುರವರ ಅರೆಬಾಸೆ ಕವನದ ತರ್ಜುಮೆ.
ಬದುಕಂತೂ ದೇವರೇ ಹೀಗೇ ಕಳೆಯುತಿದೆ
ನೆಲದಲ್ಲೂ ಹುಟ್ಟದೆ ನೀರಲ್ಲಿ ನೆನೆಯದೆ
ಹಿಂದೆ ಮಾಡಿದ ಪಾಪವೇ ಹೇಗೆ
ಚಿಗುರಿತು ಮರದ ತೊಗಟೆಯ ಹಾಗೆ
ಸುತ್ತಲು ಇತ್ತು ಅಂದು ತುಂಬು ಸಂಸಾರ
ನಗುವ ಸುಂದರ ಹಸಿರು ಹಸಿರು ಮರ
ಒಂದು ದಿನ ನೋಡಿದರೆ ಎಲ್ಲವೂ ಮಾಯ
ಮರಗಳು ಎಲ್ಲಾ ಯಾವ ಕಡೆಗೆ ಹೋಗುವ ಗೆಳೆಯ
ತಬ್ಬಲಿ ಮಾಡಿದವರಿಗೆವಶಾಪ ಹಾಕಬೇಕಾ
ಒಬ್ಬನನ್ನೇ ಬಿಟ್ಟವರಿಗೆ ಹಾರೈಕೆ ಮಾಡಬೇಕಾ
ಇನ್ನೊಂದು ಜನ್ಮವೆಂದು ನನಗೆ ಬರುವುದಿದ್ದರೆ
ಹುಟ್ಟಿಸು ಮರದಲ್ಲಿ ಅಲ್ಲ ಮಣ್ಣಿನಲ್ಲಯೇ ದೇವರೆ
Comments
Post a Comment