ಪರಿವರ್ಧಿನಿ ಷಟ್ಪದಿ
ಪರಿವರ್ಧಿನಿ ಷಟ್ಪದಿ ೧
ಮೊದಲ ಪ್ರಯತ್ನ
ಮನವನು ಗೆಲ್ಲುವ ಹುರುಪನು ತೋರುತ
ತನುವಿನ ಬಯಕೆಯ ಬೆಂಕಿಗೆ ತುಪ್ಪವ ವಿನಯದಿ ಸುರಿದಿಹನೇ|
ಇನಿಯನ ಮಾತದು ಕೇಳಲು ಮಧುರವು
ನನಸನು ಮಾಡಲು ನಿಜಜೀವನದೊಳು
ಗಣಗಳು ಬಿಡುವವೆ ಗುಣಹೀನದ ನುಡಿ ಕೇಳುವುದಾರಮ್ಮ||೧||
ಮಂದಿರದಂತಹ ನೀಲಾಕಾಶದಿ
ಸುಂದರ ತರುಣನ ಕನಸಲಿ ನೆನೆಯುತ
ನಿಂದಿಹ ಚೆಲುವೆಯ ಹೃದಯದಿ ಸಾವಿರ ಸಾಯದ ಬಯಕೆಗಳು|
ಚಂದಿರನೂರಿಗೆ ಪಯಣವ ಹೊರಡಲು
ಚೆಂದದ ಕನಸನು ನನಸಾಗಿಸುವರೆ
ತಂದೆಯ ಜೊತೆಯಲಿ ಸಂದಿಯ ಮಾಡಲು ಬೇಕಿದೆ ಬಂಧುಗಳು||೨||
Comments
Post a Comment