ಹದವಿರಲಿ (ಲಾವಣಿ)
ಹದವಿರಲಿ ( ಲಾವಣಿ)
~~~~~~~~~~~~
ಬದುಕುವ ರೀತಿಯ ಮಾನವ ನೀತಿಯ
ಯದುಕುಲ ತಿಲಕನು ತಿಳಿಸಿಹನು
ಕುದಿಯುವ ಮನಸಿಗೆ ಲಾವಣಿ ರೂಪದಿ
ಹದವಿರಲೆನ್ನುತ ಪಾಡುವೆನು
ಕಾಮುಕ ದಿಟ್ಟಿಯ ರಾವಣನು
ಚಾಮರ ಬೀಸುವ ದಾಸಿಯರೆದುರಲಿ
ಭಾಮೆಯನಾಗಿಸೆ ಸೋತಿಹನು
ಜೀವಿತವೆಂದರೆ ಮಾನವ ಕುಲದೊಳು
ಭಾವನೆ ತುಂಬಿದ ಸಂಸಾರ
ಗೋವಿನ ತೆರದಲಿ ಬಾಳುವೆಯಾದರೆ
ಬೇವಿನ ಕಹಿಯಲಿ ಸಂಹಾರ
ರಾಮನ ತೆರದಲಿ ಹೆಂಡತಿಯೊಬ್ಬಳು
ಕಾಮವ ತಣಿಸಲದಿರಬೇಕು
ಭೀಮನ ರೀತಿಯು ಸತಿಯನು ಕಾಯಲು
ಸೋಮನೆ ತಾನಾಗಿರಬೇಕು
ಮನೆತನ ಬೆಳಗಲು ಮಕ್ಕಳ ಪಡೆಯಲು
ತನುವಿಗೆ ನೆಮ್ಮದಿ ತರಬೇಕು
ಕೊನೆಯನದರಿಯದ ಕಾಮವುದೆಂದಿಗು
ಮನಸಲಿ ದೂರವದುಳಿಬೇಕು
ಜೀವನವೆಂದರೆ ಕಾಮಕು ಮಿಗಿಲಲಿ
ಭಾವನೆಗಳ ಹೊಳೆ ಹರಿಬೇಕು
ಜೀವಿಗೆ ಕಾಮವು ಬೆಲ್ಲದ ಜೊತೆಯಲಿ
ಬೇವಿನ ಹಾಗೆಯದಿರಬೇಕು
ಪಶಿವೈ
ಪಿ ಎಸ್ ವೈಲೇಶ ಕೊಡಗು
೨೧/೧೧/೨೦೧೯
Comments
Post a Comment