ಮಂದಾಕ್ರಾಂತ ಛಂದಸ್ಸು
ಮಂದಾಕ್ರಾಂತಾ ಅಕ್ಷರ ವೃತ್ತ. ೧೭ ಅಕ್ಷರ.
ನಾನಾನಾನಾ
ನನನನನ ನಾ
ನಾನ ನಾನಾನ ನಾನಾ
ಮನ್ದಾಕ್ರಾನ್ತಾ(ಮಂದಾಕ್ರಾಂತ) ಎನ್ನುವುದು ಅಕ್ಷರ(ವರ್ಣ) ವೃತ್ತವೊಂದರ ಹೆಸರು.ಪ್ರತೀ ಸಾಲಿನಲ್ಲಿ
ಮಗಣ,ಭಗಣ,ನಗಣ, ತಗಣ,ತಗಣ,ಗುರು,ಗುರು
ಹೀಗೆ ಹದಿನೇಳ ಅಕ್ಷರಗಳಿರುತ್ತವೆ.
ಹದಿನೇಳು(೧೭)👆
*ಮಂದಾಕ್ರಾಂತ ಛಂದಸ್ಸಿನ ಪ್ರಥಮ ಪ್ರಯತ್ನ*
ವಂದೇ ಮಾತಾ ಭವಭಯದ ಕೂರಂಬು ಬಂದಾಗಲೆಲ್ಲಾ|
ನಿಂದೆಮ್ಮ ಕ್ಷೇಮವ ಬಯಸಿ ಕಾಪಾಡು ನೀನಾಗಿ ತಾಯೇ||
ಮುಂಜಾನೆದ್ದು ಸ್ಮರಿಸುತಲಿ ಮಾತಾನ್ನ ಪೂರ್ಣೇಶ್ವರೀಮಾ|
ಎಂದಾರ್ತಧ್ಯಾನದಿ
ನಮನಗೈದಾಗ ನಮ್ಮನ್ನು ಕಾಯ್ವಳ್||೧||
ಆರ್ತಧ್ಯಾನ= ಬಯಕೆಯ ಧ್ಯಾನ
ವಂದೇ ಮಾ/ತಾ ಭವ/ಭಯದ/ ಕೂರಂಬು/ ಬಂದಾಗ/ಲೆಲ್ಲಾ|
ನಿಂದೆಮ್ಮ /ಕ್ಷೇಮವ/ ಬಯಸಿ/ ಕಾಪಾಡು/ ನೀನಾಗಿ/ ತಾಯೇ||
ಮುಂಜಾನೆ/ದ್ದು ಸ್ಮರಿ/ಸುತಲಿ/ ಮಾತಾನ್ನ /ಪೂರ್ಣೇಶ್ವ/ರೀಮಾ|
ಎಂದಾರ್ತ/ಧ್ಯಾನದಿ/ ನಮನ/ಗೈದಾಗ /ನಮ್ಮನ್ನು /ಕಾಯ್ವಳ್||೧||
*ಕಿಗ್ಗಾಲು ಎಸ್ ಗಿರೀಶ್*
12-07-2019
ಚಿಂತಾಕ್ರಾಂತಾ ಮನದೊಳಗೆ
ನಾನಿಂದು ನೋಡಿದ್ದೆ ಬೇಕೇ|
ಮಂದಾಕ್ರಾಂತಾ ಎನಗರಿತೇ
ನಿನ್ನಾತ್ಮದಾನಂದ ಸಾಕೇ||
ಕಾವ್ಯಾರಾಮಾದಲಿ ಬರೆಯಲೇ
ಪ್ರಾರಂಭದಲ್ಲೀಗ ಕೇಕೇ||
ಏನಾಗಿದ್ದಾಗಲಿ ಬರೆವೆನಾನೆಂದು
ನಿಮ್ಮಲ್ಲಿ ಪೇಳ್ವೇ||
ನಾನಾನಾನಾ
ನನನನನ ನಾ
ನಾನ ನಾನಾನ ನಾನಾ
Comments
Post a Comment