ಮುಕ್ತಕ ಕುಸುಮ

ಮುಕ್ತಕ ಕುಸುಮ ೧೦೫

ಮಾಣಿಗಳ ಮೊಗದಲ್ಲಿ ಕಾಣೆಯಾಗಿದೆಯಿಂದು
ವೀಣೆಯಂತುಲಿವ ಸವಿಯಾದ ಮಾತು
ಕಾನನದಿ ನಡೆವಂತೆ ಮಾನಿನಿಯು ಧನಮೋಹ
ಮೇಣ್ ಕಾಣೆ ಬೇರೇನ ಬೊಮ್ಮಲಿಂಗ

ಮಾಣಿಗಳ ಮೊಗದಲ್ಲಿ
ಕಾಣೆಯಾಗಿದೆಯಿಂದು
ವೀಣೆಯಂತುಲಿವ ಸವಿಯಾದ ಮಾತು
ಕಾನನದಿ ನಡೆವಂತೆ
ಮಾನಿನಿಯು ಧನಮೋಹ
ಮೇಣ್ ಕಾಣೆ ಬೇರೇನ ಬೊಮ್ಮಲಿಂಗ

ಮುಕ್ತಕ ಕುಸುಮ ೧೦೬

ಇನಿಧನಿಯ ಕಲಿಸಲಿಕೆ ತನುವ ಕಂದಗಳಿಗಿರ
ಲೆನುತ ಪೋಷಕರು ತಿಳಿಯಬೇಕು
ತನುವಿನಲಿ ಬೆತ್ತದಾ ಗುಣಗಾನವನು ಗುರುವು
ನೆಣ ತೆಗೆಯುವಂತಿರಲಿ ಬೊಮ್ಮಲಿಂಗ

ಇನಿಧನಿಯ ಕಲಿಸಲಿಕೆ
ತನುವ ಕಂದಗಳಿಗಿರ
ಲೆನುತ ಪೋಷಕರು ತಿಳಿಯಬೇಕು
ತನುವಿನಲಿ ಬೆತ್ತದಾ
ಗುಣಗಾನವನು ಗುರುವು
ನೆಣ ತೆಗೆಯುವಂತಿರಲಿ ಬೊಮ್ಮಲಿಂಗ

ಮುಕ್ತಕ ಕುಸುಮ ೧೦೭

ಧನಿಗೂಡಿ ಗುಡುಗಿನಲಿ ಹನಿ ಮಳೆಯು ತನಿಯಾಗಿ
ತನನನನ ಹಾಡಿರಲು ಧರೆಯು ಚಿಗುರಿ|
ನನಗಾಗಿ ಏನಿಲ್ಲ ನಿನಗಾಗಿ ನನದೆಂದು
ಗೊಣಗಿದಳು ಭೂದೇವಿ ಬೊಮ್ಮಲಿಂಗ.||

ಧನಿಗೂಡಿ ಗುಡುಗಿನಲಿ
ಹನಿ ಮಳೆಯು ತನಿಯಾಗಿ
ತನನನನ ಹಾಡಿರಲು ಧರೆಯು ಚಿಗುರಿ|
ನನಗಾಗಿ ಏನಿಲ್ಲ
ನಿನಗಾಗಿ ನನದೆಂದು
ಗೊಣಗಿದಳು ಭೂದೇವಿ ಬೊಮ್ಮಲಿಂಗ.||

ಮುಕ್ತಕ ಕುಸುಮ ೧೦೮

ಪೋಷಕರು ಕೊನೆವರೆಗು ಘೋಷಿಸುತ ಮಕ್ಕಳಿಗೆ
ಘೋಷಗಳ ಧರಿಸಿತಿರಿಯೆನ್ನಲಹುದೆ
ಪೋಷಿಸುವ ಸಲುವಾಗಿ ವೇಷವನು ಹೊಗಳದೆಲೆ
ದೋಷವನು ತಿಳಿಸುತಿರಿ ಬೊಮ್ಮಲಿಂಗ

ಪೋಷಕರು ಕೊನೆವರೆಗು
ಘೋಷಿಸುತ ಮಕ್ಕಳಿಗೆ
ಘೋಷಗಳ ಧರಿಸಿತಿರಿಯೆನ್ನಲಹುದೆ
ಪೋಷಿಸುವ ಸಲುವಾಗಿ
ವೇಷವನು ಹೊಗಳದೆಲೆ
ದೋಷವನು ತಿಳಿಸುತಿರಿ ಬೊಮ್ಮಲಿಂಗ

ಮುಕ್ತಕ ಕುಸುಮ ೧೦೯

ಬೇಕು ಬೇಕೆಂದಾಗ ಸಾಕು ಸಾಕೆನುವಂತೆ
ನೂಕು ನುಗ್ಗಲದನುವು ರಾಜಕೀಯ|
ಬೇಕಿತ್ತಾ ನಮಗಿವರು ಸೋಕದೆಲೆ ಕಷ್ಟದಲಿ
ಶೋಕಿ ಮಾಡುವ ಮಂದಿ ಬೊಮ್ಮಲಿಂಗ||

ಬೇಕು ಬೇಕೆಂದಾಗ
ಸಾಕು ಸಾಕೆನುವಂತೆ
ನೂಕು ನುಗ್ಗಲದನುವು ರಾಜಕೀಯ|
ಬೇಕಿತ್ತಾ ನಮಗಿವರು
ಸೋಕದೆಲೆ ಕಷ್ಟದಲಿ
ಶೋಕಿ ಮಾಡುವ ಮಂದಿ ಬೊಮ್ಮಲಿಂಗ||

ಮುಕ್ತಕ ಕುಸುಮ ೧೧೦

ಬಸವಳಿದು ಮಲಗಿಲ್ಲ ಹಸಿವೆಯಿಂ ಸೊರಗಿಲ್ಲ
ಹುಸಿನಿದಿರೆ ತೋರುತಲಿ ಕಾಯುತಿರುವೆ
ಹಸಿಗಣ್ಣ ಕಾವಲಿಗೆ ಬಸವನಾಗಮನವದು
ಹುಸಿಯಾಗದಂತೆ ಕಾಯ್ ಬೊಮ್ಮಲಿಂಗ

ಬಸವಳಿದು ಮಲಗಿಲ್ಲ
ಹಸಿವೆಯಿಂ ಸೊರಗಿಲ್ಲ
ಹುಸಿನಿದಿರೆ ತೋರುತಲಿ ಕಾಯುತಿರುವೆ
ಹಸಿಗಣ್ಣ ಕಾವಲಿಗೆ
ಬಸವನಾಗಮನವದು
ಹುಸಿಯಾಗದಂತೆ ಕಾಯ್ ಬೊಮ್ಮಲಿಂಗ

ಮುಕ್ತಕ ಕುಸುಮ

ಒಂಟಿಕಾಲಲಿ ನಿಂತು ಗಂಟುಗಳ ಕದ್ದಿಹರು
ಬಂಟರಾರೆಂದರಿಯೆ ನೀವು ಹೇಳಿ|
ಜಂಟಿಯಾಗಿಹರಿಂದು ನೆಂಟಸ್ತರಲ್ಲದೆಲೆ
ಕಂಟಕವು ಜಗಕಿವರು ಬೊಮ್ಮಲಿಂಗ||

ಒಂಟಿಕಾಲಲಿ ನಿಂತು
ಗಂಟುಗಳ ಕದ್ದಿಹರು
ಬಂಟರಾರೆಂದರಿಯೆ ನೀವು ಹೇಳಿ|
ಜಂಟಿಯಾಗಿಹರಿಂದು
ನೆಂಟಸ್ತರಲ್ಲದಿರೆ
ಕಂಟಕವು ಜಗಕಿವರು ಬೊಮ್ಮಲಿಂಗ||

ತಂಟೆತಕರಾರುಗಳ ಗಂಟೆಗಟ್ಟಲೆ ಮಾಡಿ
ತುಂಟ ಹೋರಿಯತೆರದಿ ಮೆರೆಯುತಿಹರು|
ಗಂಟೆ ಕಟ್ಟುವರಿಲ್ಲ ಸೊಂಟಮುರಿಯುವುದಿಲ್ಲ
ಗಂಟನ್ನು ಕಂಡವರು ಬೊಮ್ಮಲಿಂಗ||

ತಂಟೆತಕರಾರುಗಳ
ಗಂಟೆಗಟ್ಟಲೆ ಮಾಡಿ
ತುಂಟ ಹೋರಿಯತೆರದಿ ಮೆರೆಯುತಿಹರು|
ಗಂಟೆ ಕಟ್ಟುವರಿಲ್ಲ
ಸೊಂಟಮುರಿಯುವುದಿಲ್ಲ
ಗಂಟನ್ನು ಕಂಡವರು ಬೊಮ್ಮಲಿಂಗ||

ಮೇಟಿ ನಾನಾಗುವೆನು ಬೇಟೆಗಳ ಹುಡುಕುವೆನು
ಕೋಟಿ ರೂಪಾಯಿಗಳು ಸಾಕೆ ನಿಮಗೆ|
ಕಾಟಗಳ ಸುರಿಸುರಿದು ಕೋಟಿಗೂ ಮಿಗಿಲಾಗಿ
ಕೂಟದಲಿ ತೊಡಗಿಸುವೆ ಬೊಮ್ಮಲಿಂಗ||

ಮೇಟಿ ನಾನಾಗುವೆನು
ಬೇಟೆಗಳ ಹುಡುಕುವೆನು
ಕೋಟಿ ರೂಪಾಯಿಗಳು ಸಾಕೆ ನಿಮಗೆ|
ಕಾಟಗಳ ಸುರಿಸುರಿದು
ಕೋಟಿಗೂ ಮಿಗಿಲಾಗಿ
ಕೂಟದಲಿ ತೊಡಗಿಸುವೆ ಬೊಮ್ಮಲಿಂಗ||

ಕೋಟೆಗಳ ಗೆಲ್ಲುವರೆ ಕೋಟಿಗಳ ಕೂಡಿಟ್ಟು
ದಾಟಲಾರದೆ ಗೇಟು ಕೊರಗುತಿಹರು|
ಸಾಟಿಯೆನಗಾರೆಂದು ಧಾಟಿಯಲಿ ನುಡಿದವರು
ಬೂಟಿನಂದದಿ ಕೊಳೆತು ಬೊಮ್ಮಲಿಂಗ||

ಕೋಟೆಗಳ ಗೆಲ್ಲುವರೆ
ಕೋಟಿಗಳ ಕೂಡಿಟ್ಟು
ದಾಟಲಾರದೆ ಗೇಟು ಕೊರಗುತಿಹರು|
ಸಾಟಿಯೆನಗಾರೆಂದು
ಧಾಟಿಯಲಿ ನುಡಿದವರು
ಬೂಟಿನಂದದಿ ಕೊಳೆತು ಬೊಮ್ಮಲಿಂಗ||

ಪಶಿವೈ
ಪಿ. ಎಸ್. ವೈಲೇಶ ಕೊಡಗು
೨೪/೯/೨೦೧೯

ಸೊಳ್ಳೆಗಳ ಕೊಲ್ಲುವರೆ
ಚಿಲ್ಲುಗಳು ಬೇಕಿಲ್ಲ
ಗೆಲ್ಲುಗಳು ಮನದಲ್ಲಿ ಮೂಡಬೇಕು
ಹಳ್ಳದಲಿ ನೀರೆಂದು
ನಿಲ್ಲದೆಲೆ ಹರಿಯುತಿರೆ
ಸೊಲ್ಲಡಗಿ ಹೋಗುವುದು ಬೊಮ್ಮಲಿಂಗ

ಅತಿಯಾಯಿತೆನ್ನದಿರಿ
ಸತಿಯಿರಲಿ ಜೊತೆಜೊತೆಗೆ
ಮತಿಕಾಯ ಬೇಕೆಂಬೆ ಬಾಳಿನಲ್ಲಿ
ಸುತರನ್ನು ಸಲಹುತಲಿ
ಪತಿಯನ್ನು ಮರೆಯದಿರೆ
ಗತಿಗೆಡದು ಬದುಕಿನಲಿ ಬೊಮ್ಮಲಿಂಗ

ಅಡ್ಡಗೋಡೆಯ ಹಣತೆ
ದಡ್ಡರಂತಿಹ ಜನತೆ
ಸಡ್ಡು ಹೊಡೆಯದಿಹರೇ ನೀವೆ ಹೇಳಿ
ದೊಡ್ಡವರು ನಾವೆಂದು
ಲಡ್ಡುಗಳ ಮುಕ್ಕದಿರಿ
ಬೊಡ್ಡೆಗಳು ಚಿಗುರುವವು ಬೊಮ್ಮಲಿಂಗ

ಅಧಿಕಾರಿ ನಾನೆಂದು
ಮದವೇಕೆ ನಮ್ಮಲ್ಲಿ
ಮುದಿಯಾಗಿ ಹೋಗುವೀ ದೇಹದೊಳಗೆ
ಮಧುವನೀಯವ ತೆರದಿ
ಸದುಪಕಾರಿಯದಾಗೆ
ಮುದಗೊಳಿಪ ಸಕಲರನು ಬೊಮ್ಮಲಿಂಗ

ಒಡತಿಯಾಕೆಯು ಮನೆಗೆ
ಬಿಡದಿಯದು ನಮ್ಮೊಡನೆ
ಸಿಡಿಸದಿರೆ ಕೆಂಡವನು ಬಾಳು ಹಸನು
ದುಡಿಯುವೆನು ನಾನೆಂಬ
ಬಡಬಡಿಕೆ ಸಾಕೊಂದೆ
ಸುಡುಲಿಹುದು ಸಿಹಿಯನ್ನು ಬೊಮ್ಮಲಿಂಗ

ಅಡಗಿಸುತ ಸಂಪ್ರೀತಿ
ನಡುಗಿಸದೆ ನ

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು