ಕಲಿಸಿನೋಡಿ ಮಾತೃಭಾಷೆ

ಕಲಿಸಿನೋಡಿ ಮಾತೃಭಾಷೆ
~~~~~~~~~~~~~~
ಹೋರಾಟ ಬೇಕಿಲ್ಲ
ಹಾರಾಟ ಸರಿಯಲ್ಲ
ಚೀರಾಟ ನಮಗಲ್ಲ ಭಾಷೆಗಾಗಿ
ಬೇರೇನು ಮಾಡದೆಲೆ
ದಾರಾಳತನದಲ್ಲಿ
ನೂರಾರು ಜನರಿಂಗೆ ಕಲಿಸಿನೋಡಿ 

ಕೆಲಸವನು ಹುಡುಕುತ್ತ 
ನಲಿನಲಿದು ಬರುವವಗೆ
ಕಲಿಸುವುದು ಕನ್ನಡವ ಬಹಳ ಸುಲಭ
ನುಲಿಯುತಲಿ ಪರಭಾಷೆ 
ಸುಲಿಯುತಿದೆ ನೋಡಿದಿರ
ಬಲಿಯಾಗಬೇಕೇನು ನಮ್ಮ ಭಾಷೆ 

ಅಳಿಯುತಿದೆಯೆನ್ನದೆಲೆ 
ಬಳಸುವುದ ಮರೆಯದಿರಿ
ಕಳಿತಿರುವ ಕಲಿಗಳೇ ನೀವದೆಂದು
ಕಳೆಯಂತೆ ಕಾಣುತಲಿ
ಬೆಲೆಯನ್ನು ನೀಡದೆಲೆ 
ಕೊಲೆಯನ್ನು ಮಾಡದಿರಿ ಮಾತೃಭಾಷೆ 

ಆಡುತಿಹ ಮಾತಿನಲಿ 
ನೋಡುತಿಹ ನೋಟದಲಿ
ಮಾಡುತಿಹ ಕಾಯಕದಿ ತಾಯನೋಡಿ 
ಕೂಡಿಬಾಳಲು ನಾವು 
ಕಾಡುವುದು ನಡೆಯುವುದೆ
ಬೇಡುವುದು ಬರದೆಂದು ಭಾಷೆಗಾಗಿ

ಪಶಿವೈ
ಪಿ ಎಸ್ ವೈಲೇಶ ಕೊಡಗು
೧/೧೧/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು