ಗಝಲ್
ಗಝಲ್
ಅನ್ಯರೇಳಿಗೆಯ ಕಂಡು ಕುಂತು ನಿಂತು ಕೊರಗುವರು ಸಖ
ಸ್ವ ಸಾಧನೆಗಳನು ಹೊಗಳಿಕೊಳ್ಳುವುದೇ ಹೆಮ್ಮೆಯಾಗಿದೆ
ಸಾಧಕರ ಚಿಂತನೆಯನು ಕಂತಿಸಿಲೆಂದು ಮರುಗುವರು ಸಖ
ಎಂದೋ ಕಡಿದು ಕಟ್ಟೆ ಹಾಕಿದುದು ಇಂದು ಕಣ್ಮರೆಯಾಗಿದೆ
ಹಿಂದೆ ಬೀಳುವೆನೆಂಬ ಭಯದಿಂದ ಕಾಲೆಳೆಯುತಿಹರು ಸಖ
ಹೆಗ್ಗಳಿಕೆಯ ಹೆಗ್ಗುರುತು ಮಾಸಿ ಮುಕ್ಕಾಗಿರುತ್ತದೆ ನೋಡು
ಅಗ್ಗದ ಮಾತಿಂದಲಿ ಸಗ್ಗವನು ತಂದು ನಿಲ್ಲಿಪೆನೆಂಬರು ಸಖ
ತಗ್ಗಿದ ಧನಿಯೊಳಗೆ ಉಗ್ಗುವ ಮಾತುಗಳು ಸಿಡಿಲನ ಆಸ್ತಿ
ಕುಗ್ಗಿಸಲು ಬಗ್ಗು ಬಡಿಯುವ ಜನರ ನೀ ನೋಡುತಿರು ಸಖ
ಸಿಡಿಲ (ಪಶಿವೈ)
ಪಿ ಎಸ್ ವೈಲೇಶ ಕೊಡಗು
೨೪/೧೦/೨೦೧೯
Comments
Post a Comment