ಮುಕ್ತಕದ ಮುತ್ತಿನಲೆ ೦೩

ಮುಕ್ತಕ ಕುಸುಮ ೮೧
ಮುಕ್ತಕದ ಅಲೆ ೯೧

ಅಂಬುಗಳು ನೂರಾರು ರೆಂಭೆಯನು ಸಿಗಿಯೆ ಖಗ-
ವಂಬರಕೆ ಸೂಕ್ಷ್ಮದಲಿ ಹಾರದಿಹುದೆ|
ಕುಂಬಿನಿಯ ವರದಿಂದ ನಂಬಿರುವ ರೆಕ್ಕೆಯದು
ಕುಂಭದಾ ಹಾಗೆಂಬೆ ಬೊಮ್ಮಲಿಂಗ||

ಕುಸುಮ ಷಟ್ಪದಿ ೮೧

ಅಂಬುಗಳು ನೂರಾರು
ರೆಂಭೆಯನು ಸಿಗಿಯೆ ಖಗ-
ವಂಬರಕೆ ಸೂಕ್ಷ್ಮದಲಿ ಹಾರದಿಹುದೆ|
ಕುಂಬಿನಿಯ ವರದಿಂದ
ನಂಬಿರುವ ರೆಕ್ಕೆಯದು
ಕುಂಭದಾ ಹಾಗೆಂಬೆ ಬೊಮ್ಮಲಿಂಗ||

ಮುಕ್ತಕ ಕುಸುಮ ೮೨
ಮುಕ್ತಕದ ಅಲೆ ೯೨

ಇತಿಮಿತಿಯನರಿಯದೆಲೆ ಮತಿಗೆಟ್ಟು ಮಾತಾಡಿ
ಗತಿಗೆಟ್ಟು ಕುಳಿತವರೆ ಕೇಳಿ ನೀವು|
ಅತಿಯಾದ ವಿಶ್ವಾಸ ಹಿತವಿರದು ತಮಗೆಂದು
ಹಿತವಚನ ಪಾಲಿಸಿರಿ ಬೊಮ್ಮಲಿಂಗ||

ಕುಸುಮ ಷಟ್ಪದಿ ೮೨

ಇತಿಮಿತಿಯನರಿಯದೆಲೆ
ಮತಿಗೆಟ್ಟು ಮಾತಾಡಿ
ಗತಿಗೆಟ್ಟು ಕುಳಿತವರೆ ಕೇಳಿ ನೀವು|
ಅತಿಯಾದ ವಿಶ್ವಾಸ
ಹಿತವಿರದು ತಮಗೆಂದು
ಹಿತವಚನ ಪಾಲಿಸಿರಿ ಬೊಮ್ಮಲಿಂಗ||

ಮುಕ್ತಕ ಕುಸುಮ ೮೩
ಮುಕ್ತಕದ ಅಲೆ ೯೩

ಉಗುಳುವಗೆ ಬಲವೀವ ಹೊಗಳುವವ ಬೇಕಿಲ್ಲ
ತೆಗಳುತಲೆ ತೆರೆಮರೆಗೆ ಸರಿದುಬಿಡುವ|
ಉಗುರಿನಲಿ ಹೋಪುದಕೆ ಬಗಲಲ್ಲಿ ಪರಶೇಕೆ
ಹೆಗಲೇರೆ ಅಪರಾದ ಬೊಮ್ಮಲಿಂಗ||

ಕುಸುಮ ಷಟ್ಪದಿ ೮೩

ಉಗುಳುವಗೆ ಬಲವೀವ
ಹೊಗಳುವವ ಬೇಕಿಲ್ಲ
ತೆಗಳುತಲೆ ತೆರೆಮರೆಗೆ ಸರಿದುಬಿಡುವ|
ಉಗುರಿನಲಿ ಹೋಪುದಕೆ
ಬಗಲಲ್ಲಿ ಪರಶೇಕೆ
ಹೆಗಲೇರೆ ಅಪರಾಧ ಬೊಮ್ಮಲಿಂಗ||

ಮುಕ್ತಕ ಕುಸುಮ-೮೪
ಮುಕ್ತಕದ ಅಲೆ-೯೪

ಬರೆದಿರುವ ಬರಹಗಳ ಮರುಗಳಿಗೆ ಹಂಚದೆಲೆ
ತಿರುತಿರುಗಿ ತಿದ್ದುತಿರೆ ಬರಹ ಸೊಗಸು|
ಮರೆಯಾಗಿ ನಿಂದಿರುತ ಬರೆಯದೆಲೆ ನುಡಿಯುವರ
ಮರೆತು ನೀವ್ ನಡೆಯುತಿರಿ ಬೊಮ್ಮಲಿಂಗ||

ಕುಸುಮ ಷಟ್ಪದಿ ೮೪

ಬರೆದಿರುವ ಬರಹಗಳ
ಮರುಗಳಿಗೆ ಹಂಚದೆಲೆ
ತಿರುತಿರುಗಿ ತಿದ್ದುತಿರೆ ಬರಹ ಸೊಗಸು|
ಮರೆಯಾಗಿ ನಿಂದಿರುತ
ಬರೆಯದೆಲೆ ನುಡಿಯುವರ
ಮರೆತು ನೀವ್ ನಡೆಯುತಿರಿ ಬೊಮ್ಮಲಿಂಗ||

ಮುಕ್ತಕ ಕುಸುಮ-೮೫
ಮುಕ್ತಕದ ಅಲೆ- ೯೫

ಹಳೇಬೇರು ಹೊಸಚಿಗುರು ಬೆಳೆಯುತಿರೆ ಮರಸೊಗಸು
ಕಳೆಗಳನು ಬೆಳೆಸದೆಲೆ ಕತ್ತರಿಸಿರಿ|
ಇಳೆಯೊಳಗೆ ಕೆಲಜನರು ಹಳೆಯದನು ಕೆಣಕುತಿಹ
ಕೊಳೆಯಾದ ಮನಸಿಗರು ಬೊಮ್ಮಲಿಂಗ||

ಕುಸುಮ ಷಟ್ಪದಿ-೮೫

ಹಳೇಬೇರು ಹೊಸಚಿಗುರು
ಬೆಳೆಯುತಿರೆ ಮರಸೊಗಸು
ಕಳೆಗಳನು ಬೆಳೆಸದೆಲೆ ಕತ್ತರಿಸಿರಿ|
ಇಳೆಯೊಳಗೆ ಕೆಲಜನರು
ಹಳೆಯದನು ಕೆಣಕುತಿಹ
ಕೊಳೆಯಾದ ಮನಸಿಗರು ಬೊಮ್ಮಲಿಂಗ||

ಮುಕ್ತಕ ಕುಸುಮ ೮೬
ಮುಕ್ತಕದ ಅಲೆ-೯೬

ನೀಡಿಪಡೆ ಸಕಲವನು ಬೇಡುವುದ ಮರೆತುಬಿಡು
ಕೋಡುಗಳು ಮೂಡುವುದು ತರವದಲ್ಲ
ಪಾಡುಗಳ ನೋಡದೆಲೆ ಹಾಡುತಿಹ ಕೋಗಿಲೆಗೆ
ತೀಡುವುದು ತರವೇನು ಬೊಮ್ಮಲಿಂಗ||

ಕುಸುಮ ಷಟ್ಪದಿ-೮೬

ನೀಡಿಪಡೆ ಸಕಲವನು
ಬೇಡುವುದ ಮರೆತುಬಿಡು
ಕೋಡುಗಳು ಮೂಡುವುದು ತರವದಲ್ಲ
ಪಾಡುಗಳ ನೋಡದೆಲೆ
ಹಾಡುತಿಹ ಕೋಗಿಲೆಗೆ
ತೀಡುವುದು ತರವೇನು ಬೊಮ್ಮಲಿಂಗ||

ಮುಕ್ತಕ ಕುಸುಮ-೮೭
ಮುಕ್ತಕದ ಅಲೆ-೯೭

ನುಡಿದಂತೆ ನಡೆವವಗೆ ಬಿಢೆಯಿರದ ಬದುಕಂತೆ
ಗುಡುಗು ಮಿಂಚಿರದೆ ಮಳೆಯು ಬರದು|
ಕಡುಕಷ್ಟ ಮರೆತಿರಲು ಕಡುಮೂರ್ಖ ಬದುಕುವನು
ನಡುರಾತ್ರಿ ಕೊಡೆಹಿಡಿದು ಬೊಮ್ಮಲಿಂಗ||

ಕುಸುಮ ಷಟ್ಪದಿ ೮೭

ನುಡಿದಂತೆ ನಡೆವವಗೆ
ಬಿಢೆಯಿರದ ಬದುಕಂತೆ
ಗುಡುಗು ಮಿಂಚಿರದೆ ಮಳೆಯು ಬರದು|
ಕಡುಕಷ್ಟ ಮರೆತಿರಲು
ಕಡುಮೂರ್ಖ ಬದುಕುವನು
ನಡುರಾತ್ರಿ ಕೊಡೆಹಿಡಿದು ಬೊಮ್ಮಲಿಂಗ||

ಮುಕ್ತಕ ಕುಸುಮ ೮೮
ಮುಕ್ತಕದ ಅಲೆ ೯೮

ನುಡಿಯುತಲಿ ಮತ್ತೊಂದು ನಡೆಸುವುದು ಮಗದೊಂದು
ಹಿಡಿಯುವುದು ತನಗಾಗಿ ಕತ್ತೆಕಾಲು|
ಕೆಡಿಸುತಲಿ ಪರರಮನ ಬಡಬಡಿಸಿ ಮನದೊಳಗೆ
ಪಡೆಯುವುದದೇನೆಂಬೆ ಬೊಮ್ಮಲಿಂಗ||

ಕುಸುಮ ಷಟ್ಪದಿ ೮೮

ನುಡಿಯುತಲಿ ಮತ್ತೊಂದು
ನಡೆಸುವುದು ಮಗದೊಂದು
ಹಿಡಿಯುವುದು ತನಗಾಗಿ ಕತ್ತೆಕಾಲು|
ಕೆಡಿಸುತಲಿ ಪರರಮನ
ಬಡಬಡಿಸಿ ಮನದೊಳಗೆ
ಪಡೆಯುವುದದೇನೆಂಬೆ ಬೊಮ್ಮಲಿಂಗ||

ಮುಕ್ತಕ ಕುಸುಮ ೮೯
ಮುಕ್ತಕದ ಅಲೆ ೯೯

ಅವನಿಯದು ಚಿರಯುವತಿ ನವಯುವಕ ರವಿಯೊಡನೆ
ಸವೆಯದಿಹ ಮೋಹದಲಿ ಕಾಯುತಿಹರು|
ಅವಗಣನೆ ಯಾಕಯ್ಯ ಬುವಿಗಿಳಿಯೊ ಮಳೆರಾಯ
ಸವಿಯುವೆವು ನಾವೆಂದು ಬೊಮ್ಮಲಿಂಗ||

ಕುಸುಮ ಷಟ್ಪದಿ ೮೯

ಅವನಿಯದು ಚಿರಯುವತಿ
ನವಯುವಕ ರವಿಯೊಡನೆ
ಸವೆಯದಿಹ ಮೋಹದಲಿ ಕಾಯುತಿಹರು|
ಅವಗಣನೆ ಯಾಕಯ್ಯ
ಬುವಿಗಿಳಿಯೆ ಮಳೆರಾಯ
ಸವಿಯುವೆವು ನಾವೆಂದು ಬೊಮ್ಮಲಿಂಗ||

ಮುಕ್ತಕ ಕುಸುಮ ೯೦
ಮುಕ್ತಕದ ಅಲೆ ೧೦೦

ತೆಳ್ಳನೆಯ ತಿನಿಸಲ್ಲು ಮುಳ್ಳುಗಳು ಮುತ್ತಿರಲು
ಮೆಲ್ಲನದ ಮೆಲ್ಲುತಿರೆ ಬೆಲ್ಲದಂತೆ|
ಬಲ್ಲವರ ನುಡಿಗಟ್ಟು ತಳ್ಳದಿರಿ ದಯವಿಟ್ಟು
ಪೊಳ್ಳೆಂದು ದೂರದಿರಿ ಬೊಮ್ಮಲಿಂಗ||

ಕುಸುಮ ಷಟ್ಪದಿ ೯೦

ತೆಳ್ಳನೆಯ ತಿನಿಸಲ್ಲು
ಮುಳ್ಳುಗಳು ಮುತ್ತಿರಲು
ಮೆಲ್ಲನದ ಮೆಲ್ಲುತಿರೆ ಬೆಲ್ಲದಂತೆ|
ಬಲ್ಲವರ ನುಡಿಗಟ್ಟು
ತಳ್ಳದಿರಿ ದಯವಿಟ್ಟು
ಪೊಳ್ಳೆಂದು ದೂರದಿರಿ ಬೊಮ್ಮಲಿಂಗ||

ಮುಕ್ತಕ ಕುಸುಮ ೯೧
ಮುಕ್ತಕದ ಅಲೆ ೧೦೧

ದಾರಿಯಲಿ ಹೋಗುತಿಹ ಮಾರಿಯನು ಕರಪಿಡಿದು
ಬಾರೆಂದು ಕರೆದಂತೆ ನಮ್ಮ ಬದುಕು
ಯಾರಿಹರು ನಮಗಿಂದು ಸಾರವನು ತಿಳಿಸುವರೆ
ಬೇರೆ ಹಾದಿಯದಿಹುದೆ ಬೊಮ್ಮಲಿಂಗ

ಕುಸುಮ ಷಟ್ಪದಿ ೯೧

ದಾರಿಯಲಿ ಹೋಗುತಿಹ
ಮಾರಿಯನು ಕರಪಿಡಿದು
ಬಾರೆಂದು ಕರೆದಂತೆ ನಮ್ಮ ಬದುಕು
ಯಾರಿಹರು ನಮಗಿಂದು
ಸಾರವನು ತಿಳಿಸುವರೆ
ಬೇರೆ ಹಾದಿಯದಿಹುದೆ ಬೊಮ್ಮಲಿಂಗ

ಮುಕ್ತಕ ಕುಸುಮ ೯೨
ಮುಕ್ತಕದ ಅಲೆ ೧೦೨

ಒಲಿಯಲದು ತಡವಿಲ್ಲ ಬಲಿಯದಿರೆ ಬಹುಗರ್ವ
ಬಲಿಯಾಗಿ ಹೋಗದಿರಿ ಹುಂಬತನಕೆ
ಒಲಿಸುತಲೆ ಗುರುಗಳನು ಕಲಿಯುತಿರೆ ನಾವಿಂದು
ಕಲೆಯದುವೆ ಮಾಗುವುದು ಬೊಮ್ಮಲಿಂಗ

ಕುಸುಮ ಷಟ್ಪದಿ ೯೨

ಒಲಿಯಲದು ತಡವಿಲ್ಲ
ಬಲಿಯದಿರೆ ಬಹುಗರ್ವ
ಬಲಿಯಾಗಿ ಹೋಗದಿರಿ ಹುಂಬತನಕೆ|
ಒಲಿಸುತಿರೆ ಗುರುಗಳನು
ಕಲಿಯುತಲೆ ನಾವಿಂದು
ಕಲೆಯದುವೆ ಮಾಗುವುದು ಬೊಮ್ಮಲಿಂಗ||

ಮುಕ್ತಕ ಕುಸುಮ-೯೩
ಮುಕ್ತಕದ ಅಲೆ-೧೦೩

ಮಂಕಾದ ಎದೆಯೊಳಗೆ ಬಿಂಕವದು ಬರಲೇಕೆ
ಟೊಂಕವನು ಕಟ್ಟದೆಲೆ ಗೆಲುವು ಸಿಗದು|
ಸಂಕವನು ಕಟ್ಟುತಲಿ ಸಂಕಲನ ಮೂಡಿಸಿರೆ
ಸಂಕವದು ಮೊಳಗುವುದು ಬೊಮ್ಮಲಿಂಗ||

ಕುಸುಮ ಷಟ್ಪದಿ-೯೩

ಮಂಕಾದ ಎದೆಯೊಳಗೆ
ಬಿಂಕವದು ಬರಲೇಕೆ
ಟೊಂಕವನು ಕಟ್ಟದೆಲೆ ಗೆಲುವು ಸಿಗದು|
ಸಂಕವನು ಕಟ್ಟುತಲಿ
ಸಂಕಲನ ಮೂಡಿಸಿರೆ
ಸಂಕವದು ಮೊಳಗುವುದು ಬೊಮ್ಮಲಿಂಗ||

ಮುಕ್ತಕ ಕುಸುಮ ೯೪
ಮುಕ್ತಕದ ಅಲೆ ೧೦೪

ಸಂಕಲಿಕೆ ತೊಟ್ಟಿರುತ ಸಂಕಲ್ಪ ಪಿಡಿದಿರಲು
ಸಂಕೋಲೆ ಹರಿಯುವುದು ಶುಭ್ರ ಮನಕೆ
ಸಂಕೀರ್ಣ ಸಮಯದಲಿ ಸಂಕುಚನ ಮೂಡದಿರೆ
ಸಂಕ್ರಮಣ ಶತಸಿದ್ಧ ಬೊಮ್ಮಲಿಂಗ

ಕುಸುಮ ಷಟ್ಪದಿ-೯೪

ಸಂಕಲಿಕೆ ತೊಟ್ಟಿರುತ
ಸಂಕಲ್ಪ ಪಿಡಿದಿರಲು
ಸಂಕೋಲೆ ಹರಿಯುವುದು ಶುಭ್ರ ಮನಕೆ
ಸಂಕೀರ್ಣ ಸಮಯದಲಿ
ಸಂಕುಚನ ಮೂಡದಿರೆ
ಸಂಕ್ರಮಣ ಶತಸಿದ್ಧ ಬೊಮ್ಮಲಿಂಗ

ಮುಕ್ತಕ ಕುಸುಮ-೯೫
ಮುಕ್ತಕದ ಅಲೆ-೧೦೫

ಮಂಡೆಯಲಿ ಹುಳವಿಟ್ಟು ಮಂಡಿಸುತ ಹಿರಿತನವ
ಮಂಡಿಯನು ಮುರಕೊಂಬ ಬಾಳದೇಕೆ
ಮಂಡಿಯೊಳು ತಾ ಕುಳಿತು ಮಂಡಕವ ಮೆಲ್ಲುತಲಿ
ಮಂಡಳಿಯ ದೂರುವುದೆ ಬೊಮ್ಮಲಿಂಗ

ಕುಸುಮ ಷಟ್ಪದಿ-೯೫

ಮಂಡೆಯಲಿ ಹುಳವಿಟ್ಟು
ಮಂಡಿಸುತ ಹಿರಿತನವ
ಮಂಡಿಯನು ಮುರಕೊಂಬ ಬಾಳದೇಕೆ
ಮಂಡಿಯೊಳು ತಾ ಕುಳಿತು
ಮಂಡಕವ ಮೆಲ್ಲುತಲಿ
ಮಂಡಳಿಯ ದೂರುವುದೆ ಬೊಮ್ಮಲಿಂಗ

ಮುಕ್ತಕ ಕುಸುಮ-೯೬
ಮುಕ್ತಕದ ಅಲೆ-೧೦೬

ಸವಿಯಾದ ಮೋಹಕ್ಕೆ ನವಸಿಹಿಯ ಹೂರಣವ
ನವಯುವತಿ ನೀಡಿತಿರೆ ಬಾಳು ಚೆಂದ
ಯುವಮನದ ಭಾವಗಳ ಭವದೊಳಗೆ ನಾವಿಳಿಸಿ
ಲವಲೇಶ ಕೆಡಿಸದಿರೆ ಬೊಮ್ಮಲಿಂಗ

ಕುಸುಮ ಷಟ್ಪದಿ-೯೬

ಸವಿಯಾದ ಮೋಹಕ್ಕೆ
ನವಸಿಹಿಯ ಹೂರಣವ
ನವಯುವತಿ ನೀಡಿತಿರೆ ಬಾಳು ಚೆಂದ
ಯುವಮನದ ಭಾವಗಳ
ಭವದೊಳಗೆ ನಾವಿಳಿಸಿ
ಲವಲೇಶ ಕೆಡಿಸದಿರೆ ಬೊಮ್ಮಲಿಂಗ

ಆರಿದ್ರ ಮಳೆಯಿಂದು
ದಾರಿದ್ರ್ಯ ಕಳೆಯುವರೆ
ದಾರಕನು ನಲಿವಂತೆ ಸುರಿಯಲೇನು
ಆರಂಭದಾರಂಭ
ದಾರಿಯಲಿ ನಿಂದಿಹುದು
ಕಾರುಣ್ಯ ತೋರಿಸಲಿ ಬೊಮ್ಮಲಿಂಗ

ಕವಿಮನಗಳಿಗು ಮಿಗಿಲು
ಕಿವಿಯ ನೀವ್ ತೆರೆದಿರುತ
ಸವಿಭಾವದೊಳಗಿಲ್ಲಿ ಬಂದಿರುವಿರಿ
ಸವಿಯಾದ ನುಡಿಗಳಲಿ
ಬುವಿಯೊಳಗೆ ಬೆಳಗುತಿರೆ
ಕವಿಯಾಗಿ ಹೊಳೆಯುವಿರಿ ಬೊಮ್ಮಲಿಂಗ

ಶರಣೆಂದು ಪುರಜನಕೆ
ಕರಮುಗಿದು ನಮಿಸುವೆನು
ವರವೀದು ಸಲಹಿದಿರಿ ನೀವುನಮಗೆ|
ಹರನಂತೆ ದಯೆಯಿರಿಸಿ
ಹರಸುತಿರಿ ದಿನದಿನವು
ಬೆರಸುತಲಿ ನಿಮ್ಮೊಲವ ಬೊಮ್ಮಲಿಂಗ||

ಸಬಲರೆಲ್ಲ ಮುಂದೊಮ್ಮೆ
ಸಿಬಿಕೆಯಲಿ ಪಯಣಿಸುತ
ಶಿಬಿರವನು ತವಕದಲಿ ಸೇರಬೇಕು|
ಅಬಲ ದೇಹವ ತೊರೆದು
ಶುಭಗಳಿಗೆಯೆಣಿಸದೇ
ನಭದೆಡೆಗೆ ಸಾಗುತಲಿ ಬೊಮ್ಮಲಿಂಗ||

ಪಾಪಗಳ ಜಾಡಿನಲ್ಲಿ
ಕೂಪದೊಳು ನಡೆಯುತ್ತ
ಪಾಪಿಗಳ ಸಂಘವನು ಮಾಡಲೇಕೆ
ವ್ಯಾಪಿಸಿರೆ ತನ್ನೊಳಗೆ
ದೂಪವನುರಿಸುತಿರಲು
ಪಾಪವದು ಕಳೆಯುವುದೆ ಬೊಮ್ಮಲಿಂಗ

ಜೀವಿಗಳ ಗುಡ್ಡವಿದು
ದೇವತೆಯ ನಾಮದಲಿ
ಭಾವದೊಳು ಕಿಚ್ಚಿಟ್ಟು ಹಚ್ಚಲೇಕೆ
ಕಾವಲಲಿ ಬೆಳೆದಿರುವ
ಕಾವಣಕೆ ವಿಷವಿಟ್ಟು
ಸಾವ ತರಲದು ತರವೆ ಬೊಮ್ಮಲಿಂಗ

ಕಾವಲ್ = ಹುಲ್ಲುಗಾವಲು
ಕಾವಣ = ತೋಪು ಹಂದರ

ದೇಹದೊಳು ನೆತ್ತರನು
ದೇಹಕ್ಕೆ ಜೀವವನು
ದೇಹಿಯೆನ್ನದೆಲಿತ್ತ ಮಾತೆ ಪಿತರು
ದಾಹಕಮೃತವೆರೆದು
ಮೋಹದೊಳು ನಿಂದವರ
ದೇಹಿಯೆನೆ ಬಿಡಬೇಡಿ ಬೊಮ್ಮಲಿಂಗ

ಕಾಡವುವು ನೆನಪಾಗಿ
ಕಾಡುಗಳು ಕರ್ಣದೊಳು
ಹಾಡಾಗಿ ಪಾಡುತಿಹ ಹಕ್ಕಿಯಂತೆ
ಗೂಡುಗಳ ಕಟ್ಟದೆಲೆ
ಹಾಡೆಂತು ಮೂಡುವುದು
ಕಾಡಿರದೆ ಹೇಳುವಿರ ಬೊಮ್ಮಲಿಂಗ

ಅನ್ಯಮಾರ್ಗವಿರದೆಲೆ
ವನ್ಯಜೀವಿಗಳಿಂದು
ಪನ್ಯ ಕಾಡನು ತೊರೆದು ತಡವುತಿಹವು

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು