ಕರಿ ಘಟ್ಟ
ಪ್ರಕೃತಿ-ವಿಕೃತಿ
•~•~•~•~•~•
ನಮ್ಮಯ ಪಾಪವ ತೊಳೆಯಲೆಂದು ಹರಿವ
ಕಾವೇರಿ ನದಿಯ ಸೇರಲೆಂದು ಓಡೋಡಿ
ಬರುವ ಪಾಪನಾಶಿನಿ ನದಿಯ ದಡದ ಬುಡದಲಿ
ಉದ್ಭವಿಸಿ ನಿಂತ ಕರಿಘಟ್ಟ ಎಂಬೀ ಪುಟ್ಟ ಬೆಟ್ಟ
ಅದಾರು ಎಂದು ಏನಂದರೋ ಕಾಣದಾದೆನು
ಕರಿಘಟ್ಟದ ಹೆಸರಿನ ಬೆಟ್ಟವನು ಕರ್ರಗಿರಿಸಿರಿ
ನಮ್ಮಾಶೀರ್ವಾದ ಪಡೆಯಿರೆಂದು ದೇವರು
ನುಡಿದರೆ ಅದು ದೇವರು ಹೇಗಾಗುವರೋ
ಸಕಲ ಜೀವ ಜಾಲವನು ರಕ್ಷಿಪ ದೇವರು
ನುಡಿದಿರಲಾರದ ಮಾತುಗಳ ಸ್ವಹಿತಕೆಂದು
ನುಡಿದ ಹೇಡಿಗಳೇ ನಿಮ್ಮ ಮನೆ ಮಠವನ್ನು
ಅಗ್ನಿಗಾಹುತಿಯಿಟ್ಟು ಕರ್ರಗೆ ಮಾಡಿಕೊಳ್ಳಿರಿ
ದೈವದ ಹರಕೆಯ ಪೆಸರಿನಲಿ ಕಿಚ್ವನಿಟ್ಟು
ಪ್ರಕೃತಿಗೆ ದ್ರೋಹ ಬಗೆಯದಿರಿ ಬಂಧುಗಳೇ
ಸರ್ವಕಾಲಕೂ ಸರ್ವರನು ಸಮನಾಗಿಡಲು
ಶ್ರಮಿಸುವ ಪ್ರಕೃತಿಯೆಂದು ವಿಕೃತಿಯಾಡದು
ಕರ್ರಗಿರಿಸಲು ಬರುವ ನಿಮ್ಮ ಕರಿಮನದೆದುರು
ಶುಭ್ರ ಮನದ ಚಿರ ಯೌವನ ಹೊತ್ತಿಹ ರಮೇಶ್
ದಂಪತಿಗಳ ಮುದ್ದಿನ ಅಪಾರ ಶಿಶುಗಳನಿಂದು
ಕಂಡು ಕಣ್ತುಂಬಿತು. ಶುಭವಾಗಲಿವರಿಗೆ ಸರ್ವದಾ
ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨/೭/೨೦೧೯
Comments
Post a Comment