ಈ ಬದುಕು ಇನ್ನೆಂದಿಗೂ ಹೀಗೇ

ಈ ಬದುಕು ಇನ್ನೆಂದಿಗೂ ಹೀಗೇ
~~~~~~~~~~~~~~~~~

ಈ ಸೋಲುಗಳ ಆರಂಭವೇ ಹೀಗೆ
ಸೋತ ಮುಖ ಹೊತ್ತವರ ಗೋತ ಹೊಡೆಸುವ ಹಾಗೆ
ಗೆಲುವ ನಗೆ ನಕ್ಕವರ ಕಾಲು ಹಿಡಿವ ಹಾಗೆ
ಗೆಲುವಿನ ಮೆಟ್ಟಿಲಿನೆಡೆಗೆ ಕೈ ತೋರುವ ಹಾಗೆ
ಪ್ರತಿ ಸೋಲುಗಳೇ ಸೋಪಾನವಾಗಿ ಇಸೋಪಾನ ಕಥೆಯ ಹೇಳಿದ ಹಾಗೆ.

ಈ ಗೆಲುವುಗಳ ಆರಂಭವೂ ಹೀಗೆಯೇ
ಚಿಕ್ಕ ಪುಟ್ಟ ಗೆಲುವು ಕಂಡವರ ಬದುಕಿನ ಹಾಗೆ
ಗೆದ್ದೇ ಎಂದು ಬೀಗಿ ಎಲ್ಲರೆದುರು ಬಿದ್ದು ಏಳಲಾಗದ ಹಾಗೆ,
ಬಿದ್ದರೂ ಮೀಸೆ ಮಣ್ಣಾಗದು ಎಂದು ಹುಳ್ಳ ನಗೆ ನಕ್ಕ ಹಾಗೆ
ಗೆದ್ದೆ ನಾನೆಂದು ಆಹಾ ಎಂಬ ಅಹಂ ತುಂಬಿಕೊಂಡು
ಸತ್ಯದ ಅರಿವಿಗೆ ಕೆಟ್ಟ ಹಠದ ಪರದೆ ಇಳಿಬಿಟ್ಟ ಹಾಗೆ

ಇಂದಿನ ಆರಂಭದ ಆರಂಭವು ಹಾಗೆ
ಆರಂಭ ಆರಂಭಕೆ ಮಳೆಯ ಕೊರತೆಯ ಒರತೆ ಮೂಡಿದ ಹಾಗೆ,
ನೆರೆಯವರ ಸಹಾಯವಿಲ್ಲದೆ ವ್ಯವಸಾಯ ಮಾಡ ಹೋಗಿ
ಸಾಯ ಸಾಯ ಅವ ಸಾಯ ಇವ ಸಾಯ ವ್ಯವಸಾಯವೇ ಸಾಯ
ಮನೆಯವರೆಲ್ಲಾ ಸಾಯ ಈ ವ್ಯವಸಾಯ ಎಂದು
ಸಾಲದ ಸಹಾಯದಲಿ ವ್ಯವಸಾಯ ಮಾಡಿದ ಹಾಗೆ

ಮುಂದಿನ ಪೀಳಿಗೆಯ ಬದುಕು ಕೂಡ ಹೀಗೇ
ಅಜ್ಜಿ ತಾತಂದೀರು ಕಾಣದೆ ವೃದ್ಧಾಶ್ರಮದಲ್ಲಿ ನರಳಿದ ಹಾಗೆ
ಮಕ್ಕಳು ಮನೆಗೆ ಬಂದಾಗ ಕೆಲಸದಾಳುಗಳ ಕೈಯಲ್ಲಿ ತಿಂಡಿ ತಿಂದ ಹಾಗೆ
ಅಣ್ಣ ತಮ್ಮ ಅಕ್ಕ ತಂಗಿಯರ ಕಾಣದೇ ಏಕಾಂಗಿಯಾಗಿ ಕೊರಗುವ ಹಾಗೆ
ರೊಕ್ಕದ ಹಿಂದೆ ಹೊಕ್ಕ ಪೋಷಕರು ತಿನ್ನಲೆಂದು ರೊಕ್ಕವನ್ನೇ ಕೊಟ್ಟ ಹಾಗೆ
ರೊಕ್ಕದಲ್ಲೇ ತಿಂದು ರೊಕ್ಕದಲ್ಲೇ ಮಲಗಿ ಭಾವನೆಗಳ ಮರೆತು ಹಿರಿಯರನು
ರೊಕ್ಕ ಕೊಟ್ಟು ವೃದ್ಧಾಪ್ಯದ ಕಾಲದಲ್ಲಿ ಭಿಕಾರಿಯಾಗಿ ಮಾಡಿದ ಹಾಗೆ

ಈ ಬದುಕು ಇನ್ನೆಂದಿಗೂ ಹೀಗೇ

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೧/೬/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು