ಮರಳಿ ಬಾರೆಯ ಬಾಲ್ಯವೆ
ಮರಳಿ ಬಾರೆಯ ಬಾಲ್ಯವೆ
~~~~~~~~
ಬೇಡ ಬೇಡವೆಂದರೂ ಕೆಣಕಿ ಕರೆಯುತಿದೆ
ನೋಡ ನೋಡುತಿದ್ದಂತೆ ಹಣಕಿ ಮೆರೆಯುತ್ತಿದೆ
ಕಾಡ ನೋಡಿದ ಕನಸದು ಕಣ್ಣಿಗೆ ಕಟ್ಟಿದಂತಿದೆ
ಬೇಡದೆ ಬಡಿದು ತಂದು ತಿಂದ ಹಣ್ಣಿನಂತಿದೆ
ನಮ್ಮ ಬಾಲ್ಯ ಮತ್ತೆ ಮತ್ತೆ ನೆನಪಾಗುತ್ತಿದೆ
ಹರಿದ ಅಂಗಿಯ ಜೇಬ ತುಂಬಾ ಬಣ್ಣ
ಬಣ್ಣದ ಗಾಜಿನ ಗೋಲಿಗಳು ಕಿಂಕಣಿಸುತ್ತಿವೆ
ರಡೆ ಎಂದರೆ ವಡೆ ಎಂದಣಿಕಿಸಿ ಆಡುತ್ತಿದ್ದ
ಚಿನ್ನಿ ದಾಂಡು ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳ
ಹೋಗಿ ಮಕಾಡೆ ಮಲಗಿದ ನೆನಪು ಕಾಡಿದೆ
ಮರಕೋತಿಯಾಡಲು ಎಳೆಯ ಮರವ
ಹತ್ತಿ ಮುರಿದ ರೆಂಬೆಯ ಜೊತೆಗೆ ಜಾರಿಬಿದ್ದು
ಉಳುಕಿದ ಕೈಯನು ಅಮ್ಮ ನೋಡದಂತೆ
ಮರೆಮಾಚಿದರೂ ಮೊಗದಲ್ಲಿ ಅಡಗಿದ್ದ
ನೋವು ಕಂಡು ಕನಲಿದಮ್ಮನ ನೆನಪಾಗಿದೆ
ಮರಳಿ ಬಾರೆಯ ಬಾಲ್ಯವೆ ಅಪ್ಪ ಅಮ್ಮರ
ಜತೆಗೂಡಿ ಯುವರಾಜನ ತೆರದಿ ಬದುಕಿ
ಕುಲುಷಿತಗೊಳ್ಳದ ನೇಹದೊಡಗೂಡುತಲಿ
ಬೇದ ಭಾವವಿಲ್ಲದೆ ಕಲ್ಲಾಟ ತಿಂಡಿಗಳ
ಮೆಲ್ಲಾಟದೊಳು ಸಹೋದರತೆ ಮೆರೆಯೆ
*ವೈ.ಕೊ.*
*ವೈಲೇಶ ಪಿ ಎಸ್ ಕೊಡಗು*
*೧೩/೪/೨೦೧೯*
Comments
Post a Comment