ಅಮ್ಮಾ......
ಅಮ್ಮಾ......
~~~~~~~
ನಮ್ಮಮ್ಮನಿಗೆ ನನ್ನನ್ನು ಕಂಡರೆ ಬಲು
ಪ್ರೀತಿಯಂತೆ. ನಮ್ಮಪ್ಪನಿಗೂ ನಮ್ಮಮ್ಮ
ಎಂದರೆ ಬಲು ಪ್ರೀತಿಯಂತೆ ಅದರಿಂದಾಗಿ
ಅಪ್ಪ ಬಳಿ ಬಂದರೆ ನನಗೆ ಇನ್ನಿಲ್ಲದ ಭೀತಿ.
ಅಣ್ಣ" ಅವನು ಕೂಡ ಅಮ್ಮನನ್ನು ತುಂಬಾ
ಪ್ರೀತಿಸುತ್ತೇನೆ ಎಂದಿದ್ದ ನೆನಪಿದೆ. ಹಾಗೆ ತಮ್ಮನಿಗೂ ಅಮ್ಮನ ಪ್ರೀತಿ ಸಿಗುತ್ತಲೆ ಇದೆ.
ಪ್ರಪಂಚವೆಲ್ಲಾ ಅಮ್ಮನನ್ನು ಹೊಗಳುತ್ತಿದೆ
ಎಲ್ಲರನ್ನೂ ಪ್ರೀತಿಸಿದ ಅಮ್ಮನ ಪ್ರೀತಿ
ನನಗೇಕೋ ಸಿಗಲೇ ಇಲ್ಲ! ತಮ್ಮನಿಗೆ
ಸಿಕ್ಕಿದ ಅಮ್ಮನ ಪ್ರೀತಿ ನನಗೆ ಸಿಗಲಿಲ್ಲ.
ನಾ ಮಾಡಿದ ತಪ್ಪೇನೆಂದು ಗೊತ್ತಾಗಿಲ್ಲ
ಎಲ್ಲರೂ ಪ್ರೀತಿಸಿದ ಅಮ್ಮನನ್ನು ದೇವರು
ಪ್ರೀತಿಸಿಬಿಟ್ಟ. ಹಾಗಾಗಿ ನಾ ಹುಟ್ಟಿದ ತಕ್ಷಣ
ಕಣ್ಬಿಡುವ ಮೊದಲೇ ಅಮ್ಮನ ಪ್ರೀತಿಯನು
ನನ್ನಿಂದ ದೇವರು ಕಸಿದುಕೊಂಡುಬಿಟ್ಟ
ನಮ್ಮಮ್ಮನನ್ನು ಜೊತೆಗೆ ಕರೆದೊಯ್ದುಬಿಟ್ಟ
ಅಪ್ಪನ ಮಡದಿ ನನಗೆ ಅಮ್ಮನಾಗಲೇ ಇಲ್ಲ
ತಮ್ಮನ ಅಮ್ಮ ನನಗೆ ಅಮ್ಮನಾಗಲಿಲ್ಲ ಕನಸಲ್ಲೂ ಕೂಡ ಅಮ್ಮ ಮೈ ದಡವಲಿಲ್ಲ
ಅಮ್ಮ ನನ್ನ ಮೈ ದಡವಲಿಲ್ಲಾ..........
ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨೦/೪/೨೦೧೯
Comments
Post a Comment