ಭಾಮಿನೀ ಷಟ್ಪದಿ

ಭಾಮಿನಿ ಷಟ್ಪದಿ ೦೧

ಕೊರೆದು ದಿನವೂ ಧರೆಯ ಮಡಿಲನು
ಹರಿಸಿ ಜಲವನು ಬರಿದು ಗೊಳಿಸಿರೆ
ತರಿದು ವನವನಳಿಸಲು ಪರಿಸರ ಮಳೆಯು ಸುರಿದೀತೆ
ಬರಿಯ ಮಾತಲಿ ವನವನುಳಿಸಿರೆ
ತಿರಿದು ಬದುಕಲು ಮನವ ಮಾಡುತ
ಧರೆಯ ಕಳೆದೊಡೆ ನಮ್ಮ ಪೀಳಿಗೆ ಮುಂದೆ- ಯುಳಿದೀತೆ

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೧೩/೪/೨೦೧೯

ಭಾಮಿನಿ ಷಟ್ಪದಿ- ೦೨

ಇಳೆಯ ಕೊಳೆಯನು ತೊಳೆಯಬಾರದೆ
ಮಳೆಯ ದೇವನೆ ನೀನು ಕೋಪವ
ತಳೆದು ಮಳೆಯನು ಸರಿಸಿ ನಡೆದೊಡೆ ಸಾವು ಬರದೇನು
ಅಳಿವ ಜೀವಿಯ ಮೊರೆಯ ಕೇಳದೆ-
ಳಳಿಸಿ ಹಾಕಲು ಜೀವ ಸಂತತಿ
ನಿಲುವ ತಳೆದುದು ಸರಿಯೆ ವರುಣನೆ ಕರುಣೆಯಿರದೇನು.

ವೈ.ಕೊ.
ವೈಲೇಶ ಪಿ ಎಸ್ ಕೊಡಗು

ಭಾಮಿನಿ ಷಟ್ಪದಿ -೦೩

ಪಡುವಣದ ಹಾದಿ ಹಿಡಿದ ರವಿಯ
ತಡೆಯಲಹುದೇ ಎಂದರಿಯದೇ
ಮಡಿಲ ತುಂಬಾ ನೀರ ಹನಿಗಳ ಹೀರಿದಿಬ್ಬನಿಯು
ಮಡಿಯತೊಡಗಿದ ಜಲದ ವೇಗಕೆ
ತಡಿಯುಡುಗಲು ಮರುಗುತ ಮರೆಯದೆ
ಗಡಬಡಿಸಿ ಧರೆಗಿಳಿದು ಮಾಯವಿಯಾಗತೊಡಗಿದನೆ

*ವೈ.ಕೊ*
*ವೈಲೇಶ ಪಿ ಎಸ್ ಕೊಡಗು*
*೧೪/೪/೨೦೧೯*

ಭಾಮಿನಿ ಷಟ್ಪದಿ-೦೪

ರವಿಯು ಲಘಬಗೆಯಿಂದ ದಿನವೂ
ಕವಿದ ಮಂಜನು ತೊಡೆದು ಚಲಿಸುತ
ಬುವಿಗೆ ತನುವಿನ ಕಿರಣ ಸೂಸಲು ಮೊದಲು ಗೊಂಡಿಹನು
ಸವಿಯ ಕಿರಣಕೆ ಸಕಲ ಜೀವಿಯು
ಭವದ ಬದುಕಿನ ದಿನದ ಕಾಯಕ-
ದವನ ನಡೆಯನು ಹರುಷದಿಂದಲಿ ಎದುರು ಗೊಂಡಿಹರು

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೧೫/೪/೨೦೧೯

ಭಾಮಿನಿ ಷಟ್ಪದಿ-೦೫

ಕೆರೆಯ ನೀರೊಳು ತೇಲಿ ನಲಿದಿರು-
ವರಳು ಕಮಲದ ಪಕಳೆ ಮೇಲಣ
ಜರಿಯ ಸೊಬಗಿಗೆ ರಂಗು ತಂದವರಾರು ಪೇಳಮ್ಮ?
ಹರನ ಕರುಣೆಯ ಬಲದ ಜೊತೆ ತರ-
ತರಹ ಹೂವಿನ ಚೆಲುವುದರಳಲು
ಕಿರಣ ಸೂಸುವ ರವಿಯ ಬಲವದಿರುವುದುನ ಕಾಣಮ್ಮ!

ವೈ.ಕೊ
ವೈಲೇಶ ಪಿ ಎಸ್ ಕೊಡಗು
೧೬/೪/೨೦೧೯

ಭಾಮಿನಿ ಷಟ್ಪದಿ ಗೆಜ್ಜೆ ೦೬

ಗತಿಗೆ ಕೇಡನು ತಾರದಂತಹ
ಮತಿಯ ಬಳಸುತ ದೇಶ ಕಾಯುವ
ಯತಿಯ ಹೋಲುವ ನವ್ಯ ನಾಯಕರಾಯ್ಕೆ ನಮದಿರಲಿ
ಮತವ ಹೊಂದಿಹ ಜನರೆ ಕೇಳಿರಿ
ಹಿತವನೆಸಗಲು ದೇಶ‌ದೇಳ್ಗೆಗೆ
ಸತಿಸುತರೊಡನೆ ಸಾಗಿ ಸುಜನಗೆ ಮತವ ನೀಡೋಣ

*ವೈ.ಕೊ.*
*ವೈಲೇಶ ಪಿ ಎಸ್ ಕೊಡಗು*
*೧೭.೪.೨೦೧೯*

ಭಾಮಿನಿ ಷಟ್ಪದಿ

ಬೊಮ್ಮ ಸುಮ್ಮನೆ  ಕುಣಿಸಿ ನಮ್ಮನು-
ಯೊಮ್ಮೆ ಕಷ್ಟವ ನೀಡಿ ಸುಖದಲಿ
ಯೆಮ್ಮ ತೇಲಿಸಿ ಅಳಿಸಿ ನಗಿಸುತಲಿರುವನೇಕಮ್ಮ
ನಮ್ಮ ನಿಮ್ಮಯ ನಡೆಯ ಕಾಣುತ
ದಮ್ಮ ಕಾಯುವ ಬಮ್ಮ ದೇವನು
ಸುಮ್ಮನಿರುವುದ ಜಗವದೊಲ್ಲದ ಬಲ್ಲ ಕಾಣಮ್ಮ

ವೈ.ಕೊ
ವೈಲೇಶ ಪಿ ಎಸ್ ಕೊಡಗು
೧೯/೪/೨೦೧೯

ಭಾಮಿನಿ ಷಟ್ಪದಿ ಗೆಜ್ಜೆ -೦೮

ಉದಯ ಕಾಲದೊಳೆದ್ದ ರಾಯರು
ಮದುವೆ ಸಂಭ್ರಮದಲ್ಲಿ ಬೆರೆಯಲು
ಸದಭಿರುಚಿಯಲಿ ಮಡದಿಯೊಂದಿಗೆ ಹೊರಟು ನಿಂದಿಹರು|
ಮುದದಿ ಜೊತೆಯಲಿ ನಾಚಿ ನಿಂತಿಹ
ಮದನಿ ಮುಡಿದಿಹ ಮನದ ಒಡತಿಗೆ
ಹದಹುವಿಂದಲಿ ಹೊಸತು ಹುರುಪಲಿ ಕದಪು ಗಿಲ್ಲಿದರು||

ಮದನಿ= ದುಂಡು ಮಲ್ಲಿಗೆ
ಹದಹು=ಪ್ರೀತಿ
ಕದಪು=ಕೆನ್ನೆ

ವೈಲೇಶ ಪಿ ಎಸ್ ಕೊಡಗು

ಭಾಮಿನಿ ಷಟ್ಪದಿ ಗೆಜ್ಜೆ-೦೯

ಪಾಶವೆಲ್ಲವ ತೊರೆದು ರೋಷಾ-
ವೇಶದಿಂದಲಿ ಕಾದು ನಮ್ಮಯ
ಕೋಶ ರಕ್ಷಿಪ ವೀರ ನಾಯಕರನ್ನು ನೆನೆಯೋಣ
ದೇಶ ಸೇವೆಗೆ ಮಾತೆಯೊಲವಿಗೆ
ವೇಷ ಬದಲಿಸಿ ಕಾವ ಯೋಧರ-
ನೀಶ ನೀಡಿದ ವರವು ಎನುತಲಿ ಕರವ ಮುಗಿಯೋಣ

ವೈ. ಕೊ
ವೈಲೇಶ ಪಿ ಎಸ್ ಕೊಡಗು
೨೦/೪/೨೦೧೯

ಭಾಮಿನಿ ಷಟ್ಪದಿ ಗೆಜ್ಜೆ-೧೦

ಎತ್ತು ಏರಿನ ಜೊತೆಗೆ ನಡೆಯುತ
ಬಿತ್ತಿ ಬೆಳೆಯುವ ರೈತ ಜಗದೊಳು
ತುತ್ತು ನೀಡುವ ಕೂಳುದಾತನ ದೇವನೆನ್ನುವರು!
ನತ್ತು ಧರಿಸುತ ಪತಿಗೆ ನಡೆಯುವ
ಹೊತ್ತು ಹೊತ್ತಿಗೆ ನಿತ್ಯ ಮೆಲ್ಲಲು
ಚಿತ್ತ ಕದಲದೆ ತುತ್ತು ನೀಡುವ ದೇವಿ ಸತಿಯಿವಳು!

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨೧/೪.೨೦೧೯.

ಭಾಮಿನಿ ಷಟ್ಪದಿ ಗೆಜ್ಜೆ ೧೧

ಕುತ್ತು ರೈತಗೆ ಮಳೆಯು ಬರದಿರೆ
ಬಿತ್ತಿ ಬೆಳೆಯದೆ ಬಡವ ನೇಣಿಗೆ
ಕತ್ತು ನೀಡುತ ಜೀವ ಕಳೆದಿರೆ ಬದುಕು
ತರವೇನು?
ನತ್ತು ಮಾರಿದ ಸತಿಯು ನರಕಕೆ
ಹೆತ್ತ ಮಕ್ಕಳು ದಿಕ್ಕು ತಪ್ಪಿರ-
ಲೆತ್ತ ಹೋದನು ಮಳೆಯ ರಾಯನು ಕಾಣದಾಗಿಹನು!

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨೨/೪/೨೦೧೯

ಭಾಮಿನಿ ಷಟ್ಪದಿ ಗೆಜ್ಜೆ-೧೨

ಹಿಂದೆ ಮಾಡಿದ ಪಾಪದಾಫಲ
ನಿಂದು ಕಾಡಿರೆ ರೋಗ ರೂಪದಿ
ಮಿಂದು ಬಂದರು ಸಕಲ ತೀರ್ಥದಿ ಕಳೆಯಲಾದೀತೆ.
ಇಂದು ವಸನಕು ತೊಡಕು ಮಾಗಿದೆ
ಮಂದಿಯೆದುರಿಗೆ ಮನವು ಬಾಗಿದೆ
ಮುಂದೆ ಚಿಂತೆಯು ಚಿತೆಯನೇರಿಸ-
ಲಸುವ ಬೇಡುತಿದೆ.

ಅಸು=ಪ್ರಾಣ

ವೈ. ಕೊ
ವೈಲೇಶ ಪಿ ಎಸ್ ಕೊಡಗು
೨೩/೪/೨೦೧೯

ಭಾಮಿನಿ ಷಟ್ಪದಿ ಗೆಜ್ಜೆ-೧೩

ದೇವನೊಬ್ಬನೆ ನಾಮ ಹಲಬಗೆ
ಕಾಯದೇಸುವು ಎಲ್ಲಿ ಹೋದರು
ಸಾವ ತರುವರೆ ಯಮನೆ ಬರುತಿರಲರಿತ ಜನರಾರು
ಭಾವವಿಲ್ಲದೆ ಸಾವು ತರುವುದು
ನೋವ ನೀಡುತ ಜನರ ಕೊಲುವುದು
ಜೀವ ಹೀರುವ ಮನುಜ ರಕ್ಕಸನೆಂಬ ಸಂಶಯವು

ವೈಲೇಶ ಪಿ ಎಸ್ ಕೊಡಗು
೨೪/೪/೨೦೧೯

ಭಾಮಿನಿ ಷಟ್ಪದಿ ಗೆಜ್ಜೆ-೧೪

ಹೃದಯ ತುಂಬಿದ ಪ್ರೀತಿ ನಿನ್ನದು
ಹದವನರಿತಹ ಹಿತವ ನುಡಿಯುತ
ಮುದುಡಿ ಕುಳಿತಿಹ ಮನವನರಳಿಸಿ ನಲಿದೆ ನನ್ನಮ್ಮ 
ಮೃದುಲ ಮನಸಿನ ಭಾವದಲೆಯೊಳು
ಮಧುರ ಮೋಹಕ ನಡೆಯನಾಡುತ
ಮಧುವು ಸುರಿಯುವ ಲೋಕ ತೋರಿದ ದೇವಿ ನೀನಮ್ಮ

ವೈ.ಕೊ.
ವೈಲೇಶ ಪಿ ಎಸ್ ಕೊಡಗು

ಛಂದೋಬದ್ಧ ಕವನ ಸ್ಪರ್ಧೆಗಾಗಿ

ಭಾಮಿನಿ ಷಟ್ಪದಿ ಗೆಜ್ಜೆ ೧೫
~~~~~~~~~~

ಬೇಸಗೆಯ ಬಿರುಬಿಸಿಲ ಹೊಡೆತದ
ಗಾಸಿಗೆ ಬಳಲಿ ಗಾರುಮಣ್ಣಲಿ
ವಾಸವಾಗಿರುವಂತೆ ಬೀಜವು ಹುದುಗಿ ಹೋಗುವುದು|

ಬೀಸಿ ಗಾಳಿಯು ಗಾರು ಮಣ್ಣನು
ಕೀಸುಗೊಳಿಸುವ ಮಳೆಯು ಸುರಿದರೆ
ಕೂಸಿನಂದದಿ ಹೊರಗೆ ಸೂಸುತ ಜೀವ ಮೂಡುವುದು||

ಕೀಸುಗೊಳಿಸುವ =ತೆಳುವಮಾಡು ಕೃಶಗೊಳಿಸು
ಸೂಸುತ=ಕಾಣುತ

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨೭/೪/೨೦೧೯

ಭಾಮಿನಿ ಷಟ್ಪದಿ ಗೆಜ್ಜೆ-೧೬
~~~~~~~~~~~
ಹಣದ ಮದವದು ಮಿತಿಯ ಮೀರಿರೆ
ಗುಣವು ತಿಳಿಯದೆ ದೂರ ನಡೆವುದು
ಗಣವು ನಮ್ಮಯ ಜೊತೆಗೆ ಬರುವವು ಗಂಟು ಕರಗುವರೆ.
ಋಣವು ಮುಗಿದಿರೆ ತನುವು ಸವೆದು ಮ-
ಸಣಕೆ ಸಾಗಲು ಮನವ ಮಾಡಿರೆ
ಚಣವು ಜೊತೆಯಲಿ ಧನವು ಬಾರದು ತಿಳಿವ
ನಾವಿದನು

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨೮/೪/೨೦೧೯

ಭಾಮಿನಿ ಷಟ್ಪದಿ ಗೆಜ್ಜೆ-೧೭

ಮಾಸವಮಿತದವಸರವಾವಾ-
ಯಾಸವಿರದೆಲೆ ನಡೆದು ಸವಿಮನ-
ದಾಸೆಯನು ಚಪ್ಪರಿಸಿ ಸಾಗಲು ಸಮಯ ಮೂಡಿಸಿದೆ|
ಪಾಸಟಿಯಿರದ ಭವ್ಯ ಭಕ್ಷ್ಯವ
ಪಾಸಲೆಯಲಿಯ ಸಕಲ ಜನಗಳು
ಲಾಸವಾಡುತ ಮೆದ್ದು ಸಂತಸ ಹಂಚ ತೊಡಗಿರಲು

ಬಣ್ಣ ಬಣ್ಣದ ರಂಗು ಬಳಿದಿಹ
ಬೆಣ್ಣೆಯೊಂದಿಗೆ ಸಿಹಿಯ ಬೆರೆಸಿಹ
ಚಿಣ್ಣರಿಷ್ಟದ ಭಕ್ಷ್ಯವೆಲ್ಲವ ಪಿಡಿದು ತರುತಿರಲು
ಕಣ್ಣನೊರಸುತಲಣ್ಣ ಬಂದನು
ತಣ್ಣನೆಯ ನೀರ ತರಲರುಹಿರೆ
ಸನ್ನೆಯಿಂದಲಿ ತಿಳಿದರತ್ತಿಗೆಯೊಳಗೆ ನಡೆದಿಹರು

ಪಾಸಟಿ = ಎಣೆ : ಸಾಟಿ
ಪಾಸಲೆ=ಸುತ್ತಮುತ್ತಲಿನ
ಲಾಸವಾಡುತ=ಲಾಸ್ಯವಾಡುತ

*ವೈ.ಕೊ*
*೩೦/೪/೨೦೧೯*

ಭಾಮಿನಿ ಷಟ್ಪದಿ- ೧೮

ಕವಿಯಗೋಷ್ಟಿಯು ಮೊದಲುಗೊಳುತಿರೆ
ಕಿವಿಯತುಂಬಿತು ಬರಿಯಭಾಷಣ
ವಿವರವರಿಯಲು ಜನರು ಕಾದರು ಕುಳಿತು ಸಂತಸದಿ
ಬುವಿಯದೆಲ್ಲರು ಸವಿವ ಭೂಷಣ
ರವಿಯು ಕಾಣದನರಿತ ಕವಿಗಳ
ಸವಿಯ ಸೊಬಗಿನ ಕವಿತೆ ಕೇಳುತ ಕಿವಿಯು ತಣಿದಿಹುದು

ವೈ.ಕೊ.
ವೈಲೇಶ ಪಿ ಎಸ್ ಕೊಡಗು.
೧/೫/೨೦೧೯

ಛಂದೋಬದ್ಧ ಕಾವ್ಯರಚನಾಸ್ಪರ್ಧೆ --9
03-05-2019 ಕ್ಕೆ
ಭಾಮಿನಿ ಷಟ್ಪದಿ ಗೆಜ್ಜೆ-೧೯

ತಣ್ಣಗಿಹುದೀ ರಾತ್ರಿಯೆನ್ನುತ
ಕಣ್ಣುಮಿಟುಕಿಸಿ ಚಂದ್ರನೊಂದಿಗೆ
ಚಿಣ್ಣರಾಟವ ಮುಗ್ಧತನದಲಿ ಚುಕ್ಕೆ ಯಾಡಿಹುದು|
ಕಣ್ಣಸನ್ನೆಯನರಿತ ಚಂದ್ರನು
ಸಣ್ಣದಾಗಿಹ ಚುಕ್ಕೆಗಾಗಿಯೆ
ಬಣ್ಣ ಬಣ್ಣದ ವೇಷಭೂಷಣ ತರಿಸಿ ಮಡುಗಿದನು

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೪/೫/೨೦೧೯

ಭಾಮಿನಿ ಷಟ್ಪದಿ ೨೦

ಮಬ್ಬು ಹರಿಯುವ ಮುನ್ನ ಬೇಗನೆ
ಹಬ್ಬದಡಿಗೆಗೆ ಬಲದ ಬೆಂಕಿಯ
ಹಬ್ಬಿಸತೊಡಗಿ ಪಾತ್ರೆ ತುಂಬಲು ನೀರು ಸುರಿಸಿದರು
ಹೆಬ್ಬಗೋಡಿಯ ನೆರೆದ ಜಾತ್ರೆಗೆ
ಹಬ್ಬದೂಟವ ಪುರದ ಜನಗಳು
ಹುಬ್ಬು ಹಾರುವ ತೆರದಿ ನೀಡಲು ಬೆರಗು ಮೂಡಿಸಿತು

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೪/೫/೨೦೧೯

ಬಸವಣ್ಣನವರ ಜನುಮದಿನಕೆ ನುಡಿ ನಮನ
ಭಾಮಿನಿ ಷಟ್ಪದಿ -೨೧

ಇಳೆಗೆ ಬಾರೆಯ

ಕಸುವುಬಳಸುತ ದುಡಿವಸಕಲರು
ಕಸವರಸವನು ಮಾಡಿಬದುಕಲಿ
ಹಸಿವ ನೀಗಿಸುವುದಕೆ ಸಮಯವ ಸವೆಸುವುದು ಸರಿಯೆ
ಬಸವನಾಣೆಗು ಕೇಳಿಪೇಳುವೆ
ಹುಸಿಯನುಡಿಯದೆ ಕಳವುಮಾಡದೆ
ಹಸಿಯಮೋಸವ ದೂಡಿಮನದಲಿ ಬಸವದೇವರೆನೆ

ವರವುನಮಗಿದು ನರನಜನುಮವು
ಹರನನೆನೆಯದೆ ಬಾಳುಸವೆದಿರೆ
ಸರಿದುಸಾಗುವ ಗಳಿಗೆನಿಲ್ಲದೆ ಬೇಗಕಳೆಯುವುದು
ಮರಣಬರುವುದರೊಳಗೆನಗುತಲಿ
ಶರಣಮನಗಳ ನಮಿಸಿಗುರುಗಳ
ಚರಣಕೆರಗಿರೆ ಬದುಕುಸರಸರ ನಾಕಸೇರುವುದು

ನಿಮ್ಮೊಳೊಳಿತಿನ ನುಡಿಯ ಕೇಳದೆ-
ಲೆಮ್ಮ ನಡತೆಯ ತಿದ್ದಿಕೊಳ್ಳದೆ
ತಮ್ಮ ಹಾದಿಯೆ ಸರಿಯು ಎನ್ನುವ ಜನರು ಹೆಚ್ಚಿಹರು
ಸುಮ್ಮನೇತಕೆ ಮೇಲೆ ಕುಳತಿಹೆ-
ಯೊಮ್ಮೆ ಬರದೆಲೆ ಜಗಕೆಯೆಂದಿಗು
ಕಮ್ಮ ಕಳೆಯದು ನುಡಿವೆ ಮರುಗುತ ಕೇಳು ಬಸವಣ್ಣ

ಇಳಿದು ಬಾರೆಯ ಇಳೆಗೆ ಬೇಗನೆ
ತಳೆದು ನೋಡಲು ಹೊಸತು ಜನುಮವ
ಕಳೆದು ಹೋಗಿಹ ಸತ್ಯ ದಮ್ಮವ ಮರಳಿ ತರುವುದಕೆ
ತಿಳಿವಳಿಕೆಯಿರದ ನವ ಮಾನವ
ತಳಿಗೆ ಬಡಿದಿಹ ಹೀನ ಗುಣಗಳ-
ನಳಿಸಿಮತಿಯನರುಹಲು ಕಾಯುತಲಿರುವೆ ಕೇಳಣ್ಣ

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೭/೫/೨೦೧೯

*ಭಾಮಿನಿ ಷಟ್ಪದಿ-೨೨

*ರವಿಯ ವಾರದ ಮೆರುಗು ಸೂಸುವ
ಕವಿಯ ಗೋಷ್ಠಿಗೆ ನಾಮ ನೀಡಲು
ಬುವಿಯ ಹೋಲುವ ಸಕಲ ಕವಿಗಳು ಒಲವ ನೀಡುವರೆ|*
ಸವಿಯ ಸೊಬಗಿನ ಇಳೆಯ ನಡುವಣ
ನವದ ಯೋಜನೆ ರೂಪುಗೊಳಿಸಲು
ಭವದ ಜನರೂ ಮನವ ಮಾಡಲು ನಾವು  ಕೋರುವೆವು||*

ವೈಲೇಶ ಪಿ ಎಸ್ ಕೊಡಗು
೮/೫/೨೦೧೯

ಜೇನು ಸುರಿಯುವ ಮಾತಿನಲಿ ನಾ-
ವೇನು ಮಾಡಿರೆ ಫಲವಿಲ್ಲ ನೀ-
ನೇನು

ನಾನು ನನ್ನದು ನನಗೆ ಎಲ್ಲವ-
ದೇನು ಮಾಡುವೆ ನೀನು ಎನುತಿಹ
ಜ್ಞಾನವರಿಯದ ಮೂಢ ಜನರಿಗೆ
ಸಾವು ಬರದಿಹುದೆ|
ಧೇನುಗಳ ಕಾಯುತಲಿ ಗೊಲ್ಲನು
ಕಾನನದೊಳಿದ್ದರೂ ಜಾನದ
ಭಾನವನುಣಿಸುತಿಹನು ಕೇಳಿರಿ ಲೋಕದೊಳಜನಗೆ

೫/೫/೫/೫
೫/೫/೫/೫
೫/೫/೫/೫/೫/೫/ಗುರು
೫/೫/೫/೫
೫/೫/೫/೫
೫/೫/೫/೫/೫/೫/ಗುರು
ಈ ರೀತಿಯ ಮಾತ್ರೆಗಳು ಬರಬೇಕಲ್ಲ..
ಇಂತಹ ಗುಂಪಿಗೆ ಕಳಿಸುವ ಮೊದಲು ಗೊತ್ತಿರುವ ಸ್ನೇಹಿತರಲ್ಲಿ ಒಮ್ಮೆ ತಿದ್ದುಪಡಿಗೆ ತೋರಿಸುವುದು ಒಳಿತು

ಭಾಮಿನೀ ಷಟ್ಪದಿ ೨೯

ಅಮ್ಮನೆನಿಸುವ ಹೊಂಗೆ ಮರವನು
ಸುಮ್ಮನಿರದೆಲೆ ಪಾಡಿ ಪೊಗಳುತ
ದಮ್ಮ ಕಾಯುವ ಕಾಯ ನಮ್ಮದುಯೆಂಬುದರುಹಿತಿರೆ|
ಒಮ್ಮತದಲೆಲ್ಲಜನ ಜತನದಿ
ಘಮ್ಮನೆಯ ಕಂಪನು ಪಸರಿಸಲು
ಹೊಮ್ಮುವುದಖಿಲ ಜೀವಜಾಲಕೆ ಭಾವವೆನ್ನುವೆನು||

ಭಾಮಿನೀ ಷಟ್ಪದಿ ೩೦

ಬಿದಿಗೆ ಚಂದಿರನಂತ ಮೊಗದೊಳು
ಬದಿಗಿರಿಸುತಲಿ ಬಿಂದಿಯನು ತಾ
ಹದಿಹರೆಯದವರನ್ನು ನಾಚಿಸುವಂಥ ಚೆಂದುಳ್ಳೀ|
ವಿಧಿಯ ಲಿಖಿತಕೆ ಸಿಲುಕಿ ನಡೆದಳು
ಕದಿರು ತಾನಾಗಿರುವನಕ ಹರು
ಷದಲಿ ದುಡಿದಿಹ ಮಾತೆ ಜಗದೊಳು ಬೆಳಗಿ ಕರಗಿದಳು||

ಭಾಮಿನೀ ಷಟ್ಪದಿ

ಹಿರಿಯ ತಾನೆನುತಲಿಹ ಕಪ್ಪೆಯು
ಮರಿಯ ಮಾತನು ಕೇಳಲರಿಯದೆ
ಹುರುಪಿನಿಂದಲಿ ಹಿರಿದುಗೊಳ್ಳುತ ಜೀವ ಕಳೆದಿಹುದೇ?|
ಗಿರಿಯ ಶಿಖರಕು ಬಲಿತ ಶೃಂಗವ
ದಿರುವುದರಿಯದೆ ತಾನೆ ಸಕಲಕು
ಹರಿಯೆನುವವಗೆ ಬರಿಯ ಮಾತಲಿ ತಿಳಿವುದುಂಟೇನು||೩೧||

ಮದ್ದು ತಾನಾಗುವುದು ಮಳೆಯಲಿ
ಹೊದ್ದು ಮಲಗಲುಬಹುದು ಚಳಿಯಲಿ
ಮುದ್ದೆ ನುಂಗುತ ವರ್ಷಕಾಲವ ಕಳೆಯ ಬಹುದೆಂದು|
ಸದ್ದು ಗದ್ದಲವಿರದೆ ಹಾವದು
ಗೆದ್ದಲಿನ‌ ಗೂಡಿನಲಿ ಹೊಕ್ಕಿದೆ
ಮುದ್ದು ಹುಳುಗಳ ಮೆದ್ದು ನಿದ್ದೆಗೆ ಜಾರಿ ಹೋಗಿಹುದು


ಪಶಿವೈ
ಪಿ ಎಸ್ ವೈಲೇಶ
೧೮/೮/೨೦೧೯

ಕೋಗಿಲೆಯು ನಲಿಯುತಲುಲಿಯುತಿದೆ
ರಾಗದಲಿ ಕನ್ನಡದ ಗೀತೆಯ
ಮಾಗಿರುವ ಮಾವಿನೆಲೆಯೊಗರಿನ ಚಿಗುರು ಸೇವಿಸುತ|

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು