ಮತದಾನದ ಮಹಿಮೆ

ಬೆಚ್ಚದೆ ಬೆದರದೆ ಮತವ ನೀಡಿರಿ ನೀವು
ಮೂಲಭೂತ ಹಕ್ಕೆಂಬುದು ಮರೆಯದಿರಿ
ಮತದಾನ ಮಾಡದೆ ಮತೈದು ವರುಷವು
ತಪ್ಪುಮಾಡಿದೆನೆಂದು ಅನುದಿನ ಕೊರಗದಿರಿ

ಜಾತಿ ಮತ ಧರ್ಮದ ಭೇದವ ಮರೆತು ಗಟ್ಟಿ
ಮನದೊಂದಿಗೆ ಮತಗಟ್ಟೆಯೆಡೆಗೆ ನಡೆಯಿರಿ
ಅಂವ ನಿಮ್ಮವ ಇಂವ ನಮ್ಮವ ಎಂಬುದನಟ್ಟಿ
ದೇಶದೇಳ್ಗೆಗೆ ಜನಪರ ನೇತಾರಗೆ ಮತ ನೀಡಿರಿ

ಸೀರೆ ಪಂಚೆ ಕಾಳು ಕೂಳು ಹಣ ಹೆಂಡ ಹಂಚುವ
ದಂಡ ಪಿಂಡ ಹಿಂಡುಗಳ ಹಿಂದಕ್ಕಟ್ಟಿ ಬಿಡುವ
ಸ್ವಾರ್ಥ ಸ್ವಜನಪಕ್ಷಪಾತ ಬಂಧು ಬಾಂಧವಗೆಂದು
ಕೂಡಿಡುವ ಧನದಾಹಿಗೆ ಅಧಿಕಾರ ನೀಡದಿರುವ

ನಮಗೆ ಸಿಗುವುದೊಂದೆ ಅವಕಾಶವೆಂಬರಿವು
ಮನವ ತುಂಬಿರಲಿ ದೊರಕಿದ ಅವಕಾಶವನು
ಅಸಡ್ಡೆಯಿಂದ ಕಳೆದುಕೊಳ್ಳುವ ಮತಿಹೀನರು
ನಾವಾಗದಿರುವ, ಮತದಾನದ ಮಹಿಮೆ ಅಪಾರ

ಚುನಾವಣೆಯೆಂದರೆ ಅದೊಂದು ತಮಾಷೆಯಲ್ಲ
ಮತ ಚಲಾವಣೆಯು ಬಹು ಮುಖ್ಯ ಕರ್ತವ್ಯ
ನಮ್ಮ ಆಜನ್ಮಸಿದ್ಧ ಹಕ್ಕು ಮೂಲಭೂತ ಸೌಕರ್ಯ
ಪಡೆಯಲು ನಾವು ಮತದಾನ ಮಾಡೋಣ
ಮರೆಯದೇ ಬನ್ನಿ ಎಲ್ಲರೂ ಜೊತೆಗೂಡೋಣ.

ವೈ ಕೊ
ವೈಲೇಶ ಪಿ ಎಸ್ ಕೊಡಗು
೭/೪/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು