ಮನೆ ಮನೆ ಕಾವ್ಯಗೋಷ್ಠಿಯ ವರದಿ ೫

ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಐದನೆಯ ಕವಿಗೋಷ್ಠಿಯು ಭಾರತೀಯ ವಾಯುಪಡೆಯ ಮಾಜಿ ಯೋಧರು (ಏರ್ ಫೋರ್ಸ್) ಹಿರಿಯ ಕವಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲೆಯ ನಿರ್ದೇಶಕರು  ಶ್ರೀಯುತ ಗಿರೀಶ್ ಕಿಗ್ಗಾಲು ಮನೆಯಲ್ಲಿ ದಿನಾಂಕ ೨೪-೦೩-೨೦೧೯ ಭಾನುವಾರ ೧೦:೩೦ ಗಂಟೆಗೆ ನಡೆಯಿತು. ಕವಿಗಳು ಗಾಯಕರು ಹಾಗೂ ಪ್ರೇಕ್ಷಕರು ಎಲ್ಲಾ ಸೇರಿ ಸುಮಾರು ೪೫ ಜನ ಭಾಗವಹಿಸಿದರು.

ಕಾರ್ಯಕ್ರಮವನ್ನು ಶ್ರೀಮತಿ ಶಶಿಕಲಾ ಗಿರೀಶ್ ರವರ ಪ್ರಾಯೋಜಕತ್ವದಲ್ಲಿ ಮೊದಲಿಗೆ ಕುಮಾರಿ ಮುಕ್ತಾ ರಂಜಿತ್ ಪ್ರಾರ್ಥಿಸಿದರು. ಶ್ರೀಮತಿ ನಾಯಕಂಡ ಬೇಬಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಬಿ ಆರ್ ರಾಮಚಂದ್ರ ರಾವ್ ಅವರು ಕವಿಗಳು ಒಂದೆಡೆ ಓದಿ ಪಡೆದ ಜ್ಞಾನವನ್ನು ಮತ್ತೊಂದು ಕಡೆಗೆ ಬರವಣಿಗೆಯ ಮೂಲಕ ಹಂಚುವ ಕೆಲಸ ಮಾಡುತ್ತಿದ್ದಾರೆ ಮತ್ತು ಅದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕಿದೆ ಎಂದರು. ಸಂಚಾಲಕ ವೈಲೇಶ ಪಿ ಎಸ್ ರವರು ತಮ್ಮ ಅಶಯ ನುಡಿಗಳಲ್ಲಿ ಕವಿಗೋಷ್ಠಿಗಳು ಹಳ್ಳಿ ಹಳ್ಳಿಗಳ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮನೆ ಮನೆ ಕಾವ್ಯಗೋಷ್ಠಿ ಬಳಗದಿಂದ ಮಾಡುವ ಕೆಲಸ ನಿರಂತರವಾಗಿರುತ್ತದೆ ಎಂದರು. ಖ್ಯಾತ ಗಾಯಕರು ಕಸಾಪ ಜಿಲ್ಲಾ ಅಧ್ಯಕ್ಷರು ಆದ ಬಿ ಎಸ್ ಲೋಕೇಶ್ ಸಾಗರ್ ಅವರು ಮಾತನಾಡಿ ಕವಿ ಸಾಹಿತಿಗಳು ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ತಮ್ಮ ಜ್ಞಾನದ ಬೆಳವಣಿಗೆ ಹೆಚ್ಚುತ್ತದೆ ಎಂದು ವಿವರಿಸಿದರು.  ಕೊಡಗು ಜಿಲ್ಲಾ ಲೇಖಕರ ಬಳಗದ ಅಧ್ಯಕ್ಷರು ಆದ ಎಂ ಪಿ ಕೇಶವ ಕಾಮತ್ ರವರು ಮಾತನಾಡಿ ಕನ್ನಡ ನಾಡಿನ ಸಾಹಿತಿಗಳು ಕವಿಗಳ ರಚನೆಗಳನ್ನು ವಿವರಿಸುತ್ತಾ ಮಂಕುತಿಮ್ಮನ ಕಗ್ಗ ನಿಜಕ್ಕೂ ಕನ್ನಡದ ಭಗವದ್ಗೀತೆ ಎಂದು ಪುನರುಚ್ಚರಿಸಿದರು. ಮನು ಶೆಣೈರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಯಲಕ್ಷ್ಮಿ ಎಮ್ ಬಿ, ನಾಯಕಂಡ ಬೇಬಿ ಚಿಣ್ಣಪ್ಪ, ವೈಲೇಶ ಪಿ ಎಸ್ ಕೊಡಗು, ಅಬ್ದುಲ್ಲಾ ಮಡಿಕೇರಿ, ನಾ ಕನ್ನಡಿಗ, ನರ್ಸರಿ ವಸಂತ, ಮೊಣ್ಣಂಡ ಶೋಭಾ ಸುಬ್ಬಯ್ಯ, ಲೀಲಾಕುಮಾರಿ ತೊಡಿಕಾನ, ಶಿವದೇವಿ ಅವನೀಶ್ಚಂದ್ರ, ಕಸ್ತೂರಿ ಗೋವಿಂದಮ್ಮಯ್ಯ, ಮಳುವಂಡ ನಳಿನಿ ಬಿಂದು, ಹರೀಶ್ ಸರಳಾಯ, ಚಕ್ಕೆರ ತ್ಯಾಗರಾಜ ಅಪ್ಪಯ್ಯ,  ಬಿ ಅರ್ ರಾಮಚಂದ್ರ ರಾವ್, ಬೈತಡ್ಕ ಜಾನಕಿ ಬೆಳ್ಯಪ್ಪ, ಪುದಿಯನೆರವನ  ರೇವತಿ ರಮೇಶ್, ಗಿರೀಶ್ ಕಿಗ್ಗಾಲು, ಮುಕ್ತಾ ರಂಜಿತ್ ರವರು ಕವನ ವಾಚನ ಮಾಡಿದರು. ಖ್ಯಾತ ಗಾಯಕ ಟಿ ಡಿ ಮೋಹನ್ ಅವರ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸತೀಶ್ ಬಿ ಆರ್ ಅವರು ಕುಂಚಗಾಯನ ನಡೆಸಿಕೊಟ್ಟರು. ಒಂಬತ್ತನೆಯ ತರಗತಿಯ ವಿದ್ಯಾರ್ಥಿ ಮಾಸ್ಟರ್ ಆಯುಷ್ ತಾನೊಬ್ಬ ಉತ್ತಮ ಗಾಯಕನಾಗುವ ಎಲ್ಲಾ ಲಕ್ಷಣಗಳನ್ನು ದೃಢಪಡಿಸಿದರು. ರಜತ್ ರಾಜ್ ಹಾಗೂ ನಾ ಕನ್ನಡಿಗ, ಮೊಣ್ಣಂಡ ಶೋಭಾ ಸುಬ್ಬಯ್ಯ, ಲೋಕೇಶ್ ಸಾಗರ್ ಬಿ ಎಸ್ ಇವರುಗಳು ಗೀತಗಾಯನ ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದರು. ಕಾರ್ಯಕ್ರಮದ ಮೊದಲಿಗೆ ಗಿರೀಶ್ ಕಿಗ್ಗಾಲುರವರು ಸ್ವಾಗತಿಸಿದರು. ಹರೀಶ್ ಕಿಗ್ಗಾಲುರವರು ನಿರೂಪಣೆ ಜೊತೆಗೆ ವಂದಾರ್ಪಣೆ ಮಾಡಿದರು. ನಾ ಕನ್ನಡಿಗ ಮತ್ತು ಕವನ್ ಕುಮಾರ್ ರವರು ನಿರ್ವಹಣೆ ಮಾಡಿದರು ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಮುಂದಿನ ಕಾರ್ಯಕ್ರಮವು ಎಪ್ರಿಲ್ ಏಳರಂದು ಸೋಮವಾರಪೇಟೆಯಲ್ಲಿ ಜರುಗುವುದು ಎಂದು ಮನೆ ಮನೆ ಕಾವ್ಯಗೋಷ್ಠಿ ಸಂಚಾಲಕ ವೈಲೇಶ ಪಿ ಎಸ್ ರವರು ತಿಳಿರುತ್ತಾರೆ.

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು