ಅಪಭ್ರಂಶರು
ಅಪಭ್ರಂಶರು
~~~~~~~
ವಾದ ವಿವಾದದ ನುಡಿಗಳಿಗೆಣೆಯಿಲ್ಲ
ನಡೆದ ತಪ್ಪುಗಳಿಗೆ ಹೊಣೆಯ ಹೊರರಲ್ಲ
ಬರಿದೇ ಬಾಯಿ ಚಪಲಕೆ ನುಡಿವರಲ್ಲ
ಜವಾಬ್ದಾರಿಯ ಒಂದಿನಿತೂ ಕಾಣೆವಲ್ಲ
ದಿಟ್ಟತನದ ಗಟ್ಟಿತನವ ಇವರೊಪ್ಪರು
ಜಾಲ ಜಾಳಾದೊಡೆ ಜನ್ಮ ಜಾಲಾಡುವರು
ಹಾಳಾದರಡ್ಡಿಲ್ಲ ನಮ್ಮೋರೆ ಇರಲೆಂಬರು
ಅವಕಾಶಗಳ ಕೈಚೆಲ್ಲಿದ ಅಪಭ್ರಂಶರು
ದೇಶದೇಳಿಗೆಗಿಂತ ಸ್ವಂತದೇಳಿಗೆ ಮಿಗಿಲು
ಸಮಯಕ್ಕೆ ತಕ್ಕಂತೆ ಬಣ್ಣವೀವ ತೊಗಲು
ಒದರುವ ಭರದಿ ತಿಳಿಯದಿರುಳು ಹಗಲು
ಕಳ್ಳನೆಂದೊಡೆ ಮುಟ್ಟಿಕೊಳ್ಳವರು ಹೆಗಲು
ಅಮಲೋ ಅಮೇಧ್ಯವೋ ಮೆಲ್ಲುತಿರಲು
ಗಡಿಯೋ ಗುಡಿಯೋ ಅರಿಯದಾಗಿರಲು
ಯೋಧರನು ಭಯೋತ್ಪಾದಕರೆನುತಿರಲು
ಮಾನವೀಯತೆಯ ಸೋಗಿವರ ಕಿಸೆಯೊಳು
ದಂಡ ಪಿಂಡ ಷಂಡರನು ಉಗಿದಟ್ಟಬೇಕಿದೆ
ಹೊರದೇಶದ ಹೊರತಾಗಿ ದೇಶದೊಳಿರುವ
ಶತ್ರುಗಳನು ಬಗ್ಗು ಬಡಿದು ಬಿಸಾಡಬೇಕಿದೆ
ಕಠಿಣ ಕಾನೂನು ಅಗತ್ಯ ಜಾರಿಯಾಬೇಕಿದೆ
*ವೈ.ಕೊ*
*ವೈಲೇಶ ಪಿ ಎಸ್ ಕೊಡಗು*
*೨೭/೨/೨೦೧೯*
Comments
Post a Comment