ಮಾನವ ನಗಣ್ಯ

ಮಾನವ ನಗಣ್ಯ
••••••••••••••••
ಯಾರಿಗೂ ಬೇಡದ ಜೀವಿಯು ನಾನಾಗ
ಕತ್ತು ಕುಯ್ದು ಕಿತ್ತು ತಿನ್ನೆ ಹತ್ತು ಬಾಯೀಗ
ತುಪ್ಪಳವನೆತ್ತಿ ಹೊದಿಕೆಯ ಮಾಡಿದಿರೀಗ
ಜುಮ್ಮೆನುವ ಚಳಿಯ ನೀಗಿಸುವೆ ನಾನೀಗ

ಪಕ್ಕನೆ ಸಿಗಿದು ಹದಗೊಳಿಸಿ ಕೈಚೀಲವಾದೆ
ಪಳ್ಳನೆ ಹೊಳೆಯುವಂತಾಗಿ ಪಾದರಕ್ಷೆಯಾದೆ
ನಗಾರಿ ಡೊಳ್ಳು ಡಕ್ಕೆಗೆ ಕಂಠವು ನಾನಾದೆ
ಮಡಿದು ವರುಷವಳಿದೂ ಹರುಷವ ತಂದೆ

ಗಾತ್ರದಲಿ ಹಿರಿದು ಕಿರಿದೆನದೆ ವನ್ಯಪ್ರಾಣಿ
ಪೋಷಿತ ಜೀವವೆನದೆ ಸಕಲರ ನಿರ್ಜೀವ
ತೊಗಲಿನಿಂದಲಿ ಅಲಂಕಾರಿಕ ವಸ್ತುವಾಗಿಸಿದ
ಮಾನವ ಜೀವಿ ಜೀವದೊಳು ಚೆಲ್ಲಾಟವಾಡಿದ

ಮಸೀದಿಯಲಿ ಮಂದಿರದಲಿ ಇಗರ್ಜಿಯಲಿ
ಮಾಲ್/ಯಾ ಅಂಗಡಿ/ಯಾ ರಸ್ತೆ ಬದಿಯಲಿ
ಎಲ್ಲೆಲ್ಲಿ ಹುಡುಕಿದರೂ ಸಿಗಲಿಲ್ಲವೆಂಬರೆಲ್ಲರು
ನರನ ತೊಗಲಿನ ಹೊದಿಕೆ/ಯಾ ಅಲಂಕಾರಿಕೆಗಳು

ಮಾನವನ ಬದುಕು ಸೀಮಿತಾವಧಿಗಷ್ಟೇ ಮಾನ್ಯ
ಸಾವಿರ ವರ್ಷ ಉಳಿವ ಪ್ರಕೃತಿಯೆದುರು ನಗಣ್ಯ
ಸ್ವದೇಹದ ತುಣುಕಗಳ ನಿರ್ಜೀವವಾಗಿರಿಸಲಾರ
ಸತ್ತರೂ ಬದುಕಿರುವ ಜೀವಿಗಳ ಸಮವಾಗಲಾರ

ವೈ.ಕೊ
ವೈಲೇಶ ಪಿ ಎಸ್ ಕೊಡಗು
೯/೨/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು