ಮರಳಿ ಮಿಸುಕದಿರಿ
ಮರಳಿ ಮಿಸುಕದಿರಿ
~~~~~~~~~~~
ಸಂಸಾರಾದಿಗಳನೆಲ್ಲಾ ಮರೆತು
ಭಾರದೊಂದಿಗೆ ಗಮ್ಯ ಸೇರೆ
ಸಾಗಿಹ ವೀರರ ಮರಾಮೋಸದಿ
ಡಿಕ್ಕಿ ಢೀ ಎನಿಸುವಂತೆ ಹತ್ಯೆಗೈದಿರೆ
ಪಡೆದು ವೀರ ಪಡೆಯ ಬಹುಮಾನ
ಅಳಿದು ಜೀವನದ ಅಹಂ ಸುಮ್ಮಾನ
ಇನ್ನೂ ಕಾದಿದೆ ಫಿರಂಗಿಗಳ ಸಮ್ಮಾನ
ನಿಮಗಂದು ಸಾಲಲಿಲ್ಲವೆ ಅವಮಾನ
ಕಾಲಿಗೆ ತೊಡರುವ ಮುಳ್ಳಾದ ಬಾಳು
ಸತಿಸುತರ ಬದುಕು ಜೀವಂತ ಜೀತದಾಳು
ಸಗ್ಗವೆಂದರಿತು ಸಾಗದಿರಿ ನರಕದ್ಹಾದಿಯಲಿ
ಪರಮ ಪಾಷಾಣ ನೀವುಂಡು ಒಲವಿನಲಿ
ಕೆಡವಿದಿರಿ ನೀವಂದು ನಲವತ್ತೆರಡು ಜೀವ
ಒಂದಕೈದರಂತೆ ಮುನ್ನೂರು ನಮ್ಮ ಬಾವ
ಮರಳಿ ಮಿಸುಕದಿರಿ, ಹೆಮ್ಮೆಯೆನೆ ತರವೆ
ಯೋಧರನು ಕೆಣಕಿ ಉಳಿಯಲಸದಳವೆ
ನಿಲ್ಲಿಸಿ ಧರ್ಮದ್ಹೆಸರ ಹೇಯ ಕೃತ್ಯವನು
ಅಲ್ಲಿ ಇಲ್ಲಿ ಎಲ್ಲೆಲ್ಲೂ ಮನುಜರೆಂದರೆ
ಬಂಧುಗಳ ಬಂಧಗಳ ಬಂಧುರವಲ್ಲವೇ
ಬದುಕುವಂತಿರಲಿ ನಮ್ಮೀ ವಸುಂದರೆ
*ವೈ.ಕೊ*
*ವೈಲೇಶ ಪಿ ಎಸ್ ಕೊಡಗು*
*೨೬/೨/೨೦೧೮*
Comments
Post a Comment