ಬಂದರು ಸಿದ್ದಗಂಗಾ ಸ್ವಾಮಿಗಳು

ಬಂದರು ಸಿದ್ದಗಂಗಾ ಸ್ವಾಮಿಗಳು
~~~~~~~~~~~~~~~~~~

ಬಂದರು ಸಿದ್ದಗಂಗಾ ಸ್ವಾಮಿಗಳು
ಶಿವಕುಮಾರ ಎಂಬ ನಾಮದೊಳು
ಎಣಿಸದೆ ಧರ್ಮವ ಶಾಲೆಯೊಳು
ತುಂಬುತ ವಿದ್ಯೆಯಾ ಸರ್ವರೊಳು||ಪ

ಅಸನವು ನಮದೇ ಎಂದಿಹರೂ
ವಸತಿಯ ನೀಡುತ ಕರೆದಿಹರು
ಹೊಲದಲಿ ಬೆಳೆಯಾ ತಂದಿಹರು
ಜಗದ ಶಿರೋಮಣಿ ಆಗಿಹರು||೧||

ಬಡವರ ಶಿಕ್ಷಣ ಉದ್ಘೋಷಾ
ಕಾಯಕ ಕಲಿಸುವ ಉದ್ದೇಶ
ಜೀವನ ಬಹುಮುಖಿ ಸಂದೇಶ
ಹರಸಿದ ಇವರನು ಪರಮೇಶ ||೨||

ಸನ್ಯಾಸ ಎಂಬುದೇ ಹಿರಿದಯ್ಯಾ
ಸಾಸಿರ ಮಕ್ಕಳು ನಿಮಗಯ್ಯಾ
ಪಾವನ ನಿಮ್ಮಯ ನೆನಪಯ್ಯಾ
ಕರವನು ಮುಗಿವೇ ಹರಸಯ್ಯಾ ||೩||

ವೈ.ಕೊ
ವೈಲೇಶ ಪಿ ಎಸ್ ಕೊಡಗು
೧೯/೨/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು