ಇಲ್ಲಾರು ಮಿಗಿಲಲ್ಲ

ಇಲ್ಲಾರು ಮಿಗಿಲಲ್ಲ
~`~`~`~`~`~`~
ಮನುಜ ಮನುಜರ ನಡುವೆ 
ಮನುಜರಲ್ಲದವರ‌ ಒಡವೆ
ಸ್ವಾರ್ಥದ ಬೆಳೆ ಬೆಳೆಯಲೆಂದು
ನಿಸ್ವಾರ್ಥದ ಮನಕೆ ನೋವು ತಂದು
ಕಟ್ಟಿರುವ ಗೋಡೆಗಳ ಕಿತ್ತೊಗೆಯಬೇಕಿದೆ.

ಅವರನುದ್ದರಿಸಿದು ನಾನೇ ಎಂದೆನುತಾ
ನಿಜದ ನುಡಿಗಳನಾಡಿದೊಡೆ ಅವರನೇ
ಅರಿಯೆಂದು ಅರಿಯದ ಮನಗಳಿಗಂದು
ಮನಸು ಮನಸುಗಳ ಮಧ್ಯೆ ಮುನಿಸುಗಳ
ಕಂದಕವ ತಂದವರನು ತೊಡೆದು ಹಾಕಬೇಕಿದೆ. 

ಹಿಂದಿನ ಕರ್ಮವಿದು ಮರ್ಮ ಬಿಡುವುದೇ
ಮುಂದಾದರೂ ನಿಜವ ನಾವರಿಯಬೇಕಿದೆ
ಮನಸ್ಸುಗಳೊಳಗೆ ವಿಷಬೀಜವ ಬಿತ್ತುವುದೇ
ಕಾಯಕವನಾಗಿಸಿಹ ಗೋಮುಖವ್ಯಾಘ್ರಗಳ
ತಳ ಉರಿವಂತೆ ಕಿಚ್ಹಚ್ಚಿ ಹಸಿಹಸಿ ಸುಡಲೇಬೇಕಿದೆ.

ಇಲ್ಲಾರು ಮಿಗಿಲಿಲ್ಲ ಎನಗಿಂತ ಕಿರಿಯರಿಲ್ಲ
ಎಂದೆನುತಾ ಆಗಸಕೇರಿದ ಪೂರ್ವಸೂರಿಗಳ
ನುಡಿಮುತ್ತಗಳನರಿಯದೇ ನಟ್ಟಿರುಳು ಬೀದಿಯ
ಶುನಕದಂತೆ ಊಳಿಡುವ ನರಿಗಳನು ಅಟ್ಟಾಡಿಸಿ
ಹುಚ್ಚು ಬಿಡಿಸಿ ಮರಳಿ ಬರದಂತೆ ಕಾಡಿಗಟ್ಟಬೇಕಿದೆ

ವೈ.ಕೊ
ವೈಲೇಶ ಪಿ ಎಸ್ ಕೊಡಗು
೧೦/೧೨/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು