ಛಲವಿರಲಿ

ಛಲವಿರಲಿ
~~~~~~
ಮುಳ್ಳನು ಮುಳ್ಳಿನಿಂದ ತೆಗೆಯಬೇಕಣ್ಣ
ಕೇಳು ಓ ರೈತಣ್ಣ ಹೊಗಳು ಭಟ್ಟರೆಲ್ಲಾ ಸೇರಿ
ಬೆನ್ನೆಲುಬು ಪಕ್ಕೆಲುಬು ಇವ ನಮ್ಮ ರೈತನೆಂದು
ಪೊಗಳಿ ಸಾಲ ನೀಡಿ ಹೊನ್ನಶೂಲಕೇರಿಸುವರಣ್ಣಾ

ಅಜ್ಜ ಬಿಜ್ಜರ ಹೊಲ ಗದ್ದೆ ನಿನ್ನದು
ಊರಿಗೆಲ್ಲಾ ಅನ್ನವನಿತ್ತವರು ನಿನ್ನವರು
ಆಡಂಬರ ಅರಿಯದವರನು ಮರೆತೆಯೇನು
ಹಾಸಿಗೆಯಿಂದ ಚಾಚಿದ ಕಾಲಿಗೇನಾಸರೆ ಹೇಳು

ಲೋಕಕೆ ತುತ್ತು ಕೊಟ್ಟವನಿಂದು
ತೊತ್ತುತಿರುವುದ ಕಂಡು ಕಿತ್ತು ಬರುತಿದೆ
ಕರುಳು. ಮತ್ತು ಮಸಣಕ್ಕೊಯ್ಯುವುದು. ನಿರೀಕ್ಷೆ
ನಿನಗೇಕಣ್ಣ ಕಿತ್ತೊಗೆದುಬಿಡು ಆಸೆಗಳ ಸಾಲನು

ಸಾವಿರ ಸಂಕಷ್ಟಗಳಿಗೆ ಸಮಾಧಾನವೇ
ಮದ್ದೆಂದು ನಂಬಿದವರು ಹಿರಿಯರು ನಮ್ಮವರು
ಉದ್ಧರಿ ಪಡೆದು ಉದ್ಧಾರವಾದವರುಂಟೆ ಹೇಳು
ನಂಬದಿರು ಸಮಯ ಸಾಧಕ ವಂಚಕ ದ್ರೋಹಿಗಳನು

ಮಣ್ಣನು ನಂಬಿ ಹೊನ್ನು ಬೆಳೆದವರುಂಟು
ಗುಡಿಯಂತಹ ಮನೆಯಿರಲಿ ಮಗುವಂತಹ
ಮನಸಿರಲಿ. ಹೃದಯದ ತುಂಬಾ ಕರುಣೆಯಿರಲಿ
ಏನೇ ಬಂದರೂ ಗೆಲುವೆನೆಂಬ ಛಲವಿರಲಿ. 
ಆತ್ಮಹತ್ಯೆಯ ಪಾದವ ಮನೆ ಮನದೊಳಬಿಡದಿರು

ವೈ.ಕೊ.
ವೈಲೇಶ ಪಿ ಎಸ್ ಕೊಡಗು.
೨೩/೧೨/೨೦೧೮.

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು