ಪೂರ್ವ ಸೂರಿ
ಪೂರ್ವ ಸೂರಿ
~`~`~`~`~`~`
ಜನನವಾಯಿತು ಒಂಟಿಮನೆ
ಹಳ್ಳಿಯಲಿ ಬಿಂದುವಿನಂತುದಿಸಿ
ಬೆಳದಿಂಗಳಂದದಿ ಪಸರಿಸಿದಿರಿ ನೀವು
ವಿಶ್ವಮಾನವ ಎಂದುಲಿಯಿತು ಜಗವು
ದಟ್ಟ ಕಾನನದೊಳು ನೆಟ್ಟ ದಿಟ್ಟಿಗೆ
ನಿಲುಕಿದುದೆಲ್ಲವೂ ಬದುಕಿನ ಸಾರವೇ
ವಿದ್ವತ್ತಿಗೆ ವನದ ಕೊಡುಗೆಯು ಅಪಾರವೇ
ಬರಹಲೋಕದೊಳು ಜಗಬೆಳಗಿದ ಭಾನುವೇ
ದಾರಿದೀಪವಾದಿರಿ ಕವಿಮನಗಳಿಗೆ
ಪೂರ್ವ ಸೂರಿಯಾಗಿ ನವಪೀಳಿಗೆಗೆ
ಹರಸುತಲಿರಿ ನಮ್ಮನ್ನೆಂದಿಗೂ ಹೀಗೇ
ನಾವೂ ನಿಮ್ಮವರೆನಲು ಹೆಮ್ಮೆಯೆಮಗೆ
ಕನ್ನಡಾಂಭೆಯ ಪ್ರೀತಿಯೊಡಲಲಿ
ಪ್ರಕೃತಿಯ ಮಾತೆಯ ರಮ್ಯ ಮಡಿಲಲಿ
ಕುಹೂ ಕೋಗಿಲೆಯ ನಲ್ಮೆಯುಲಿಯಲಿ
ತನ್ಮಯರಾಗಿ ಪವಡಿಸಿದಿರಿ ಚಿರಶಾಂತಿಯಲಿ
ಧನ್ಯವಾಯಿತು ಕರುನಾಡು ತಮ್ಮಿಂದ
ನೀವೇ ಭರತ ಭೂಮಿಯ ಮೆಚ್ಚಿನ ಕಂದ
ಲೋಕವೇ ಮೆಚ್ಚಿದೆ ಆಲಿಸೆ ಮಹದಾನಂದ
ನಿಮ್ಮ ನಾಮವದು ಕವಿಹೃದಯಗಳಿಗಾನಂದ
ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨೯/೧೨/೨೦೧೮
Comments
Post a Comment