ಮನಸೋತೆ
ಮನಸೋತೆ
~~~~~~~
ಮುಂಜಾನೆಯ ನಡಿಗೆ
ಜೊತೆಯಲ್ಲಿ ಬೇಡ ಬಡಿಗೆ
ಶ್ವಾನದೊಂದಿಗೆ ಇಳಿಯುವ ಬೀದಿಗೆ
ಅದರ ನಿಯತ್ತು ಬರಲೆಮಗೆ
ವೈದ್ಯರಿತ್ತ ಪರಿಧಿಯತ್ತ
ಒಲ್ಲದೆ ಸೋಮಾರಿ ನಮ್ಮ ಚಿತ್ತ
ನಡೆಯದಿದ್ದೊಡೆ ಎಳೆದೊಯ್ಯವುದು
ಸರಪಳಿ ಸಮೇತ ಶುನಕವು ಗುರಿಯತ್ತ
ಗಂಡಾಗಲಿ ಹೆಣ್ಣಾಗಲಿ ಭೇದವಿಲ್ಲ
ಡಾಬರ್'ಮನ್ನೋ ಡಾಬರ್'ಲೇಡಿಯೋ
ಚೈನು ಎಳೆದು ನಿಲ್ಲಿಸುವ ತಾಕತ್ತೆಮಗಿಲ್ಲ
ಆಮಾತ್ಯ ನಿಂತನೆಂದು ನಿಂತಿರುವುದಲ್ಲ
ನಮ್ಮ ಅಗತ್ಯಕೆ ನಾಯಿಯೋ
ಅದರಗತ್ಯಕೆ ನಮ್ಮ ಬೆಳಗ ಹೆಜ್ಜೆಯೋ
ಅಯೋಮಯವೀ ಜಗವೂ ಅರಿಯದಾದೆ
ನಮ್ಮ ಮನೆ ಟೈಗರ್ ಪ್ರೀತಿಗೆ ಮನಸೋತೆ
ವೈ.ಕೊ.
ವೈಲೇಶ ಪಿ.ಎಸ್. ಕೊಡಗು
೨೫/೧೨/೨೦೧೮
Comments
Post a Comment