ಅಕ್ಕರದಕ್ಕರ

ಅಕ್ಕರದಕ್ಕರ
~~~~~~~
ಏನೆಂದು ಉಲಿಯಲಿ
ಊರೇ ಉರಿಯುತಿರುವಾಗ
ಹೇಗೆಂದು ತಣಿಸಲಿ ತಂಗಾಳಿಯೇ
ತಮದೊಳಡಗಿ ತವವಾಗಿರುವಾಗ

ಏರಲಿರುವವಗೆ ಏಣಿಯೇ?
ಸಾಗುವ ಹಾದಿಗೆ ಜ್ಯೋತಿಯೇ?
ಉಳಿಸಿ ಬೆಳೆಸುವ ನೆಪವನುಚ್ಚರಿಸಿ
ದೋಚಿ ಬಾಚುವನೆಂದೂ ಸ್ವಾರ್ಥಿಯೆ!

ನಡೆವವರ ತಡವುವುದಾಹಾರ
ಅದಕಾಗಿ ಅನುರಣವು ಅಪಾರ
ನಾವಿಕ ನೀನಾಗದರಿಯದು ಸಾಗರ
ತೆರೆಯೋಪಾದಿಯಲಿ ಅಡಗಿದೆ ಸಾಕಾರ 

ಎಳೆಯರ ಮನಸಿಗೆ ಹರುಷ ತುಂಬಿ
ಅಕ್ಕರದಕ್ಕರೆಯ ಅನುದಿನವೂ ನಂಬಿ
ಜೀವನದ ಹಿರಿಮೆಗೆ ಸಾಕ್ಷಾತ್ಕಾರ ಎಂಬಿ
ಬರವಣಿಗೆಯ ರೈಲಿಗೆ ನಾವಾಗುವ ಕಂಬಿ

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨೩/೧೨/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು