ಸನ್ಮಂಗಳಂ
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅರಮೇರಿ ಮಠದಲ್ಲಿ ಜರುಗಿದ ಪ್ರವಾದಿ ಮಹಮ್ಮದ್ (ಸ) ರ ಸೀರತ್ ಅಭಿಯಾನದ ಸಮಯದಲ್ಲಿ ಸ್ಥಳದಲ್ಲಿಯೇ ರಚಿಸಿ ವಾಚಿಸಿದ ಕವನ ಪ್ರಕಟಣೆಗಾಗಿ
ಸನ್ಮಂಗಳಂ
~~~~~~
ಮನುಕುಲದ ಶ್ರೇಷ್ಠ ದಿವ್ಯ ತತ್ವ ಚಿಂತಕ
ಬದುಕಿನ ಹಾದಿಗೆ ಮಾರ್ಗದರ್ಶಕ
ಇಸ್ಲಾಂ ದರ್ಮದ ಸೌಹಾರ್ದತೆಯ
ಹೊಂಬೆಳಕ ಅಶಾಕಿರಣದ ಹರಿಕಾರ
ಲೌಕಿಕ ಸಂಪತ್ತಿಗೂ ಮಿಗಿಲು ಬಡತನ
ಬಡತನದಿ ಇರದೆಂದಿಗೂ ಜಡತನವೆಂದು
ಬಡತವನ್ನೇ ಅಪ್ಪಿ ಒಪ್ಪಿ ಧರ್ಮಾಸಕ್ತರಾಗಿ
ಬದುಕು ಕಂಡರು ಪ್ರವಾದಿ ಮಹಮ್ಮದರು
ತಮ್ಮವರ ಏಳ್ಗೆಗಾಗಿ ಹಗಲಿರುಳು ದುಡಿದ
ಲೋಕಾನುಗ್ರಹಿ ಕೋಮಲ ಸಹೃದಯಿ
ಬದುಕಿಗೆ ದಾರಿದೀಪದಂತಹ ಪ್ರವಾದಿ
ಮಹಮ್ಮದರ ಸೀರತ್ ಅಭಿಯಾನಕೆ ಮಂಗಳಂ
ಸರ್ವಧರ್ಮ ಸಮನ್ವಯತೆಗೆ ಹೆಸರಾದ
ಪುಟ್ಟ ಜಿಲ್ಲೆ ಕೊಡಗಿನ ಬಸವ ಬೀಡು
ಎಂದೇ ಅರುಹುವ ಅರಮೇರಿ ಕಳಂಚೇರಿ ಮಠದ
ಶ್ರೀ ಶ್ರೀ ಶಾಂತಮಲ್ಲ ಸ್ವಾಮಿಗಳ ಮಹಾನ್ ದಿವ್ಯ
ಸನ್ನಿದಿಯ ಸಮಾರೋಪಕೆ ಸನ್ಮಂಗಳಂ
ವೈಲೇಶ ಪಿ ಯೆಸ್ ಕೊಡಗು
೨/೧೧/೨೦೧೮
Comments
Post a Comment