ಕಿಚ್ಚು
ಏಕೀಮೌನ
°°°°°°°°°°°
ಹಾಲಹಲದ ಮನ ಕಬಳಿಸಿ
ಹಲಬಗೆಯ ಬಲದ ಕಾವಿಳಿಸಿ
ದುಷ್ಟಕೂಟದ ಶಕ್ತಿಗೆ ಗೆಲುವಾಗಿ
ಶಿಷ್ಟರ ಮಾರಣ ಹೋಮವಾಗಿದೆ
ಶುದ್ಧ ಭಕ್ತರು ಆಲೋಚಿಸಬೇಕಿದೆ
ಅರಿಯದವರೆದುರು ಅರಿವೆ ತೊಟ್ಟು
ಸಮಾಜದ ಸ್ವಸ್ಥತೆಗೆ ಮುನ್ನುಡಿ ಇಟ್ಟು
ಅರಿಯದ ಶಕ್ತಿಯ ಮನದೊಳಿಟ್ಟು
ಸಾಕ್ಷಿಯಾದರು ನಮ್ಮವರದೇ ಸಿಟ್ಟು
ಸೆಡವಿಗೆ ತನುವಿನ ಉಸಿರನೇ ಬಿಟ್ಟು
ಸೇವೆಯ ಪೆಸರಲಿ ಅಧಿಕಾರ ದಾಹ
ಧರ್ಮದರ್ಶಿಯ ನಾಟಕವು ಮಹಾ
ಸಕಲವೂ ಅಳಿದರೂ ಧನದಾ ಮೋಹ
ಆಳಿದೇ ಎಲ್ಲವ ಪರಸತಿ ವ್ಯಾಮೋಹ
ಇವರ ಹೆಸರದು ಸ್ವಾಮಿಯಂತೆ ಆಹಾ
ಎಲ್ಲಿ ಹೇಗೆ ಯಾರನು ನಂಬುವುದು
ಅದಮ್ಯ ಭಕ್ತಿಯ ಪ್ರಸಾದ ಪಾಷಾಣವಾಯ್ತೇ
ಸೃಷ್ಟಿಸಿದ ಭಟ್ಟರ ಮಗಳು ಚಟ್ಟವನೇರಿ
ಹಿರಿಯ ಕಿರಿಯರೆನದೇ ಸೇರಿರೆ ಮಸಣ
ಕರುಣೆ ಬಾರದೆ ಕಿಚ್ಚುಗುತ್ತಮ್ಮ ಏಕೀಮೌನ
ವೈ.ಕೊ
ವೈಲೇಶ ಪಿ ಎಸ್ ಕೊಡಗು
೧೫/೦೧/೨೦೧೯
Comments
Post a Comment