ಸತಿ ಸೌಭಾಗ್ಯ

ನಿನ್ನೊಡನೆ
~~~~~~
ಎದೆಗೂಡಲಿ ಮೊಟ್ಟೆಯಿಟ್ಟೆ
ಮತ್ತದಕೆ ಕಾವು ನೀನೇ ಕೊಟ್ಟೆ
ಬವಣೆ ತುಂಬಿ ಭಾವದೊಡನೆ
ಸಾಗರ ದಾಟುವೆ ನಿನ್ನೊಡನೆ

ನನ್ನದೆಯ ಮಂದಾರ ಹೂವೆ
ನೀನಿರಲು ಬಾಳೆಲ್ಲಾ ನಗುವೆ 
ನಿಜಕೂ ನೀನೊಂದು ಮಗುವೆ
ಜತೆಗಿರಲು ಸಕಲವೂ ಶುಭವೆ

ಮನದ ಹಣತೆಗೆ ತೈಲವನೆರೆದೆ
ಜ್ಯೋತಿ ಆರದಂತೆ ಒಡಲ ತೇದೆ
ಜೀವನ ಹಿರಿಮೆಗೆ ನಾನಾದೆ ತಂದೆ
ಸತಿಯಾಗಿ ಸೌಭಾಗ್ಯವ ನೀ ತಂದೆ

ಬದುಕ ಬಂಡಿಗೆ ಗಾಲಿ ನಾವಾಗಿ
ಮೇರೆ ಮೀರದೆಲೆ ದಿವೀನಾಗಿ
ಸಮಾಜ ಸಮಯಕೆ ತಲೆಬಾಗಿ
ಮುಂಪೀಳಿಗೆಗೆ ಹೊನ್ನ ಬೆಳಕಾಗಿ

ನಗುತಿರುವ ರವಿ ಶಶಿಯಂತೆ
ಹಗಲಿರುಳು ಒಲವ ಸೂಸಿದಂತೆ
ಬಿಡು ಬಿಡು ಮತ್ತೇತರದು ಚಿಂತೆ
ನಮ್ಮೊಲವ ಶಿವನೇ ಮೆಚ್ಚಿಹನಂತೆ

ವೈ.ಕೊ
ವೈಲೇಶ ಪಿ ಎಸ್ ಕೊಡಗು
೧೧/೧೨/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು