ಈಸಬೇಕು

ಈಸಬೇಕು
~~~~~~
ಸಕಲ ಬಂಧಗಳ ಮೇಲೆಳೆದುಕೊಂಡು
ಅಖಿಲ ಬಂಧುಗಳ ಕಳೆದುಕೊಂಡು
ಕಾಣದ ಬೆನ್ನನು ಸ್ವತಃ ಚಪ್ಪರಿಸಿಕೊಂಡು
ಬಾಳಬಹುದೇ ಸರ್ವವನು ಕೊಂಡು

ಸಮಯವೇ ಸಾಲದೆಂಬುದೇ ಬದುಕು
ಸಮಯವನು ಸಾಲ ತರಲೊಮ್ಮೆ ತಡಕು
ಇಂದು ನಿನ್ನೆಯ ನೆನೆದು ಒಳಿತುಗಳ ಕೆದಕು
ಹಾಗದರೂ ಅಳಿಯಲಿ ನಾವರಿಯದ ಕೆಡುಕು

ಪಾವನ ಯಾನದಿ ಆವಾಂತರಗಳ ಆಗರ
ನಗುವೋ ಅಳುವೋ ಈಸಬೇಕು ಸಾಗರ
ಕಾಣುವ ಕಣ್ಣಿಗೆ ಮನೋಹರ ನಯಾಗರ
ನಮ್ಮೊಳು ಉಳಿದ ಉಯ್ಯಾಲೆಯು ಸಾಸಿರ

ಬಾಲ್ಯದಿ ಏನಿದೆ ಎಂಬುದಿಲ್ಲಿ ಕುತೂಹಲ
ಜೀಕುಗಳೊಡನೆ ಜೀವನ ಹನುಮನ ಬಾಲ
ಪ್ರೌಢತೆಯ ಜೊತೆ ಕಳಚಿತು ನಮ್ಮಯ ಬಲ 
ಇಷ್ಟಾರ್ಥಗಳ ಕಾಯುವನೆ ನಿರ್ದಯಿ ಕಾಲ

ವೈಲೇಶ ಪಿ ಯೆಸ್ ಕೊಡಗು
೬/೧೨/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು