ಅಧ್ಯಕ್ಷರಿಗೆ ಪತ್ರ
ರಿಗೆ
ಅಧ್ಯಕ್ಷರಿಗೆ ಕನ್ನಡ ಸಾಹಿತ್ಯ ಪರಿಷತ್ತು
ಪಂಪಮಹಾಕವಿ ರಸ್ತೆ
ಚಾಮರಾಜಪೇಟೆ
ಬೆಂಗಳೂರು ೧೮
ಯಿಂದ
ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ
ಮಡಿಕೇರಿ ಘಟಕ
ಪುತ್ತೂರು ವಿಭಾಗ
ವಿಷಯ:- ಧಾರವಾಡದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಕೋರಿಕೆ
ಸ್ವಾಮಿ:- ಈಗಾಗಲೇ ನನ್ನ ಸ್ವರಚಿತ "ಅಮ್ಮ ನಿಮಗಾಗಿ" ಎಂಬ ಕವನ ಸಂಕಲನ ಲೋಕಾರ್ಪಣೆ ಮಾಡಿರುತ್ತೇನೆ. ಹಾಗೂ ಹಲವಾರು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕವನ ವಾಚಿಸಿದ ಅನುಭವ ಇದೆ. ಆದುದರಿಂದ ಇದೇ ಜನವರಿ ೪,೫,೬, ೨೦೧೯ ರಂದು ಧಾರವಾಡದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಲು ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ಕಳಕಳಿಯ ಕೋರಿಕೆ
ತಮ್ಮ ವಿಶ್ವಾಸಿ
ವೈಲೇಶ ಪಿ ಯೆಸ್ ಕೊಡಗು
Comments
Post a Comment