ಕುಲಕೆ ತಿಲಕ

ಕೊಡಗಿನ ಅಜಮಾಸು ಅರವತ್ತು ವರ್ಷಗಳ ಇತಿಹಾಸವುಳ್ಳ ಶಕ್ತಿ ಪತ್ರಿಕೆ"ಯಲ್ಲಿ ನನ್ನದೊಂದು ಚಿಕ್ಕ ಸಂದರ್ಶನ

ಇದರ ಪ್ರಮುಖ ರೂವಾರಿ ಸೌಜನ್ಯ ಮೂರ್ತಿ, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರು,ಅದ್ಭುತ ಭಾಷಣಕಾರರು, ಶಕ್ತಿ ಪತ್ರಿಕೆಯ ಸಂಪಾದಕರು ಆದ ಶ್ರೀಯುತ ಬಿ.ಜೆ.ಅನಂತ ಶಯನರವರು.

ಈಗ್ಗೆ ಕೆಲದಿನಗಳ ಹಿಂದೆ ನನ್ನದೊಂದು ಕವನ ಶೀರ್ಷಿಕೆ "ಕುಲಕೆ ತಿಲಕ" ಇದನ್ನು ಬರೆದ ಮಾರನೆಯ ದಿನವೆ ಒಂದು ಭಾಷಣದಲ್ಲಿ ಅಳವಡಿಸಿಕೊಳ್ಳಲು ಅನುಮತಿ ಕೇಳಿದರು. ಹಾಗೂ ಬಳಸಿಕೊಂಡಿರುವರು ಅನಿಸುತ್ತದೆ. 

ಈ ಕವನದ ಕವಿಭಾವವನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ

ಕುಲಕೆ ತಿಲಕ
========

ಕುಲಕೆ ತಿಲಕವು ಏಕೆ
ಕುಲಕೆ ನಾಮವು ಬೇಕೆ 
ಮಾಡುವುದೆಲ್ಲಾ ಕೆಡುಕೆ 
ಕೇಳಲೇ ಬೇಕು  ‌ಮನಕೆ

ಕುಲಕೆ ತಿಲಕವು ಏಕೆ  ತಿಲಕವೆಂದರೆ
೧) ಮುತೈದೆ ಇಡುವ ತಿಲಕ
೨) ವೈಷ್ಣವರ ತಿಲಕ
೩) ಇತರರು ಇಡುವ ತಿಲಕ
೪)ಯೋಧನಿಗೆ ಇಡುವ ತಿಲಕ
೫) ಈಗಿನವರು ಕುಲವನ್ನು ಯೋಧನಂತೆ ತಿಲಕವಿಟ್ಟು ಉಪಯೋಗಿಸುತಿದ್ದಾರೆ. ತಮ್ಮ ಎಲ್ಲಾ ಕಾರ್ಯ ಸ್ವಾರ್ಥ ಸಾಧನೆಗೆ ಕುಲವನ್ನು ಬಳಸುತ್ತಾರೆ.
ತಮಗೆ ತಿಳಿದ ಹಾಗೆ ಇನ್ನೆಷ್ಟು ತಿಲಕಗಳಿವೆ.

ಕುಲಕೆ ನಾಮವು ಬೇಕೆ
೧)ಕುಲಕೆ ಹೆಸರು ಬೇಕೆ
೨)ಕುಲಕೆ ಅಡ್ಡನಾಮ ಉದ್ದ ನಾಮ ಬೇಕೆ
೩) ಕುಲಕೆ ನಾಮಕರಣ ಬೇಕೆ
೪) ಕುಲಕೆ ಉಂಡೆ ನಾಮ ಅಂದರೆ ಮೋಸ ಬೇಕೆ

ಕೇವಲ ಎರಡು ಪದಗಳ ಎರಡು ಸಾಲುಗಳು. ಬಹಳಷ್ಟು ಅರ್ಥವನ್ನು ನೀಡುತ್ತದೆ ಅಲ್ಲವೇ.

ಹರಿನಾಮ ಒಂದೆ ಸಾಕೆ
ಹರಿಜನರು ಬೇಡ ಏಕೆ
ಬುದ್ಧ ಬಸವರು ಸಾಕೆ
ಶಿವನಾಮ ಬೇಡವೇಕೆ

ಬರಿಯ ಹಣ ಒಂದೇ ಸಾಕೆ
ಜಗದ ಜನರು ಬೇಡವೇಕೆ
ನೀನೊಬ್ಬನೆ ಬದುಕ ಬೇಕೆ
ಉಳಿದವರು ಸಾಯಲೇಕೆ

ಎಲ್ಲರೂ ನಮ್ಮವರು
ಎಂದರು ಬಸವಣ್ಣರು
ಎಲ್ಲರಲೂ ಸಮಾನತೆ
ಭಾರತದ ಸಮಾಜಕೆ 

ಸ್ವಯಂ ಶಿಲ್ಪಿ ಭೀಮರು
ಸಂವಿಧಾನ ಬರೆದವರು
ನಿತ್ಯವೂ ಪಾಲಿಸುವರು
ಸಂವಿಧಾನ ತಿಳಿದವರು

ಎಂದು ತಿಳಿವುದೋ ಜನಕೆ
ಶಾಂತಿ ಬೇಕು ಈ ಜಗಕೆ
ನಮಗಿರಲಿ ಹೊಂದಾಣಿಕೆ
ಎಲ್ಲರಲೂ ಬೆರೆಯುವಿಕೆ

ನೆನಪಾಗಿ ಉಳಿಯಬೇಕೆ
ನಮ್ಮ ಬಾಳಿನ ಬೆಳಕೆ
ದ್ವೇಷವಾ ಮರೆಯುವಿಕೆ
ಸ್ನೇಹಿತರ ಗಳಿಸಲೇಬೇಕೆ 

ಒಬ್ಬ ಬರಹಗಾರರಿಗೆಗೆ ತನ್ನ ಬರಹಕ್ಕೆ ಮನ್ನಣೆ ಸಿಕ್ಕರೆ ದೊರೆಯುವ ಸಂತಸ ವರ್ಣಿಸಲಸದಳ ಅಲ್ಲವೇ

ಧನ್ಯವಾದಗಳು Anantha Shayana ಸರ್ m e Mohammad ಸರ್ ಹಾಗೂ ಶಕ್ತಿ ಬಳಗದ ಎಲ್ಲರಿಗೂ ಧನ್ಯವಾದಗಳು

ವೈಲೇಶ ಪಿ ಯೆಸ್ ಕೊಡಗು
ಚಾಲಕ_ಕರಾರಸಾಸಂಸ್ಥೆ_ಮಡಿಕೇರಿ
೮/೬/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು