ಬಚ್ಚಿಟ್ಟ ಬಯಕೆ
ಬಚ್ಚಿಟ್ಟ ಬಯಕೆ
~~~~~~~~~
ಹೇಳಿಬಿಡು ಮನದ ಮಾತುಗಳ
ಅಳಿದ ಮಧುರ ಸವಿನೆನಪುಗಳ
ಭಯ ಬೇಕಿಲ್ಲ. ಹೃದಯ ಮಲ್ಲಿಗೆ
ಬಚ್ಚಿಟ್ಟು ಹೊತ್ತೊಯ್ಯುವೆ ಎಲ್ಲಿಗೆ
ತೊಟ್ಟೆ ಬಟ್ಟೆ ಮನ ಹಾರುವ ಚಿಟ್ಟೆ !
ಮುಚ್ಚಿದ ಬಟ್ಟೆ ಬಯಕೆ ತಡೆದೀತೇ?
ಬಯಕೆ ಗರಿಗೆದರಿ ಮೂರಾಬಟ್ಟೆ
ಸಿಕ್ಕ ದಿಕ್ಕಿಗೆ ಹಾರುವುದ ತಡೆದಿಟ್ಟೆ !
ಬಯಕೆಗೆ ಜೀವ ಬರುವುದೇನು?
ಅರಿಯದೆ ನಾವು ಸೋತೆವೇನು?
ಮುಚ್ಚಟೆ ಬಚ್ಚಿಟ್ಟ ಬಯಕೆಯನು
ಅದುಮಿ ಭಯ ಕಾಣದಾಗಿಸಿತೇನು?
ಬಂದಾರೆ ಬರಲಿ ಸಾವಿರ ನೋವು
ಬೇವು ಬಿತ್ತಿ ತರಲಾರದು ಮಾವು
ಬತ್ತಿ ಹೋಗಲಿ ದುಗುಡದ ಕಾವು
ಬರುವ ಮುನ್ನ ನಮ್ಮಿಬ್ಬರ ಸಾವು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೨/೧೧/೨೦೧೭
ಚಿತ್ರ ಕೃಪೆ ಅಂತರ್ಜಾಲ
Comments
Post a Comment