ಹುರಿಗೊಳಿಸಿರೋ

ಹುರಿಗೊಲಿಸಿರೋ
•~•~•~•~•~•~•
ಡಿ.ವಿ. ಗುಂಡಪ್ಪರ ಹರಿಗೋಲ 
ಹುರಿಗೊಳಿಸೋ ಮನವ ಮಾಡಿರೋ
ದೇಶಬಲ ಹೆಚ್ಚಿಸಲೊಸುಗ ದ್ರೋಹಿಗಳ
ದಿಟ್ಟತನದಿ ಹಣಿಯಲೆಂದೇ ಜತೆಗೂಡಿರೋ 

ಸುರೆ ಇಳಿಸಿ ತೆರೆಗಳತ್ತ ತೇರನೆಳೆವವರ
ಎಳೆತಂದು ಎಳೆ ಎಳೆಯಾಗಿ ಗರ ಬಿಡಿಸಿರೋ
ಗುರಿ ಇರದೆ ಸೆರೆಯ ಮತ್ತಿಳಿಯದೆ ಸಾಗರದಿ
ಸಾಗುತಿಹ ಕುಜನಗೆ ದಶಗುಣದಿ ಬೆವರಿಳಿಸಿರೋ

ಸುದ್ಧಿಯಲೇ ಗುದ್ದುತಾ ಸದ್ದಲೇ ನಡುಗಿಸೋ
ಟಿ ಆರ್ ಪಿ ಮಾಧ್ಯಮಕೆ ಮದ್ದನರೆಯಿರೋ 
ಸಿಹಿ ಬೆರಸಿ ಮಾತಿನಿಂದಲೇ ಮರುಳು ಮಾಡಿ
ಕಲಬೆರಕೆ ಧನವ ಅರಸುವವರ ಕಾಲ್ಮುರಿಯಿರೋ

ಬುಡಕಿಷ್ಟು ಪಡೆದು ತಲೆಮಾರಿಗೆಂದು ಹೊಡೆದು
ದುಡಿಯದೇ ಹಡಬೆ ರೊಕ್ಕವನುಂಡು ಕೊಬ್ಬಿದರೋ
ಬಡಜನರ ಬಡಿದು ಬಲು ಮೋಜು ನಡೆಸುವವರ
ಮಧವಿಳಿಸೆ ನಾವು ನಾವೆಂದು ಜೊತೆಗೂಡಿರೋ

ನಿತ್ಯ ನೋವನುಂಡು ನರಿಯಂತೆ ನೂರು ದಿವಸ ಬದುಕದೆಲೆ ಹುಲಿಯಂತೆ ಮೂರೇ ದಿನ ಬದುಕಿರೋ
ಸತ್ತಂತೆ ಮಲಗದೆಲೆ ಸುತ್ತಿರುವ ಹೆಬ್ಬಾವ ತೆರದಿ
ದುಷ್ಟ ಸಂತತಿಯನು ಹೆಡೆಮುರಿ ಕಟ್ಟೋಣ ಬನ್ನಿರೋ

ವೈ.ಕೊ
ವೈಲೇಶ ಪಿ ಯೆಸ್ ಕೊಡಗು
೧/೧೨/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು