ವಾದ ಸಂವಾದ

ವಾದ+ಸಂವಾದ
~`~`~`~`~`~`
ನಗುಮೊಗವ ನಗುತಾ ತೆರೆದಿಡುತಾ
ನಮ್ಮೊಳಗಿನ ತಿಳಿಗೇಡಿತನವನಟ್ಟುವ
ಮನದೊಳು ಕಾರ್ಕೋಟಕ ನಂಜು
ತುಂಬಿ ಅನ್ಯರೆಡೆಗೆ ಬಿಟ್ಟ ಬಾಣಗಳು
ತಿರುಗಿ ತರುತಿವೆ ವೃಣ ಕೀವು ಗಾಯಗಳು

ಗಾಜಿನ ಮನೆಯೊಳಗಡಗಿಹ‌ ತಾನು
ನೆರೆಮನೆಗೆ ಕಲ್ಲು ತೂರುವುದು ತರವೇನು
ಹೊಲಸೆಂದು ಅರಿತು ಕಾಲಿರಿಸುವುದು
ಅಡಿಕೆ ಕೊಟ್ಟು ಆನೆಯ ಪಡೆಯುವುದು
ಸರಿಯೇನು ಇದೇ ನಾವೇ ಪಡೆವ ವರವೇನು

ನಿಷ್ಠೆಯಿರಲಿ ಸೃಷ್ಟಿಯ ಮೂಲದೆಡೆಗೆ
ದಿಟ್ಟಿಯಿರಲಿ ನಮ್ಮದೇ ಗುರಿಯೆಡೆಗೆ
ಗೌರವವಿರಲಿ ಕಲಿಸಿದ ಗುರುವಿನೆಡೆಗೆ
ಧ್ಯಾನವಿರಲಿ ಹಿರಿ ಕಿರಿಯ ಸದಸ್ಯರೆಡೆಗೆ
ಎಲ್ಲಕೂ ಮಿಗಿಲಾಗಿ ಮಿತಿಯಿರಲಿ ಮಾತಿಗೆ

ವಾದ ಸಂವಾದ ವಿವಾದವಾಗಬೇಕಿಲ್ಲ
ಸಮಜಾಯಿಷಿ ಸಮಾಧಾನ ತಾರದಲ್ಲ
ಅಂತರಂಗ ಮೃದಂಗದ ತುಡಿತ ಮಿಡಿತ
ನಾಗರೀಕರ ಮನಕೆ ತರಿಸದಿರಲಿ ಅಹಿತ
ನಮಗೆ ನಾವೇ ವರವಾದರೆ ಸಕಲವೂ ಹಿತ

*ವೈ.ಕೊ*
ವೈಲೇಶ ಪಿ ಯೆಸ್ ಕೊಡಗು
೧೩/೧೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು