ಯಮ ಕೇಳ್ನಿಲ್ಲ

ಯಮ ಕೇಳ್ನಿಲ್ಲ
++++++++++
ನಡೆದು ಬಿಟ್ಟಿರಲ್ಲ ಬಲ್ಯಾಡರೆಲ್ಲ
ಯಾರ್ಗೂ ನೀವೇನು ಹೇಳ್ನಿಲ್ಲ
ನಿಮ್ಮೊಂದು ಮಾತ್'ಗೆ ಆನೆ ಬಲ
ಯಮ ನಿಮ್ ಮಾತ್ ಕೇಳ್ನಿಲ್ಲ

ನೀವ್ ಗಳಿಸದ್ ಹೆಸರು ನಿಮ್ನಾ
ಉಳಿಸ್ನಿಲ್ಲ ಉಳಿಸಿದ್ ನಿಮ್ಹಣಾ
ನಿಮ್ನ ಕಾಯ್ನಿಲ್ಲ. ನಿಮ್ದೇ ಹೆಸರು
ಈಗ ನಿಮ್ಗಿಲ್ಲ ಡೆಡ್ಬಾಡಿ ಅಂತಾವ್ರಲ್ಲ

ಕೋಟಿ ಕೋಟಿ ಹಣ ದುಡ್ದೋರು
ಲಕ್ಷ ಲಕ್ಷ ಅನುದಾನ ತಂದೋರು
ಅಮಾಯಕ ಮುಗ್ಧ ಮಕ್ಕಳ್ ಜೊತೆ
ಬಸ್ಸಿನಲ್ಲಿದ್ದೋರು ಮಣ್ಣಾಗ್ಬುಟ್ಟರಲ್ಲ

ಅವರಿವರೆಂಬ ಭೇದ ಯಮನಿಗಿಲ್ಲ
ನೀನು ನಾನು ಬೇರೆ ಅಲ್ಲವೇ ಅಲ್ಲ
ಜಲೀಲ ನಾನೂ ಬತ್ತೀನಿ ಒಸಿ ಇರ್ಲ
ಅಂತ ಮೂವತ್ತರ ಜತೆ ಇಬ್ರಾದ್ರಲ್ಲ

*ವೈ.ಕೊ*
*ವೈಲೇಶ ಪಿ ಯೆಸ್*
*೨೫/೧೧/೨೦೧೮*

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು