ನಿನ್ನ ಕನಸದು
ನಿನ್ನ ಕನಸದು
~~~~~~~
ಕರಿ ಜಂಪರಿನ ಕನಸು ಕಂಗಳ ಚೆಲುವೆ
ಸರಿ ಎನಿಸದ ವಯಸಲಿ ನಿನೀದ ಒಲವೆ
ಹದಿ ಹರೆಯದ ಸವಿ ನೆನಪುಗಳು ಕಾಡಿವೆ
ಮರಳಿ ತನುವಿಗೆ ಕಸುವು ಬರಲಾರದಾಗಿವೆ
ಬೊಮ್ಮನು ಹಸೆಯ ಬೆಸೆಯದೇ ಕಾಡಿದ
ಅಮ್ಮನೂ. ಸೊಸೆಯಾಗಿ ಎಂದೂ ಬಯಸದ
ನಮ್ಮೊಲವ ಸಸಿ ಬಾಡದಂತೆ ಬಿಸಿಲಿಗೆಂದು
ಬೀಳದಂತೆ ನೆರಳು ನೀಡಿದೆ ಬಲು ನೊಂದು
ಆದರೇನು ನೆರಳನರಿಯದೆ ಹೊರಗಿಣುಕಿ
ಸ್ವಾತಂತ್ರ್ಯವೆಂದೆನುತಾ ಸ್ವೇಚ್ಛೆಯಾ ಹುಡುಕಿ
ಇಚ್ಚೆಯ ಗೆಳತಿ ನಿಚ್ಚಳದಿ ಹೊರ ನಡೆದಾಗ
ಪೆಚ್ಚಾಗಿ ನಿಜ ಹುಚ್ಚನಂತಾಗಿದ್ದೆ ನಾನಾಗ
ನಿಜವರಿತಾಗ ಬೀದಿಗೆ ಬಿದ್ದ ನನ್ನೊಲವೆ
ನನ್ನ ಕಣ್ಣೆವೆಯಲಿ ಚಿಮ್ಮುವ ಕುಸುಮವೇ
ನಿನ್ನ ಕನಸದು ನನಸಾಗದೇ ಕುಣಿಯುತ್ತಿವೆ
ನನ್ನೆದೆ ಪಪ್ಪುಸದಿ ಕಪ್ಪು ಕುಪ್ಪಸದ ಉಸಿರಿವೆ
ವೈ. ಕೊ.
ವೈಲೇಶ ಪಿ ಯೆಸ್ ಕೊಡಗು
೨೯/೧೧/೨೦೧೮
Comments
Post a Comment