ಮೀ ಟೂ ಅಲ್ಲ WE TOO
ಮೀ ಟೂ ಅಲ್ಲ WE TOO
~~~~~~~~~~~~~
ಅಂದಿನನುಗುಣಕೆ ಅನುರಣಕೆ ಮನಬಿಚ್ಚಿ
ಮೈಮರೆಯದೇ ಮೈತೆರೆದು ಮೈಮುರಿದು
ಮಾನಾಪಮಾನವನೆಣಿಸದೇ ಸಕಲವನೂ
ದಾಟಿ ಎನಗಾರು ಸಾಟಿಯೆಂದು ಮೆರೆದು
ಅಗತ್ಯವು ಮುಗಿದು ಮತಿಯು ಹೊಳೆದು
ತನದೇ ಪಾಪವ ತೊಳೆವ ಭರದಲಿ ಹೊಳೆವ
ಮುತ್ತಗಳನೆಸೆದು ಕಲ್ಲು ಕೊಂಡರೇ ಮೇರು
ನಕ್ಷತ್ರಗಳು ಕೆಲವರಿಗಿಂದು ನಕ್ಷತ್ರಿಕರಾದರೇ
ವಿಷಯ ಲಂಪಟತನಕೆ ಸಿಲುಕಿ ನನ್ನಾಸೆ
ನಿನ್ನಾಸೆ ಒಂದೆಂದು ಅಂದಂದುದ ಮರೆತು
ಅಂದವು ಮಾಸಿ ಅಂದಿನ ಹುಚ್ಚಾಟವನು
ಮೆಲುಕುವ ವೇಳೆಗೆ ಜ್ಞಾನೋದಯ ಹಲವಗೆ
ಎಲ್ಲಿ ಯಾರು ಬರೆವರೋ ಅಪಸವ್ಯಗಳನೆಂದು
ನಿದಿರೆಯಿಂದೆದ್ದು ಕುಳಿತು ಹಲುಬುವ ಹಲವರು
ಮುಂಜಾನೆಗೂ ಮುಂಚೆಯೇ ಪತ್ರಿಕೆ ಟ್ವಿಟರ್
ಫೇಸ್ ಬುಕ್ ತಡಕುವ ವೀರರು ವನಿತೆಯರು
ಕಳ್ಳಾಟ ಮಳ್ಳಾಟಗಳ ತೊರೆದು ಮೀರದೇ ಮನದ
ಹತೋಟಿ ತನುವಿಗೂ ಮುನ್ನ ಮನವನು ಮೀಟಿ
ಹೊಲಸಿಗೆಂದಿಂದಿಗೂ ತೆರೆದುಕೊಳದೇ me too
ಎಂದೆನಿಕೊಳುವ ಸಭ್ಯತನಕೆಂದಿಗೂ ಹೇಳಿ we too
ವೈಲೇಶ ಪಿ ಯೆಸ್ ಕೊಡಗು
೨೪/೧೦/೨೦೧೮
Comments
Post a Comment