ಎನ್ನೆದೆಯ ತಿದಿ
ಚಿತ್ರ ಕವಿತೆಯ ಸ್ಪರ್ಧೆಗಾಗಿ
ಎನ್ನೆದೆಯ ತಿದಿ
•~•~•~•~•~•
ಇಬ್ಬಗೆಯ ಪಯಣದಲಿ ನಾವೀರ್ವರ
ಮಿಲನ ಸಾಧ್ಯವೇ ಸಾಧುವೇ ಪೋರ
ಬೇಲೂರ ಶಿಲಾಬಾಲಿಕೆಯ ಮನದಾದರ
ಅರಿಯದಾದೆಯಾ ನವಯಗದ ಮಾರ
ಎನ್ನೆಡೆಗೊಂದು ಕಣ್ಣೋಟ ಸೇರಿಸದೇ ಹೋದೆ
ಮರುಗಿ ಕೊರಗಿ ತಿರಿದರೂ ನೀನರಿಯದಾದೆ
ನಿನ್ನ ವದನಾರವಿಂದದಂದ ಎನ್ನೆದೆಯ ತಿವಿದು
ಹೃದಯ ಕದ್ದೊಯ್ದುದ ನಾನರಿಯದೇ ಹೋದೆ
ನಿನ್ನ ಮೈಮಾಟದಲಿ ಅದಾವ ಮೋಡಿಯ
ನೀ ಮಾಡಿದೆಯೋ ಈ ಅಂಗನೆಯಂಗಾಂಗವೂ
ಬಾರಿಸುತ್ತಿದೆ ಮೃದಂಗದ ಜೊತೆ ರಂಗಗೀತೆ
ತಿಳಿಯದಾಗಿದೆ ನಾನೇಕೆ ನಿನಗ್ಹೇಗೆ ಸೋತೆನೆಂದು
ನಿನ್ಬೆರಳಿನೆಡೆಗೆ ಸಿಲುಕಿದ ಎನ್ನೆದೆಯ ತಿದಿಯ
ಬಿಸಿ ನೆತ್ತರ ಕಡೆಗೊಮ್ಮೆ ಕಣ್ಣರಳಿಸಿ ಸುಟ್ಟುಬಿಡು
ನಿನ್ನ ಮನದಲಡಗಿರುವ ನೀರ್ಗಲ್ಲುಗಳಿಗೆ
ಸುಡುವ ಸೂರ್ಯನ ಬೇಗೆ ತಟ್ಟಿಬಿಡಲಿ
ನನ್ನುಸಿರು ನಿನ್ಹೆಸರಲಿ ಇಲ್ಲೇ ಬೆರತು ಬಿಡಲಿ
*ವೈ.ಕೊ*
*ವೈಲೇಶ ಪಿ ಯೆಸ್ ಕೊಡಗು*
*೨೦/೧೦/೨೦೧೮*
Comments
Post a Comment