ಕರುಣೆಯ ಕಡಲು

ಕರುಣೆಯ ಕಡಲು
~~~~~~~~~~
ಅಮ್ಮನೊಲವ ಬಲ್ಲಿರೇನು ಮಮತೆಯ ಕಣ್ಣಿಗೆ
ಕಾಣುವ ಸಕಲವೂ ಕಂದನಂತೆಯೇ ಅಲ್ಲವೇನು
ಹಸಿದಿಹ ಕಂದ ತನ್ನದಾದರೇನು ಅನ್ಯರದಾದರೇನು
ಸ್ತನ್ಯಪಾನಕೂ ಅನ್ಯಪಾನವಿಲ್ಲವೆಂದವಳು ಅಮ್ಮ

ಅಕ್ಷಿಗರಿಯದ ಅನುಬಂಧ ಹೃದಯಕೆ ಅರಿತಿದೆ
ಮಾನವ,ಪ್ರಾಣಿ ಎಂಬ ಭೇದಕೂ ಮಿಗಿಲಾಗಿ
ಹಸಿವಿಗೆ ಅರಳುವ ತಾಯ್ತನವೇ ಮೆರೆದಿದೆ
ಹಸಿವರಿತ ಮಾತೆಯಿವರು ದೇವತೆಗೂ ಮಿಗಿಲು

ಕರುವ ಕ್ಷೀರವ ಕರೆದು ಕುಡಿವೆಮಗೆ
ಅಮ್ಮಾ ಎಂದಳುವ ಚಿಗರೆಮರಿಯ ಬೇಡಿಕೆ
ಅರಿಯದಾಗಿದೆ. ಬಡತನಕೆ ಸಿಲುಕಿ ಬಡವಾದ
ಒಡಲಿಗೆ ಎಳೆಗರುವ ಕರುಳಕೂಗಿನ ಅರಿವಾಗಿದೆ

ಈ ತಾಯಿಯ ಮಡಿಲು ಭೂದೇವಿಯೊಡಲು
ಎದೆಯ ತುಂಬಾ ತುಂಬಿದೆ ಕರುಣೆಯ ಕಡಲು
ಬಡಿವಾರದ ಬಡಬಡಿಕೆಗೆ ಶರೀರವಿದು ಬಡಕಲು
ಕೋಟಿಗೊಬ್ಬರು ಇವರು ನಿಜಕೂ ಹುಡುಕಲು

ಅಮ್ಮನೆಂಬ ಸುಮ ನಿಮಗಿಂದು ಯಾರು ಸಮ
ಜಗದೊಳಗ ಜಾತಿ ಬೇಧಗಳ ಮೀರಿದ ಮರ್ಮ
ವಸುಂಧರೆಯೇ ಹೆಣ್ಣಾಗಿ ಮರುಳು ಜಗದ
ಕಣ್ಣಾಗಿಹ ಮಹಾ ಮಾತೆಯೇ ನಿಮಗಿದೋ ನಮನ

*ವೈ.. ಕೊ..*
*ವೈಲೇಶ ಪಿ ಯೆಸ್ ಕೊಡಗು*
*೧೧/೧೦/ ೨೦೧೮*

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು