ಮುಳುಗದು ಕೊಡಗು

ಮುಳುಗದು ಕೊಡಗು
~~~~~~~~~~~
ಗೆಳೆಯ ಮುಳುಗಿ ಹೋಗದೆಂದಿಗೂ ಕೊಡಗು
ನಡುಗಿದೆಯಷ್ಟೇ ಬಹ್ಮಗಿರಿ ಗಿರಿಸಾಲಿನ ಸೆರಗು
ಅಪಾರ ನಷ್ಟಕೆ ಸಿಲುಕಿರುವುದೇ ಕೊರಗು
ಜೀವಹಾನಿ ಕಡಿಮೆಯಿರುವುದೇ ನಿಜದ ಬೆರಗು

ವರುಣನ ಕರುಣೆಯು ಇಳೆಗೆ ಉರುಳಾಗಿ
ಹರಿಯುವ ಜಲವು ದಕ್ಕಿದೆಡೆಗೆ ಹಾದಿಯಾಗಿ
ಬುವಿಯೊಳಗೆ ನಡುಗಿದ ರಭಸಕೆ ಬಿರಿದ್ಹೋಗಿ
ಮುಂಗೈ ಗಾತ್ರದ ನೀರು ತೊರೆ ಹರಿದಂತಾಗಿ

ಅಂತರ್ಜಲದ ಬುಗ್ಗೆ ಮೇಲ್ಗಡೆ ಚಿಮ್ಮಲು
ಗಿರಿಗುಡ್ಡಗಳು ಬಿರಿದ್ಹರಿದು ಸಾಗುತಿರಲು
ಗೋಚರವು ಅಕ್ಷಿಗೆ ಹರಿದಿದೆಯೇನೋ ಕಡಲು
ಮರಳೊಳು ಮುಳುಗಿ ಗದ್ದೆ ತೋಟದೊಡಲು 

ನಲುಗಿತು ಹಲಕೆಲವರ ಬದುಕಿನ ಬಯಲು
ದಾರಿ ಕಾಣದೇ ನಡೆದರನೇಕರು ಹಗಲಿರುಳು
ಮುಂದಿನ ಜೀವನ ಕಟ್ಟಿಕೊಳ್ಳುವ ಭರದೊಳು
ಅಕ್ರಮ ಅಸಹ್ಯಗಳಿಗೆ ರತ್ನಗಂಬಳಿ ಧರೆಯೊಳು

ವೈಲೇಶ ಪಿ ಯೆಸ್ ಕೊಡಗು
೩/೧೦/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು