ನನ್ನಾಕೆ
೧ ನನ್ನಾಕೆ
~~~~~~
ಗೆಳತಿ ಬಾಳ ಒಡತಿ ಈಕೆ ಹೆಂಡತಿ
ಗೆಳೆತಿ ನಿನ್ನಿಂದಾದೆನು ನಾ ಸುಮತಿ
ಗೆಲುವ ತಂದ ರತಿ ಮನೆಗೆ ಆರತಿ
ಮನೆಯ ಏಳ್ಗೆ ಎಂದರೆ ಮಿಡಿಯುತಿ ||
ಮನೆಯ ಎಲ್ಲಾ ಆಗು ಹೋಗು ಕಾಣುತಿ
ಮಕ್ಕಳು ಮರಿಗಳು ಬಾಳಿನಲಿ ನೀಡುತಿ
ಅತ್ತೆ ಮಾವರ ಆರೈಕೆ ಬಾರಿ ಜೋರೈತಿ
ಅವಸರದಿ ಆರ್ಥಿಕ ಹೊಣೆಯು ನಿಂದೈತಿ
ಅರಿವೆ ಆರಿಸಲು ಅಂದು ಗುರುವಾದೆ
ಅನ್ನವ ಬಡಿಸಲು ಅಡಿಗೆಯ ಆಳಾದೆ
ಉಡುಗೆ ತೊಡುಗೆ ನೀಡುವವಳಾದೆ
ಅದರಿಂದಲೇ ದುಡಿಯುವ ಹಾಗಾದೆ
ಅವರಿವರ ದೃಷ್ಟಾಂತ ನಮಗೇತಕೆ ಎಂದೆ
ಏಕಾಂತದಿ ಮಧುವಂತ ಸವಿಯ ಎನಗೀದೆ
ನೀ ಬಳಿಯಿದ್ದರೆ ಸುಮಧುರ ಸ್ವರ ಎನ್ನೆದೆ
ಸಪ್ತ ಜನುಮಕೂ ನೀ ನನ್ನಾಕೆ ಸತಿ ಎಂದೆ
ವೈಲೇಶ ಪಿ ಯೆಸ್ ಕೊಡಗು
ಕರಾರಸಾಸಂಸ್ಥೆ ಮಡಿಕೇರಿ ಚಾಲಕ
೩೮/೯/೨೦೧೭
Comments
Post a Comment