ಮರೆತರೆ ಧ್ಯಾನ
ಮರೆತರೆ ಧ್ಯಾನ
~~~~~~~~
ಬಡವನೆದುರು ಬಡವರಂತೆ ಧನಿಕರೆದುರು
ಧನಿಕರಂತೆ ನಟಿಸುತಾ ಬದುಕುವ ನಾವೆಲ್ಲರೂ
ನಮ್ಮ ಮಕ್ಕಳಿಗೆ ಕೊಟ್ಟ ಸಂದೇಶದ ಪೊಗರು
ಅರಿಯದಾದೆವೇ ನಾವೆಂತಹ ಪೋಷಕರು
ಎನಿಸುತಿದೆ ನಮಗೆ ಎಂದಾದರೂ
ಹೊರದೇಶದ ಎನ್ನಮ್ಮನ ಕಡೆಯವರು ನಮ್ಮಬವಣೆಯ ಪ್ರದರ್ಶನ ಅವರೆದುರು
ಬೇಡವೆಂದು ಕಡ ತಂದು ಕೇಳದಿದ್ದರೂ ಭೂರಿ
ಭೋಜನ ಬಡಿಸಿದೆವು ಬಿಸ್ಕತ್ತು ಪೊಟ್ಟಣವಾದರೂ
ತಾರದೇ ಹೋದರವರು
ಅಮೂಲ್ಯ ಪದಾರ್ಥಗಳ ಬಚ್ಚಿಟ್ಟು ನಮ್ಮದೇ
ಬವಣೆಗಳನು ಬಿಚ್ಚಿಟ್ಟು ಅಂಬಲಿ ಗಂಜಿಯನೇ
ಬಡಿಸಿದೆವು. ಬಾವನ ನಿರ್ಗಮನದ ಬಳಿಕ ತಿಂಗಳು ತಿಂಗಳ ಚೀಲದ ತುಂಬಾ ತರಕಾರಿ ಹಣ್ಣುಗಳು ನಾವವರಿಗೆ ಬಡಿಸಿದೆವು ಬರಿಯ ತಂಗಳು
ಹಣವಿದ್ದರೆ ನಮಗೆ ಬೆಲೆ ಇಲದಿರೆ ಇರದು
ನೆಲೆ ಎಂದರಿತ ಸುತರವರು ಪಟ್ಟಣಿಗರಾದರು
ಪೆಟ್ಟಿಗೆ ತುಂಬಾ ತುಂಬಿದೆ ಝಣ ಝಣ ಹಣ
ಬಂಧುಗಳು ಪೋಷಕರು ಇವರ ಕಣ್ಣಗೀಗ ಹೆಣ
ಅತ್ತು ಕರೆದು ಬಿಟ್ಟರೇನು ಪ್ರಾಣ
ಹಣಕೆಂದು ನೀಡಿದರೆ ಮಾನ ಬಹುಮಾನ
ನಮಗೆ ನಾವೇ ಕೊಡಮಾಡುವ ಅವಮಾನ
ಸತಿಸುತರೂ ನೀಡಲಾರರು ಸವಿ ಸನ್ಮಾನ
ಮರಣದ ಬಳಿಕವೂ ಕಾಡದಿರದು ಇದೇ ಗ್ಯಾನ
ಮರೆಯಬಾರದೀ ಧ್ಯಾನ
ವೈ.ಕೊ.
ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕ ರಾ ರ ಸಾ ಸಂಸ್ಥೆ
ಮಡಿಕೇರಿ
೨೪/೯/೨೦೧೮
Comments
Post a Comment