ಮನೆ ಮನೆ ಕವಿಗೋಷ್ಟಿ
ಆತ್ಮೀಯ ಬಂಧುಗಳೇ ಮನೆ ಮನೆ ಕಾವ್ಯಗೋಷ್ಟಿಯೆಂದರೆ ಪ್ರತಿ ತಿಂಗಳ ಎರಡನೇ ಭಾನುವಾರ ಕೊಡಗಿನ ಲಭ್ಯವಿರುವ ಎಲ್ಲಾ ಕವಿಮನಗಳು ಮೊದಲೇ ನಿಗದಿತಗೊಂಡಿರುವ ಕವಿ/ಕವಯತ್ರಿಯರ ಮನೆಯಲ್ಲಿ ಅಥವಾ ಕವಿ ಕವಯತ್ರಿಯರ ಮನೆಯಲ್ಲಿ ಅನುಕೂಲ ಇಲ್ಲದ ಪಕ್ಷದಲ್ಲಿ ಅವರ ಊರಿನ ದೇವಾಲಯ ಅಥವಾ ಸಮುದಾಯ ಭವನ ಅಥವಾ ಅಂಗನವಾಡಿ ಯಾವುದಾದರೂ ಸರಿಯೇ ಅಂದು ಹಾಜರಿರುವ ಅಷ್ಟು ಜನಗಳಿಗೆ ಚಾಪೆ ಅಥವಾ ಬೆಂಚು ಕುರ್ಚಿಯ ವ್ಯವಸ್ಥೆ ಇದ್ದರೆ ಸಾಕು. ಇನ್ನು "ಮನೆ ಮನೆ ಕಾವ್ಯಗೋಷ್ಟಿ ಕೊಡಗು " ಎಂಬ ಚಿಕ್ಕ ಬ್ಯಾನರ್ ಸಾಕು ಮೈಕ್ ಬೇಕಿಲ್ಲ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಮೊದಲ್ಗೊಂಡು ಮುಂದುವರಿಸಬೇಕಿದೆ. ಪೋಟೋ ಧಾರಾಳವಾಗಿ ತೆಗೆದುಕೊಳ್ಳಬಹುದು. ಯಾವುದೇ ರೀತಿಯ ಮೆಮೆಂಟೋ ಅಥವಾ ಅಭಿನಂದನಾ ಪತ್ರಗಳು ಇರುವುದಿಲ್ಲ. ಬಳಗದ ಪ್ರತಿಯೊಂದು ಸದಸ್ಯರು ಬಂದರೆ ಅನುಕೂಲ ಬಾರದಿದ್ದರೂ ಸಹ ಹಾಜರಿರುವ ಸದಸ್ಯರು ಸೇರಿ ಕಾರ್ಯಕ್ರಮ ಚಾಲನೆ ಮಾಡಬೇಕಿದೆ.
ಹಾಜರಾದ ಸದಸ್ಯರ ಹಾಜರಾತಿಯನ್ನು ಪುಸ್ತಕದಲ್ಲಿ ಪಡೆಯಬೇಕಿದೆ. ಕಾರ್ಯಕ್ರಮದ ಪ್ರಾಯೋಜಕರು ( ಅಂದರೆ ಯಾರ ಮನೆಯಲ್ಲಿ ಆ ತಿಂಗಳ ಕಾರ್ಯಕ್ರಮ ನಡೆಯುತ್ತದೆಯೋ ಅವರೆ ಆ ತಿಂಗಳ ಪ್ರಾಯೋಜಕರು) ಮನಃಪೂರ್ವಕವಾಗಿ ನೀಡಿದ ಅತಿಥಿ ಸತ್ಕಾರವನ್ನು ನಿರಾಕರಿಸದೇ ಸ್ವೀಕರಿಸಿ ಗೌರವಿಸುವ ಭಾವನೆ ಎಲ್ಲರಲ್ಲೂ ಇರಲಿ.
ಅದೇ ದಿನ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಮುಂದಿನ ಪ್ರಾಯೋಜಕರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಅಥವಾ ಅದಕ್ಕಿಂತ ಮೊದಲು ಮ.ಮ. ಕಾ. ಕೊ. ಬಳಗದಲ್ಲಿ ಪ್ರಾಯೋಜಕರಾಗುವ ಬಗ್ಗೆ ಮಾಹಿತಿ ಕೊಡಬಹುದು. ಬಳಗದ ಎಲ್ಲಾ ಸದಸ್ಯರಿಗೂ ಪ್ರಾಯೋಜಕರಾಗುವ ಅವಕಾಶ ಇದೆ.
ಇದೇ ೧೧/೧೧/೨೦೧೮ ಭಾನುವಾರ ಸಮಯ ೧೦:೦೦ ಗಂಟೆಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮದ ಸಮುದಾಯ ಭವನದಲ್ಲಿ ಮೊದಲ ಮನೆ ಮನೆ ಕಾವ್ಯಗೋಷ್ಟಿ ಬಳಗದ ಕಾರ್ಯಕ್ರಮವನ್ನು ಶ್ರೀಮತಿ ಮುಲ್ಲೆಂಗಡ ಬೇಬಿ ಚೋಂದಮ್ಮ ಇವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀಯುತ ಬಿ ಎಸ್ ಲೋಕೇಶ್ ಸಾಗರ್ ಅಧ್ಯಕ್ಷರು ಕೊಡಗು ಜಿಲ್ಲಾ ಕ.ಸಾ.ಪ. ಇವರ ಅಮೃತ ಹಸ್ತದಲ್ಲಿ ಉದ್ಘಾಟನೆ ಮಾಡಲು ಆಶಿಸಿದ್ದೇವೆ. ಆ ದಿನದ ಮತ್ತು ಆ ಕ್ಷಣದ ಸಾಕ್ಷಿಯಾಗಿ ಮುಖ್ಯ ಅತಿಥಿಗಳಾಗಿ ಮುಲ್ಲೆಂಗಡ ಮಧೋಷ್ ಪೂವಯ್ಯನವರು ಹಾಗೂ ಇನ್ನೂ ಹಲವರ ಜೊತೆಗೆ ಮನೆ ಮನೆ ಕವಿಗೋಷ್ಠಿ ಬಳಗ ಕಂಪ್ಲಾಪುರ ಖ್ಯಾತಿಯ ಮೋಹನ್ ಕಂಪ್ಲಾಪುರ ಇವರು ಸಹ ಇರುವರು.
ಆ ದಿನ ಬಳಗದ ಉದ್ಘಾಟನೆ, ಕವಿಗೋಷ್ಠಿ, ಸಾಧಕರಿಗೆ ಮತ್ತು ಹಿರಿಯ ನಾಗರೀಕರಿಗೆ ಸನ್ಮಾನ ಮತ್ತು ವಿರಾಜಪೇಟೆಯ ಕವಯತ್ರಿ ಶ್ರೀಮತಿ ಪುಷ್ಪಲತಾ ಶಿವಪ್ಪನವರ ಕವನ ಸಂಕಲನ ಮತ್ತು ಕೊಡಗಿನ ಖ್ಯಾತ ಸಾಹಿತಿ ಕವಿಗಳಾದ *ಕೆ. ಭಾರಧ್ವಜ್ ಆನಂದ ತೀರ್ಥ ಇವರ "ನೀರು ನುಗ್ಗಿದ ಮೇಲೆ" ಪ್ರಬಂಧ ಸಂಕಲನ ಕೂಡ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.
ಭಾಗವಹಿಸಿದ ಎಲ್ಲಾ ಕವಿಮಿತ್ರರುಗಳಿಗೆ ಪ್ರಶಂಸನಾ ಪತ್ರ, ಪುಸ್ತಕ ಉಡುಗೊರೆ, ಮಧ್ಯಾಹ್ನದ ಲಘು ಭೋಜನ ವ್ಯವಸ್ಥೆ ಮಾಡಲಾಗಿದೆ. ಕೊಡಗಿನ ಎಲ್ಲಾ ಕವಿ ಕವಯತ್ರಿ ಮಿತ್ರರು ಹಾಗೂ ಇತರ ಜಿಲ್ಲೆಯ ಕವಿಮಿತ್ರರಲ್ಲಿ ತಮ್ಮ ಬಳಗದ ಕಾರ್ಯಕ್ರಮವಿದು ತಪ್ಪದೇ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಲು ಪ್ರೀತಿಯ ಕೋರಿಕೆ
ಮುಂದಿನ ವಿವರಗಳನ್ನು ನಿಧಾನವಾಗಿ ನೀಡುವೆ
ಎಂದೆಂದಿಗೂ ತಮ್ಮವ
Comments
Post a Comment