ಗಝಲ್ : ೪೪
ಗಝಲ್ : ೪೪
ಒಡಹುಟ್ಟುಗಳೆಡೆಯಲಿ ಅರಳಿದ ಕುಸುಮಗಳು ನಾವಲ್ಲವೇ ಅಣ್ಣ
ಬಡಪೆಟ್ಟಿಗೆ ಎಮ್ಮ ಸೋಲಿಸೆ ಸೋತು ಹೋದವ ನೀನಲ್ಲವೇ ಅಣ್ಣ
ನಡು ನೀರಿನಲಿ ಅಪ್ಪ ಕೈ ಬಿಟ್ಟು ಹೋದಾಗ ಆಲದ ಮರವಾದೆ
ಅಕ್ಕ ತಂಗಿಯರನ್ನೆಲ್ಲಾ ಸಂತೈಸಿ ಸಲಹಿ ದೇವನಾದೆಯಲ್ಲವೇ ಅಣ್ಣ
ಹಿರಿ ಮಗ ನೀನಾಗಿ ತಲಬಾಗಿಲಂತೆ ನಮ್ಮೆಲ್ಲರ ಕಾಯ್ದವನು ನೀನು
ಬಡವ ನಾನೆಂದು ನೊಂದುಕೊಳದೇ ತಾಳಿ ಕಟ್ಟಿಸಿದೆಯಲ್ಲವೇ ಅಣ್ಣ
ಹತ್ತಿರದಲಿ ನೀನಿರದಿದ್ದರೇನು ನಿಜದೊಲುಮೆಯು ಪೊರೆದಿದೆಯಲ್ಲ
ದೂರದಲ್ಲಿದ್ದರೂ ಮನದೊಳಗೊಂದು ಜಾಗ ಇಟ್ಟಿರುವೆಯಲ್ಲವೇ ಅಣ್ಣ
ಸಿಡಲನ ಮನೆ ಮನ ಬೆಳಗಲೆಂದು ಬಂದು ನಿಂದವಳು ನಾನಾದರೇನು
ಜನುಮ ನೀಡಿದ ತವರ ಕಡೆಗೆ ಎನ್ನ ಮನ ತುಡಿಯುವುದಲ್ಲವೇ ಅಣ್ಣ
*ಸಿಡಿಲು*
*ವೈಲೇಶ ಪಿ ಯೆಸ್ ಕೊಡಗು*
*೫/೧೦/೨೦೧೮*
Comments
Post a Comment